More

    ಮುಂಗಾರು ಮತ್ತೆ ಚುರುಕು ಸಾಧ್ಯತೆ

    ಮಂಗಳೂರು/ಉಡುಪಿ: ಕರಾವಳಿಯಲ್ಲಿ ದುರ್ಬಲವಾಗಿರುವ ಮುಂಗಾರು ಮತ್ತೆ ಚುರುಕು ಪಡೆಯುವ ಸಾಧ್ಯತೆಯಿದೆ. ಭಾನುವಾರದಿಂದ ಮತ್ತೆ ಮಳೆಯಾಗುವ ಮುನ್ಸೂಚನೆಯಿದ್ದು, ಜೂನ್ 29ರವರೆಗೂ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

    ಈ ನಡುವೆ ಶುಕ್ರವಾರವೂ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹಗಲು ವೇಳೆಯಲ್ಲಿ ಉರಿ ಬಿಸಿಲಿನ ವಾತಾವರಣವಿತ್ತು. ಅಲ್ಲಲ್ಲಿ ಒಂದೆರಡು ಬಾರಿ ಸಾಮಾನ್ಯ ಮಳೆ ಸುರಿದಿದೆ. ಗುರುವಾರ ರಾತ್ರಿ ಕೆಲವು ಕಡೆ ಸ್ವಲ್ಪ ಹೊತ್ತು ಉತ್ತಮ ಮಳೆಯಾಗಿದೆ. ಗ್ರಾಮಾಂತರ ಭಾಗದ ವಿವಿಧೆಡೆ ಮುಂಜಾನೆ ವೇಳೆ ದಟ್ಟ ಮಂಜು ಕವಿದು, ಚಳಿಗಾಲದಂತೆ ಗೋಚರಿಸಿದೆ. ಮಂಗಳೂರಿನಲ್ಲಿ ದಿನದ ಗರಿಷ್ಠ ತಾಪಮಾನ 30.2 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

    ಶುಕ್ರವಾರ ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಬೆಳ್ತಂಗಡಿ 4, ಬಂಟ್ವಾಳ 2.1, ಮಂಗಳೂರು 1.9, ಪುತ್ತೂರು 2.4, ಸುಳ್ಯ 1.6, ಮೂಡುಬಿದಿರೆ 4.3 ಮತ್ತು ಕಡಬದಲ್ಲಿ 2.1 ಮಿ.ಮೀ ಸಹಿತ ದ.ಕ. ಜಿಲ್ಲೆಯಲ್ಲಿ ಸರಾಸರಿ 2.6 ಮಿ.ಮೀ. ಮಳೆಯಾಗಿದೆ. ಉಡುಪಿ 7.3, ಬ್ರಹ್ಮಾವರ 11.2, ಕಾಪು 4.6, ಕುಂದಾಪುರ 8.8, ಬೈಂದೂರು 7.3, ಕಾರ್ಕಳ 7.4, ಹೆಬ್ರಿ 7.8 ಮಿ.ಮೀ. ಸಹಿತ ಉಡುಪಿ ಜಿಲ್ಲೆಯಲ್ಲಿ ಸರಾಸರಿ 8.0 ಮಿ.ಮೀ ಮಳೆ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts