More

    ಮುಸ್ಲಿಂ ಬಾಂಧವ್ಯ ವೇದಿಕೆಯಿಂದ  ಆದಿಚುಂಚನಗಿರಿ ಶ್ರೀ ಸೌಹಾರ್ದ ಭೇಟಿ 

    ದಾವಣಗೆರೆ: ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಸಂಘಟನೆಯ ಪದಾಧಿಕಾರಿಗಳು ಇತ್ತೀಚಿಗೆ ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿದರು.
    ಮುಸ್ಲಿಂ ಸಾಹಿತಿ, ಲೇಖಕರು, ಚಿಂತಕರನ್ನು ಒಳಗೊಂಡ ಸಂಘಟನೆಯು ಒಂದು ವರ್ಷ ಪೂರೈಸಿದ್ದು ಮುಂಬರುವ ದಿನಗಳಲ್ಲಿ ರಾಜ್ಯದ ವಿವಿಧೆಡೆ ಎಲ್ಲ ಸಮಾಜಗಳ ನಡುವೆ ಬಾಂಧವ್ಯ ಬೆಸೆಯುವ ಜತೆಗೆ ಸಾಮರಸ್ಯ ರೂಪಿಸುವ ಕಾರ್ಯಕ್ರಮಗಳ ಆಯೋಜನೆ ಕುರಿತಂತೆ ಸ್ವಾಮೀಜಿ ಅವರೊಂದಿಗೆ ಪದಾಧಿಕಾರಿಗಳು ಚರ್ಚಿಸಿದರು.
    ಸಂಘಟನೆಯ ಉದ್ದೇಶ, ಕಾರ್ಯ ಮತ್ತು ಸ್ವರೂಪದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಸ್ವಾಮೀಜಿ, ಸಮುದಾಯಗಳ ನಡುವೆ ಕಾರಣಾಂತರಗಳಿಂದ ಉದ್ಭವವಾಗುವ ಸಮಸ್ಯೆಗಳನ್ನು ನಿಭಾಯಿಸಲು ಮತ್ತು ಸೂಕ್ತ ಸಂಪರ್ಕ ಸಾಧಿಸಲು ಇಂತಹ ಪ್ರಬುದ್ಧರ ವೇದಿಕೆಗಳು ಅವಶ್ಯಕ ಎಂದು ಹೇಳಿದರು.
    ಆದಿಚುಂಚನಗಿರಿ ಮಠ ಮತ್ತು ಮುಸ್ಲಿಂ ಸಮುದಾಯದ ಬಾಂಧವ್ಯದ ನಡುವೆ ದೊಡ್ಡ ಪರಂಪರೆ ಮತ್ತು ಇತಿಹಾಸವಿದೆ. ಈ ವೇದಿಕೆಯು ರಾಜಕೀಯ, ಸಾಮಾಜಿಕ ಮತ್ತು ಧಾರ್ಮಿಕ ವಿಚಾರಗಳಲ್ಲಿ ಸಮುದಾಯವನ್ನು ಸೂಕ್ತ ರೀತಿಯಲ್ಲಿ ಪ್ರತಿನಿಧಿಸುವ ವಿಶ್ವಾಸವಿದೆ ಎಂದು ಹೇಳಿದರು.
    ನಿಯೋಗದಲ್ಲಿ ಸಂಘಟನೆ ಅಧ್ಯಕ್ಷ ಅನೀಸ್ ಪಾಷಾ, ಕಾರ್ಯದರ್ಶಿ ಮುಸ್ತಾಕ್ ಹೆನ್ನಾಬೈಲ್, ಖಜಾಂಚಿ ಮುಬಾರಕ್ ಗುಲ್ವಾಡಿ, ನಜೀರ್ ಬೆಳುವಾಯಿ, ರಶೀದ್ ಉಪ್ಪಿನಂಗಡಿ, ಚಮನ್ ಷರೀಫ್ ಚಿತ್ರದುರ್ಗ, ಸಯ್ಯದ್ ಗನಿ ಖಾನ್ ಮಂಡ್ಯ, ಅಬ್ದುಲ್ ರೆಹಮಾನ್ ಬಿದರಕುಂದಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts