More

    2025 ರೊಳಗೆ ಕ್ಷಯಮುಕ್ತ ಭಾರತ

    ಭರಮಸಾಗರ: ಡೆಂಘಿ, ಮಲೇರಿಯಾ ಇತರ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ವ್ಯಕ್ತಿ ಕೆಮ್ಮು, ಸೀನಿದಾಗ ಗಾಳಿಯಲ್ಲಿ ಸೋಂಕು ಮತ್ತೊಬ್ಬ ವ್ಯಕ್ತಿಗೆ ಹರಡುತ್ತದೆ ಎಂದು ಹಿರಿಯ ಆರೋಗ್ಯ ಪರಿವೀಕ್ಷಣಾಧಿಕಾರಿ ಅಂಜನಪ್ಪ ಹೇಳಿದರು.

    ಬಾಪೂಜಿ ಪ್ರೌಢಶಾಲೆ ಆವರಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕ್ಷಯರೋಗ ಪತ್ತೆ ಜಾಗೃತಿ ಆಂದೋಲನದಲ್ಲಿ ಡೆಂೆ, ಮಲೇರಿಯಾ ಮಾಸಾಚರಣೆ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

    ರಾಜ್ಯಾದ್ಯಂತ ಸಕ್ರಿಯ ಕ್ಷಯರೋಗ ಪತ್ತೆ ಕಾರ್ಯಕ್ರಮ ಆಯೋಜಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.

    ಪ್ರತಿ ಗ್ರಾಮದಲ್ಲಿ ಆಶಾ ಕಾರ್ಯಕರ್ತೆಯರು ಮನೆಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿದ್ದಾರೆ. 2025ರ ಒಳಗೆ ಕ್ಷಯಮುಕ್ತ ಭಾರತ ಮಾಡುವುದು ಸರ್ಕಾರದ ಗುರಿ ಎಂದು ಹೇಳಿದರು.

    ಮೈಕ್ರೋ ಬ್ಯಾಕ್ಟೀರಿಯಂ ಟ್ಯೂಬರ್ ಕ್ಯುಲೋಸಿಸ್ ಎಂಬ ಸೂಕ್ಷ್ಮ ರೋಗಾಣುವಿನಿಂದ ಕ್ಷಯ ರೋಗ ಬರುತ್ತದೆ.

    ಎರಡು ವಾರ ಅಥವಾ ಅದಕ್ಕಿಂತ ಹೆಚ್ಚು ಅವಧಿಯಲ್ಲಿ ಸತತ ಕೆಮ್ಮು, ಜ್ವರ ಇದ್ದರೆ ಸಂಜೆ ವೇಳೆ ಜ್ವರ ಬಂದರೆ ಎದೆಯಲ್ಲಿ ಉರಿ, ತೂಕ ಕಡಿಮೆ, ಹಸಿವು ಆಗದಿರುವುದು, ಕಫದಲ್ಲಿ ರಕ್ತ ಕಾಣಿಸುವುದು ರೋಗದ ಲಕ್ಷಣ ಎಂದು ತಿಳಿಸಿದರು.

    ಸಮುದಾಯ ಆರೋಗ್ಯ ಅಧಿಕಾರಿ ಬಿ.ಪ್ರತಿಭಾ, ಮುಖ್ಯಶಿಕ್ಷಕ ಜಿ.ಸಿ.ಎಚ್.ಗೊಂಚಿಗಾರ್, ಆರೋಗ್ಯ ಕೇಂದ್ರದ ಸುರಕ್ಷಾ ಅಧಿಕಾರಿ ರೂಪಾ,

    ರಜೀಯಾ ಬೇಗಂ, ಎಚ್.ಐ.ಕೆಂಚಪ್ಪ, ವಿನಯ್ ಶಿಂಧೆ, ವಿಶಾಲಮ್ಮ, ಗಂಗಾಂಬಿಕಾ, ರತ್ನಮ್ಮ, ಎನ್.ರಾಜಶೇಖರ್, ಸಿ.ಡಿ.ವೀರಭದ್ರಪ್ಪ, ಕೆ.ಸಿದ್ದರಾಮಪ್ಪ, ಕೆ.ಎನ್.ವಾಣಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts