More

    ಮೀನು ಮಾರುಕಟ್ಟೆ ಉದ್ಘಾಟಿಸಲು ಆಗ್ರಹ

    ಗೋಕರ್ಣ: ಸಮೀಪದ ಮಾದನಗೇರಿ-ಬಳಲೆಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ನಿರ್ವಿುಸಿರುವ ಹೊಸ ಮೀನು ಮಾರುಕಟ್ಟೆಯನ್ನು ಕೂಡಲೆ ಉದ್ಘಾಟನೆ ಮಾಡುವಂತೆ ತದಡಿ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಉಮಾಕಾಂತ ಹೊಸ್ಕಟ್ಟ ಮತ್ತು ಜಿಲ್ಲಾ ಮೀನು ಮಾರಾಟ ಫೆಡರೇಶನ್ ಸದಸ್ಯ ಮಹೇಶ ಮೂಡಂಗಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಆಗ್ರಹಿಸಿದ್ದಾರೆ.

    ಈ ಮಾರುಕಟ್ಟೆ ನಿರ್ವಣವಾಗಿ ಎರಡು ವರ್ಷ ಮುಗಿದರೂ ಸಂಬಂಧಿಸಿದ ಇಲಾಖೆ ಉದ್ಘಾಟನೆಗೆ ಮುಂದಾಗುತ್ತಿಲ್ಲ. ಮೀನು ಮಾರಾಟ ಮಾಡುವ ಮಹಿಳೆಯರು ಮಳೆಯಲ್ಲಿ ರಸ್ತೆ ಮೇಲೆ ಕುಳಿತು ಮಾರಾಟ ಮಾಡಬೇಕಾದ ದುಸ್ಥಿತಿಯಿದೆ. ಈ ಬಗ್ಗೆ ಈಗಾಗಲೆ ಸಂಬಂಧಿಸಿದ ಇಲಾಖೆಗೆ ಮನವಿ ಮಾಡಲಾಗಿದ್ದು, 15 ದಿನಗಳೊಳಗೆ ಮಾರುಕಟ್ಟೆಯನ್ನು ಮೀನುಗಾರ ಮಹಿಳೆಯರಿಗೆ ಮುಕ್ತಗೊಳಿಸದೆ ಇದ್ದರೆ ಮೀನುಗಾರರು ಅನಿವಾರ್ಯವಾಗಿ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts