More

    ಮೂರು ಅನಧಿಕೃತ ಪಟಾಕಿ ಅಂಗಡಿ ಸೀಜ್

    ಸುರಪುರ : ಪಟಾಕಿ ಮಾರುವ ಪರವಾನಗಿ ಇಲ್ಲದ ಅಂಗಡಿಗಳ ಮೇಲೆ ತಹಸೀಲ್ದಾರ್ ನೇತೃತ್ವದ ತಂಡ ನಗರದಲ್ಲಿ ದಿಢೀರ್ ದಾಳಿ ಮಾಡಿ ಮೂರು ಅಂಗಡಿಗಳನ್ನು ಬುಧವಾರ ಸೀಜ್ ಮಾಡಿತು.


    ಇತ್ತೀಚೆಗೆ ಬೆಂಗಳೂರಿನ ಹೊರವಲಯದಲ್ಲಿ ಪಟಾಕಿಯಿಂದ ನಡೆದ ಅವಘಡದಿಂದ ೧೪ ಜನರು ಸಜೀವ ದಹನವಾಗಿದ್ದು, ಇಂಥಹ ಘಟನೆ ಮರುಕಳಿಸಿದಂತೆ ರಾಜ್ಯ ಸರ್ಕಾರದ ಆದೇಶದ ಮೇರೆಗೆ ತಾಲೂಕಿನಲ್ಲಿ ಪರವಾನಗಿ ಇಲ್ಲದ ಪಟಾಕಿ ಅಂಗಡಿಗಳ ಮೇಲೆ ಕಂದಾಯ, ಪೊಲೀಸ್ ಮತ್ತು ಅಗ್ನಿಶಾಮಕ ದಳದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಅಧಿಕಾರಿಗಳು ಕಾಲ್ನಡಿಗೆಯಲ್ಲಿ ಬಂದು ತರಕಾರಿ ಸಮೀಪದ ಬಳಿ ಇರುವ ಪಟಾಕಿ ಅಂಗಡಿ ಮೇಲೆ ದಾಳಿ ಮಾಡಿ, ಪಟಾಕಿ ಮಾರುವ ಪರವಾನಿಗೆ ಕೊಡುವಂತೆ ಕೇಳಿದಾಗ ಇಲ್ಲ ಎಂದು ವ್ಯಾಪಾರಿ ಉತ್ತರಿಸಿದ. ಆದರೆ ಅಂಗಡಿ ತುಂಬ ಪಟಾಕಿ ಇರುವುದನ್ನು ಗಮನಿಸಿದ ಅಧಿಕಾರಿಗಳು ಜನಸಂದಣಿಯುಳ್ಳ ಪ್ರದೇಶದಲ್ಲಿ ಅಂಗಡಿ ಇದ್ದಿದ್ದರಿಂದ ಮುಲಾಜಿಲ್ಲದೆ ಎರಡು ಅಂಗಡಿಗಳಿಗೆ ಸೀಜ್ ಮಾಡಿದರು. ಅಲ್ಲಿಂದ ದರಬಾರ ರಸ್ತೆಯ ಇನ್ನೊಂದು ಅಂಗಡಿ ಮೇಲೆ ದಾಳಿ ಮಾಡಿ ಅಲ್ಲಿಯೂ ಪಟಾಕಿ ಇರುವುದನ್ನು ಕಂಡು ಸೀಜ್ ಮಾಡಲಾಯಿತು.

    ನಂತರ ಮಾತನಾಡಿದ ತಹಸೀಲ್ದಾರ್ ಕೆ.ವಿಜಯಕುಮಾರ, ತಾಲೂಕಿನಲ್ಲಿ ಪರವಾನಗಿ ಇಲ್ಲದೆ ಪಟಾಕಿ ಮಾರುವ ಅಂಗಡಿಗಳ ಮೇಲೆ ಇನ್ನೂ ಮೂರು ದಿನಗಳ ಕಾಲ ದಾಳಿ ಮಾಡಿ, ನಂತರ ಸಮಗ್ರ ವರದಿಯನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಲಾಗುವುದು. ಪಟಾಕಿ ಸಂಗ್ರಹ, ಸಾಗಣೆ, ಮತ್ತು ಮಾರಾಟ ಮಾಡುವ ಪರವಾನಗಿ ಕಡ್ಡಾಯವಾಗಿ ಹೊಂದಿರಬೇಕು. ಹಾಗೊಂದು ವೇಳೆ ಇಲ್ಲದಿದ್ದರೆ ಮುಲಾಜಿಲ್ಲದೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

    ಪಿಐ ಆನಂದ ವಾಗ್ಮೋಡೆ, ಪೊಲೀಸ್ ಪೇದೆಗಳಾದ ಶಿವರಾಜ, ನಂದಪ್ಪ, ದಯಾನಂದ ಜಮಾದಾರ, ಕಂದಾಯ ನಿರೀಕ್ಷಕ ಬಸವರಾಜ ಬಿರಾದಾರ, ಗ್ರಾಮ ಆಡಳಿತ ಅಧಿಕಾರಿಗಳಾದ ದುಷತ್‌ಕಮ್ಮಾರ್, ಪ್ರದೀಪಕುಮಾರ ನಲವಾಡೆ, ಸರ್ವೇ ಅಧಿಕಾರಿ ಶಿವಾನಂದ ಗೋಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts