More

    ಮಾನವ ಸಂಪನ್ಮೂಲವಾಗಿ ಬಳಕೆಯಾಗಲಿ ಜನಸಂಖ್ಯೆ- ವಸಂತಕುಮಾರಿ- ಪ್ರಬಂಧ ಸ್ಪರ್ಧೆ ಕಾರ್ಯಕ್ರಮ

    ದಾವಣಗೆರೆ: ಭಾರತದ ಜನಸಂಖ್ಯೆ 135 ಕೋಟಿಗೂ ಅಧಿಕವಾಗಿದೆ. ಇದನ್ನು ಮಾನವ ಸಂಪನ್ಮೂಲವಾಗಿ ಪರಿವರ್ತನೆ ಮಾಡಿಕೊಳ್ಳಬೇಕು ಎಂದು ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ನೋಡಲ್ ಅಧಿಕಾರಿ ಆರ್.ಬಿ. ವಸಂತಕುಮಾರಿ ತಿಳಿಸಿದರು.
    ದಾವಣಗೆರೆ ತಾಲೂಕು ಆನಗೋಡು ಸಮೀಪದ ಉಳಪಿನಕಟ್ಟೆ ಗ್ರಾಮದಲ್ಲಿನ ಉಪ- ಪ್ರಾದೇಶಿಕ ವಿಜ್ಞಾನ ಕೇಂದ್ರ ದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ ವಿಶ್ವ ಜನಸಂಖ್ಯಾ ದಿನಾಚರಣೆ ಪ್ರಯುಕ್ತ ಏರ್ಪಡಿಸಿದ ಪ್ರಬಂಧ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.
    ಮಾನವ ಸಂಪನ್ಮೂಲ ಸರಿಯಾದ ಮಾರ್ಗದಲ್ಲಿ ಸಾಗಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
    ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳಲ್ಲಿ ಬರವಣಿಗೆಯ ಕೌಶಲ ಕಡಿಮೆಯಾಗುತ್ತಿದೆ. ಪ್ರಬಂಧ ಸ್ಪರ್ಧೆಯು ಇದನ್ನು ದೂರಮಾಡಲಿದೆ ಎಂದರು.
    ಉಪ- ಪ್ರಾದೇಶಿಕ ವಿಜ್ಞಾನ ಕೇಂದ್ರದ ಬಗ್ಗೆ ಮಾತನಾಡುತ್ತಾ
    ಕರ್ನಾಟಕದಲ್ಲಿ ಚಿಕ್ಕಜಾಜೂರು ಗೌರಿಬಿದನೂರು ಬಳ್ಳಾರಿ ಹಾವೇರಿ ಹಾಗೂ ದಾವಣಗೆರೆಯಲ್ಲಿ ಈ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿ ಶಕ್ತಿ ಮತ್ತು ಸಂಪನ್ಮೂಲ ಗ್ಯಾಲರಿ, ಹವಾಮಾನ ವೈಪರಿತ್ಯ ಗ್ಯಾಲರಿ, ಹಾಗೂ ಫನ್ ಸೈನ್ಸ್ ಗ್ಯಾಲರಿ ಗಳನ್ನು ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಕೇಂದ್ರದಲ್ಲಿ ತಾರಾಲಯ ನಿರ್ಮಾಣ ಮಾಡುವ ಯೋಜನೆ ಇದೆ ಎಂದು ತಿಳಿಸಿದರು.
    ಮುಂದಿನ ದಿನಗಳಲ್ಲಿ ಈ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಹಲವಾರು ಸ್ಪರ್ಧೆಗಳನ್ನು ನಡೆಸಲಾಗುವುದು ಹಾಗೂ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ ಆಯೋಜಿಸಲಾಗುವುದು ಎಂದು ತಿಳಿಸಿದರು.
    ಕುರ್ಕಿ ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸಿ ಜಿ ಜಗದೀಶ್ ಕೂಲಂಬಿ ಮಾತನಾಡಿ ನಮ್ಮ ದೇಶದ ಜನಸಂಖ್ಯೆ ತ್ವರಿತ ಬೆಳವಣಿಗೆಯು ಇಂದು ಕಳವಳಕ್ಕೆಕಾರಣವಾಗಿದೆ. ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಕೃಷಿ ಕೈಗಾರಿಕೆ ವೈಜ್ಞಾನಿಕ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸುವಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ತಿಳಿಸಿದರು.
    ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಬಿಂದುಶ್ರೀ ಕೆ.ಸರ್ಕಾರಿ ಪ್ರೌಢಶಾಲೆ ಕಬ್ಬೂರು, ದ್ವಿತೀಯ ಬಹುಮಾನವನ್ನು ಹರ್ಷಿತ ಎಚ್ಎನ್ ಸರ್ಕಾರಿ ಪ್ರೌಢಶಾಲೆ ಹಾಲವರ್ತಿ, ತೃತಿಯ ಬಹುಮಾನವನ್ನು ಅನು ಎನ್ ಪಿ ಸರ್ಕಾರಿ ಪ್ರೌಢಶಾಲೆ ಕಂದನಕೋವಿ ಇವರು ಪಡೆದರು.
    ಕಾರ್ಯಕ್ರಮದಲ್ಲಿ ಪ್ರೌಢಶಾಲಾ ಶಿಕ್ಷಕರಾದ ಮಾರುತೇಶ್ ಎಸ್, ಸುಧಾಕರ ಜಿಎನ್, ಬಾಬು ಬುಡೇನ್, ಪ್ರಕಾಶ್ ಕೆಎಸ್, ಹನುಮಂತಪ್ಪ ಕೆ, ರಾಧಾ ಎಂ ಎಚ್, ವಿರೂಪಾಕ್ಷಿ ಹೆಚ್, ಪರಮೇಶ್ವರಯ್ಯ ವಿ, ಸಿ ಮಹಾಂತೇಶ್, ಟೆಕ್ನಿಕಲ್ ಅಸಿಸ್ಟೆಂಟ್ ಪ್ರವೀಣ್ ಮುಂತಾದವರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts