More

    ಮಾರನಾಳ ಜನರಿಗೆ ರೋಗ ಭೀತಿ

    ಕೊಡೇಕಲ್ : ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನÀ ಮಾರನಾಳದಲ್ಲಿ ಸ್ವಚ್ಛತೆ ಸಂಪೂರ್ಣ ಮರೀಚಿಕೆಯಾಗಿದ್ದು, ಗ್ರಾಮಸ್ಥರು ಸಾಂಕ್ರಾಮಿಕ ರೋಗಗಳ ಭೀತಿ ಎದುರಿಸುವಂತಾಗಿದೆ.
    ಊರ ಹೃದಯಭಾಗದಲ್ಲಿರುವ ಗುರಪಾದೇಶ್ವರ ಮಠದಿಂದ ಬೀರಲಿಂಗೇಶ್ವರ ದೇವಸ್ಥಾನದ ಸಿಸಿ ರಸ್ತೆ ಚರಂಡಿಯಾಗಿ ಮಾರ್ಪಡುವ ಮೂಲಕ ಜನರು ನಿತ್ಯ ನರಕಯಾತನೆ ಅನುಭವಿಸಬೇಕಾಗಿದೆ.
    ಉತ್ತಮ ಸಿಸಿ ರಸ್ತೆ ನಿರ್ಮಾಣವಾಗಿದೆ. ಆದರೆ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ಗೃಹ ಬಳಕೆ ಹಾಗೂ ನಳದ ನೀರು ರಸ್ತೆಗೆ ಹರಿಯುತ್ತರುವುದರಿಂದ ವಾತಾವರಣ ಕಲುಷಿತಗೊಂಡಿದೆ. ರಸ್ತೆಯ ಎರಡೂ ಬದಿ ಚರಂಡಿ ನಿರ್ಮಿಸುವಂತೆ ಗ್ರಾಪಂ ಪಿಡಿಒಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥ ಸುರೇಶ ಆಕ್ರೋಶ ವ್ಯಕ್ತಪಡಿಸುತ್ತಾರೆ.
    ಕೊಳಚೆ ನೀರಿನಿಂದ ರಸ್ತೆ ಕೆರೆಯಂತಾಗಿದೆ. ಹಲವು ಸಲ ಚಿಕ್ಕಮಕ್ಕಳು ಕಾಲು ಜಾರಿ ಬಿದ್ದಿದ್ದಾರೆ. ಮುಖ್ಯವಾಗಿ ನಿಂತ ಕೊಳಚೆ ನೀರು ದುರ್ನಾತ ಬೀರುತ್ತಿರುವ ಕಾರಣ ಮೂಗು ಮುಚ್ಚಿಕೊಂಡೇ ಓಡಾಡಬೇಕಿದೆ. ಕೊಳಚೆ ನೀರಿನಲ್ಲಿ ಸೊಳ್ಳೆ ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಭೀತಿ ಕಾಡುತ್ತಿದ್ದರೂ ಸಂಬAಧಿತ ಅಧಿಕಾರಿ ಮಾತ್ರ ಸಂಬAಧವಿಲ್ಲದAತೆ ಕಣ್ಮುಚ್ಚಿ ಕುಳಿತಿರುವುದು ಗ್ರಾಮಸ್ಥರನ್ನು ಕೆರಳುವಂತೆ ಮಾಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts