More

    ಮುಂಡರಗಿಯಲ್ಲಿ ಸಂಗೀತ ಸುರಭಿ ಕಾರ್ಯಕ್ರಮ

    ಯಾದಗಿರಿ: ಸಂಗೀತ ಗಾಂಧರ್ವ ವಿದ್ಯೆಯಾಗಿದ್ದು, ಅಷ್ಟೊಂದು ಸುಲಭವಾಗಿ ಒಲಿಯುವುದಿಲ್ಲ. ಅದನ್ನು ಸಾಧಿಸಬೇಕಾದರೆ ದೊಡ್ಡ ತಪಸ್ಸು ಮಾಡಿದಂತೆ ಎಂದು ಪ್ರಾಂಶುಪಾಲ ಮಲ್ಲಣ್ಣಗೌಡ ಪಾಟೀಲ ತಿಳಿಸಿದರು.

    ತಾಲೂಕಿನ ಮುಂಡರಗಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಆವರಣದಲ್ಲಿ ಭಾನುವಾರ ಯಾದಗಿರಿಯ ಗಾನಯೋಗಿ ಸಂಸ್ಕೃತಿಕ ಕಲಾ ಸಂಘದಿಂದ ಪಂ.ಪುಟ್ಟರಾಜ ಗವಾಯಿಗಳ 13ನೇ ಪುಣ್ಯ ಸ್ಮರಣೋತ್ಸವ ನಿಮಿತ್ತ ಆಯೋಜಿಸಿದ್ದ ಸಂಗೀತ ಸುರಭಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನೋರಂಜನೆ ಸಹ ಶಿಕ್ಷಣದ ಒಂದು ಅವಿಭಾಜ್ಯ ಅಂಗವಾಗಿದೆ ಎಂದರು.

    ಶಿಕ್ಷಣ ಪಡೆಯಲು ಮನೊರಂಜನೆಯ ಬಳಸಿದರೆ ಮಕ್ಕಳು ಪರಿಣಾಮಕಾರಿಯಾಗಿ ಕಲಿಕೆಯಲ್ಲಿ ಮುಂದೆ ಬರುತ್ತಾರೆ. ಅದರಲ್ಲೂ ಸಂಗೀತದ ಮೂಲಕ ಶಿಕ್ಷಣ ನೀಡುವುದು ಒಂದು ಉತ್ತಮ ವಿಧಾನವಾಗಿದೆ ಎಂದು ತಿಳಿಸಿದರು.

    ಸಂಘದ ಅಧ್ಯಕ್ಷ ವಿಥೇಶ್ ಕುಮಾರ್, ಶಿಕ್ಷಕ ಅಯ್ಯನಗೌಡ ಅಲ್ಲೂರ್, ಸಹ ಶಿಕ್ಷಕಿ ಅಂಬಿಕಾ, ಕಲಾವಿದ ಶರಣಬಸವ ವಠಾರ ಇದ್ದರು. ಮಹೇಶ್ ಶಿರವಾಳ್ ಹಾಮರ್ೋನಿಯಂ ಸಾಥ್ ನೀಡಿದರು. ತಬಲಾ ಕಲಾವಿದ ಶರಣು ಕೋಲ್ಕುಂದಾ, ಪರಶುರಾಮ್ ಹಾಲಬಾವಿ. ಕೃತಿಕಾ, ಶ್ರೀರಕ್ಷಾ ವಠಾರ, ಶರಣಬಸವ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts