More

    ಮುನೇಶ್ವರಸ್ವಾಮಿ ದೇಗುಲ ಲೋಕಾರ್ಪಣೆ

    ಕೋಲಾರ : ನಗರದ ಟೇಕಲ್ ರಸ್ತೆಯ ರೈಲು ಮಾರ್ಗದ ಬಳಿ ನೂತನವಾಗಿ ನಿರ್ಮಿಸಿರುವ ಶ್ರೀ ಮುನೇಶ್ವರ ದೇವಾಲಯ ಮತ್ತು ದೇವರ ವಿಗ್ರಹದ ಪ್ರತಿಷ್ಠಾಪನೆ ಸೋಮವಾರ ಶ್ರದ್ಧಾ ಭಕ್ತಿಯಿಂದ ನೆರವೇರಿದ್ದು, ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.
    ದೇವಾಲಯ ಲೋಕಾರ್ಪಣೆ ಮತ್ತು ದೇವರ ಮೂರ್ತಿ ಪ್ರತಿಷ್ಠಾಪನೆ ಪ್ರಯುಕ್ತ ಬೆಳಗ್ಗೆ ೬.೩೦ ಗಂಟೆಗೆ ಗಣಪತಿ ಪೂಜೆ, ಬಳಿಕ ಸ್ವಸ್ತಿ ಪುಣ್ಯಾಹ ವಾಚನ, ಕಳಸ ಸ್ಥಾಪನೆ, ಗಣಪತಿ, ನವಗ್ರಹ, ಮೃತ್ಯುಂಜಯ, ಮಹಾಲಕ್ಷ್ಮೀ, ದುರ್ಗಾ, ಪ್ರಧಾನ ರುದ್ರ ಹೋಮ, ಪೂರ್ಣಾಹುತಿ, ಕುಂಭ ಉದ್ವಾಸನೆ, ದೇವಾಲಯ ಪ್ರದಕ್ಷಿಣಾಪೂರ್ವಕ ವಿಮಾನ ಗೋಪುರಕ್ಕೆ ಮಹಾ ಕುಂಭಾಭಿಷೇಕ, ಸ್ವಾಮಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ದಿವ್ಯ ಅಲಂಕಾರ, ಅಷ್ಟಬಲಿ, ಅರ್ಚನೆ ಮಂತ್ರಪುಷ್ಪ, ಅಷ್ಟಾವಧಾನ ಸೇವೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಿತು.
    ನಗರದ ಹೊರಭಾಗದಲ್ಲಿ ನೂರಾರು ವರ್ಷದಿಂದ ಮಣ್ಣಿನ ಮುನೇಶ್ವರ ಮೂರ್ತಿಗೆ ಪೂಜೆ ಸಲ್ಲಿಸುತ್ತ ಬಂದಿದ್ದು, ರಸ್ತೆ, ರೈಲು ಮಾರ್ಗದ ವಿಸ್ತರಣೆಯಿಂದ ದೇವರ ಮೂರ್ತಿ ರಸ್ತೆ ಬದಿಗೆ ಹೊಂದಿಕೊಂಡಂತಿತ್ತು. ಮುಂದೆ ರಸ್ತೆ ಇನ್ನೂ ವಿಸ್ತರಣೆಯಾದರೆ ದೇವರ ಮೂರ್ತಿ ತೆರವುಗೊಳಿಸಬಹುದು ಎಂಬ ಕಾರಣಕ್ಕೆ ನಗರಸಭಾ ಸದಸ್ಯ ಮುರಳಿಗೌಡ ಮತ್ತು ಭಕ್ತರು ಮುಂದೆ ಬಂದು ದೇವಾಲಯ, ಮೇಲೆ ಬೃಹತ್ ಮುನೇಶ್ವರ ಪ್ರತಿಮೆ ಮತ್ತು ಒಳಗೆ ಮಲುಗಿದ ಸ್ಥಿತಿಯಲ್ಲಿ ಶ್ರೀಮುನೇಶ್ವರ ಸ್ವಾಮಿ, ಏಳು ಮಂದಿ ಅಕ್ಕನವರು ಮತ್ತು ಪರಿವಾರದ ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts