More

    ಮಾನವನ ವ್ಯಕ್ತಿತ್ವ ಮೌಲ್ಯ ಎಲ್ಲಕ್ಕಿಂತ ಮಿಗಿಲು

    ಅಥಣಿ ಗ್ರಾಮೀಣ: ಜೀವರಾಶಿಯಲ್ಲಿ ಮಾನವನಿಗೆ ಆದ್ಯತೆಯ ಸ್ಥಾನ ನೀಡಿದ್ದು , ವ್ಯಕ್ತಿತ್ವ ಮೌಲ್ಯದಿಂದ ಆತನನ್ನು ಜನರು ಗುರುತಿಸುತ್ತಾರೆ ಎಂದು ಕೌಲಗುಡ್ಡದ ಅಮರೇಶ್ವರ ಮಹಾರಾಜರು ಹೇಳಿದರು.
    ಅಥಣಿ ತಾಲೂಕಿನ ನಂದಗಾಂವ ಗ್ರಾಮದ ಭೂಕೈಲಾಸ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅವಜೀಕರ ಮಹಾರಾಜರ ಜಯಂತ್ಯುತ್ಸವ ಹಾಗೂ ದತ ್ತಜಯಂತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಇಂದು ಅನೇಕರು ಅಧಿಕಾರ, ಹಣ ಹಾಗೂ ಪ್ರತಿಷ್ಠೆಯ ಹಿಂದೆ ಬಿದ್ದಿದ್ದಾರೆ. ಯಾವುದೇ ವ್ಯಕ್ತಿ ಹುದ್ದೆಯಿಂದ ದೊಡ್ಡವನಾಗುವುದಿಲ್ಲ. ದಾನ, ಧರ್ಮ ಮತ್ತು ಕ್ಷಮಾಗುಣದಿಂದ ಜನರ ಮನಸ್ಸು ಗೆಲ್ಲುತ್ತಾನೆ ಎಂದರು.

    ಶೇಗುಣಸಿಯ ಹನುಮಂತಪ್ಪ ಸಾಧು ಮಹಾರಾಜರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೀವನ್ಮುಕ್ತರಾಗಬೇಕಾದರೆ ಶರಣರ ಉಪದೇಶ ಕೇಳಬೇಕು. ಸತ್ಕಾರ್ಯ ಕೈಗೊಂಡು ಭಾವಶುದ್ಧಿ ಮಾಡಿಕೊಳ್ಳಬೇಕು. ಭಾವ ಶುದ್ಧಿ ಇದ್ದರೆ ಎಲ್ಲರೂ ಸಹಾಯ ಮಾಡುತ್ತಾರೆ ಎಂದರು. ಮಂದಿರದ ಪೀಠಾಧ್ಯಕ್ಷ ಮಹಾದೇವ ಮಹಾರಾಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇಂಚಲಕರಂಜಿಯ ಮಹಿಶಾನಂದ ಸ್ವಾಮೀಜಿ, ಲಕ್ಕಪ್ಪ ಶರಣರು, ಚಿದಾನಂದ ಶಾಸ್ತ್ರಿ, ಮಾತೋಶ್ರೀ ಅನುಸೂಯ, ಮಲ್ಲಪ್ಪ ಶರಣರು ಪ್ರವಚನ ನೀಡಿದರು.

    ಬಿಜೆಪಿ ಮುಖಂಡ ಚಿದಾನಂದ ಸವದಿ, ಪುಷ್ಪಕ ಪಾಟೀಲ, ತಿಪ್ಪೇಸ್ವಾಮಿ, ಜಿಪಂ ಮಾಜಿ ಸದಸ್ಯ ಸಿದ್ಧಪ್ಪ ಮುದಕಣ್ಣವರ, ಅಡವಯ್ಯ ಸ್ವಾಮೀಜಿ, ಶಿವಲಿಂಗ ಶರಣರು, ಬಸಪ್ಪ ಗುಮಟಿ, ಸುರೇಶ ಇಚೇರಿ, ಪಿ.ಎನ್. ಜನಗೊಂಡ, ಆನಂದ ಕುಲಕರ್ಣಿ, ಶಿವಲಿಂಗಯ್ಯ ಎಸ್. ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts