More

    ಮುಂಬರುವ ಚುನಾವಣೆಗೆ ಪಂಚ ಯೋಜನೆ

     ಶೃಂಗೇರಿ: ಜೆಡಿಎಸ್ ಸಮಸ್ಯೆಗಳ ಕುರಿತು ಯೋಚಿಸಿ ಜನಸಾಮಾನ್ಯರ ಉನ್ನತಿಗಾಗಿ ದುಡಿಯುತ್ತಿದೆ ಎಂದು ಜೆಡಿಎಸ್ ಉಪಾಧ್ಯಕ್ಷ ಡಾ. ಸುಧಾಕರ ಎಸ್. ಶೆಟ್ಟಿ ತಿಳಿಸಿದರು. ಬುಧವಾರ ಜೆಡಿಎಸ್ ನೂತನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಂಬರುವ ಚುನಾವಣೆಯಲ್ಲಿ ಪಂಚ ಯೋಜನೆ ರೂಪಿಸಿದ್ದಾರೆ. ಸುಸಜ್ಜಿತ ಆಸ್ಪತ್ರೆ, ವಸತಿ ಯೋಜನೆಗಾಗಿ ಗ್ರಾಪಂಗಳಲ್ಲಿ ಹತ್ತು ಎಕರೆ ಜಾಗ ಮೀಸಲು, ಯುವಕರಿಗೆ ಉದ್ಯೋಗ ಸೃಷ್ಟಿ, ಬಡವರಿಗೆ ಸೂರಿನ ವ್ಯವಸ್ಥೆ, ಗ್ರಾಮೀಣ ಮಟ್ಟದಲ್ಲಿ ಕೈಗಾರಿಕಾ ಕ್ಷೇತ್ರಕ್ಕೆ ಉತ್ತೇಜನ. ಈ ಯೋಜನೆಗಳು ಯಶಸ್ವಿ ಆಗಬೇಕಿದ್ದರೆ ರಾಜ್ಯದಲ್ಲಿ ಜೆಡಿಎಸ್ ಆಡಳಿತಕ್ಕೆ ಬರಬೇಕು. ಇದಕ್ಕೆ ಸರ್ವರ ಪ್ರೋತ್ಸಾಹ ಇರಬೇಕು ಎಂದರು.

    ಕ್ಷೇತ್ರದಲ್ಲಿ ಶೇ.85ರಷ್ಟು ಜನರು ಕೆಳವರ್ಗದವರಿದ್ದಾರೆ. ಅವರ ಅಭಿವೃದ್ಧಿ ಕುರಿತು ಚಿಂತನೆ ಮಾಡುವುದು ನಮ್ಮ ಗುರಿಯಾಗಬೇಕು. ಗ್ರಾಮೀಣ ರಸ್ತೆಗಳ ಅಭಿವೃದ್ಧಿಯಾಗಿಲ್ಲ. 94ಸಿ ಹಾಗೂ 53ರ ಕಡತಗಳು ವಿಲೇವಾರಿಯಾಗಿಲ್ಲ. ಕ್ಷೇತ್ರದಲ್ಲಿ ಎರಡೂ ಪಕ್ಷದ ನಾಯಕರು ಇಂತಹ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.</p><p> ಧರ್ಮ, ಜಾತಿ, ಅಧಿಕಾರದ ಅಮಲಿನಲ್ಲಿ ರಾಜಕಾರಣ ನಡೆಯುತ್ತಿದೆ. ಯುವಜನರ ಮನಸ್ಸುಗಳನ್ನು ಹಾಳುಮಾಡುವ ಪ್ರಕ್ರಿಯೆಯಲ್ಲಿ ಬಿಜೆಪಿ, ಕಾಂಗ್ರೆಸ್ ನಿರತವಾಗಿವೆ. ಇಲ್ಲಿನ ಜನರ ಸಮಸ್ಯೆಗಳ ಕುರಿತು ನಾವು ಚಿಂತಿಸಬೇಕು. 22 ವರ್ಷಗಳಿಂದ ಅಭಿವೃದ್ಧಿಯ ಚಿಂತನೆಗಳನ್ನು ಮೂಲೆಗುಂಪಾಗಿಸಿವೆ. ಅಧಿಕಾರಿಗಳು ರಾಜಕೀಯ ನಾಯಕರ ಹಿಡಿತದಲ್ಲಿ ಇರಬಾರದು. ಸ್ವತಂತ್ರರಾಗಿ ಕಾರ್ಯ ನಿರ್ವಹಿಸಬೇಕು ಎಂದರು.

    ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದ ಜೆಡಿಎಸ್ ಜಿಲ್ಲಾಧ್ಯಕ್ಷ ರಂಜನ್ ಅಜಿತ್​ಕುಮಾರ್, ಅಡಕೆಗೆ ಹಳದಿಎಲೆ ಹಾಗೂ ಎಲೆಚುಕ್ಕಿ ರೋಗದ ಕುರಿತು ಆಡಳಿತ ಪಕ್ಷದ ನಾಯಕರು ಸ್ಪಂದಿಸುತ್ತಿಲ್ಲ. ಎಲ್ಲ ಸಮಾಜದವರನ್ನು ಒಗ್ಗೂಡಿಸಿ ಅವರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸುವ ಜವಾಬ್ದಾರಿ ಜೆಡಿಎಸ್ ಮೇಲಿದೆ ಎದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts