More

    ಮುಂದಿನ ಲಸಿಕೆ ದಿನಾಂಕ ತಿಳಿಯುವುದಿನ್ನು ಸುಲಭ


    ಚಿತ್ರದುರ್ಗ: ಗರ್ಭಿಣಿಯರು ಹಾಗೂ ಮಕ್ಕಳಿಗೆ ನಿಗದಿತ ಸಮಯಕ್ಕೆ ಲಸಿಕೆ ಹಾಕುವುದನ್ನು ಸರಳೀಕರಣಗೊಳಿಸುವ ಉದ್ದೇಶದಿಂದ ಕೇಂದ್ರದ ಆ ರೋಗ್ಯ ಇಲಾಖೆಯ ಯು-ವಿನ್ ಪೋರ್ಟಲ್ ಆ್ಯಪ್ ಜಿಲ್ಲೆಯಲ್ಲಿಯೂ ಪ್ರಾಯೋಗಿಕವಾಗಿ ಕಾರ‌್ಯಾರಂಭಗೊಂಡಿದೆ ಎಂದು ಜಿಲ್ಲಾ ಆ ರೋಗ್ಯಾಧಿಕಾರಿ ಡಾ.ಆರ್.ರಂಗನಾಥ್ ಹೇಳಿದರು.

    ಬುದ್ಧ ನಗರದ ನಗರ ಆರೋಗ್ಯಕೇಂದ್ರದಲ್ಲಿ ಗುರುವಾರ ಯು-ವಿನ್ ಪೋರ್ಟಲ್‌ಗೆ ಚಾಲನೆ ನೀಡಿ ಮಾತನಾಡಿದ ಅವರು,ಈ ಮೊದಲು ಗರ್ಭಿಣಿಯರಿಗೆ,ಮಕ್ಕಳಿಗೆ ಯಾವ ಸಮಯಕ್ಕೆ ಲಸಿಕೆ ಹಾಕ ಬೇಕೆಂಬುದನ್ನು ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳು ಬರೆದಿಟ್ಟುಕೊಳ್ಳುತ್ತಿದ್ದರು.

    ಇನ್ನು ಮುಂದೆ ಲಿಖಿತ ದಾಖಲೆ ಬದಲು ಪ್ರತಿ ಬಾರಿ ಚುಚ್ಚುಮದ್ದು ಹಾಕಿದ ಸಂದರ್ಭದಲ್ಲಿ ಮೊಬೈಲ್‌ಆ್ಯಪ್ ಮೂಲಕ ಯು-ವಿ ನ್ ಪೋರ್ಟಲ್‌ನಲ್ಲಿ ದಾಖಲಿಸುತ್ತಾರೆ. ಇದರಿಂದಾಗಿ ಲಸಿಕೆ ಪಡೆಯುವ ಗರ್ಭಿಣಿ ಅಥವಾ ಮಕ್ಕಳ ಪಾಲಕರಿಗೆ ಮುಂದಿನ ಲಸಿಕೆ ದಿ ನಾಂಕ ತಿಳಿಯುವುದು ಸುಲಭವಾಗಲಿದೆ. ಮೊಬೈಲ್ ಮೂಲಕ ದಿನಾಂಕದ ಮಾಹಿತಿ ಲಭ್ಯವಾಗಲಿದೆ. ಲಸಿಕೆ ಪಡೆದ ಬಗ್ಗೆ ಗಣಕೀಕೃತ ದೃಢೀಕರಣವೂ ಸಿಗಲಿದೆ ಎಂದರು.

    ಜಿಲ್ಲಾ ಲಸಿಕಾಧಿಕಾರಿ ಡಾ.ರೇಣುಪ್ರಸಾದ್ ಮಾತನಾಡಿ,ಯು-ವಿನ್ ಪೋರ್ಟಲ್ ಕುರಿತಂತೆ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ ಎಂದರು. ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್,ಬುದ್ಧನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುರೇಂದ್ರ,ತಾಲೂ ಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್,ಕ್ಷೇತ್ರ ಆರೋಗ್ಯಶಿಕ್ಷಣಾಧಿಕಾರಿ ಬಿ.ಮೂಗಪ್ಪ,ಆರೋಗ್ಯ ನಿರೀಕ್ಷಣಾಧಿಕಾರಿಗ ಳಾದ ಶ್ರೀಧರ್,ಗುರುಮೂರ್ತಿ,ಪ್ರಾಥಮಿಕ ಆರೋಗ್ಯ ಸುರಕ್ಷತಾ ಅಧಿಕಾರಿಗಳಾದ ಉಷಾ,ತಿಪ್ಪಮ್ಮ,ಜಿಲ್ಲಾ ಲಸಿಕ ನಿರ್ವಾಹಕ ವೀರೇಶ್, ತಾಲೂಕು ನಿರ್ವಾಹಕ ಅಲಿ,ಆಶಾ ಬೋಧಕಿ ಪದ್ಮಜಾ ಇತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts