More

    ಮಾದರಿ ಜಿಲ್ಲೆಯಾಗಿಸಲು ಪ್ರಾಮಾಣಿಕ ಯತ್ನ

    ಕೋಲಾರ: ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರೋಪಾಯಗಳನ್ನು ಕಂಡುಕೊಳ್ಳುವ ಮೂಲಕ ಮಾದರಿ ಜಿಲ್ಲೆಯನ್ನಾಗಿಸಲು ಉತ್ನಿಸಲಾಗುವುದು. ಪಾರದರ್ಶಕ ಮತ್ತು ಜನಸ್ಪಂದನೆಯ ಆಡಳಿತ ನೀಡಲು ಪಣ ತೊಡುವುದಾಗಿ ಜಿಲ್ಲಾಧಿಕಾರಿ ಅಕ್ರಂ ಪಾಷ ಘೋಷಿಸಿದರು.
    ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿ, ಅವಿಭಜಿತ ಕೋಲಾರ ಜಿಲ್ಲೆಗೆ ಹೊಂದಿಕೊಂಡಿದ್ದ ತುಮಕೊರು ಜಿಲ್ಲೆಯ ಮಧುಗಿರಿ ತಾಲೂಕಿನ ಕುಗ್ರಾಮದಲ್ಲಿ ಜನಿಸಿದ ನಾನು ಇದೇ ಅವಿಭಜಿತ ಜಿಲ್ಲೆಯಲ್ಲಿ ಶಿಕ್ಷಣ ಪಡೆದು ಅಚ್ಚಕನ್ನಡಿಗನಾಗಿದ್ದೇನೆ. ೮ ವರ್ಷ ಉಪನ್ಯಾಸಕನಾಗಿ, ವಿವಿಧೆಡೆ ಹಲವು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿ ಭಾರತೀಯ ಆಡಳಿತ ಸೇವೆಗೆ ಬಂದವನಾಗಿದ್ದೇನೆ. ಈಗಾಗಲೇ ಚಿಕ್ಕಬಳ್ಳಾಪುರದಲ್ಲಿ ಕಾರ್ಯನಿರ್ವಾಹಿಸಿದ್ದು, ಇದೀಗ ಕೋಲಾರದಲ್ಲಿ ಕಾರ್ಯನಿರ್ವಹಿಸಲು ಕರ್ತವ್ಯ ನಿರ್ವಹಣೆಗೆ ಸಿಕ್ಕಿರುವ ಅವಕಾಶವನ್ನು ಸದ್ಬಳಸಿಕೊಳ್ಳುವುದಾಗಿ ತಿಳಿಸಿದರು.
    ಜಿಲ್ಲೆಯ ೧೭ ಇಲಾಖೆಗಳಲ್ಲಿ ನೇಮಕಾತಿಯ ಅಧಿಕಾರಿಗಳು ಇಲ್ಲ, ಕಂದಾಯ ಇಲಾಖೆಯಲ್ಲಿ ಶೇ. ೬೦ ರಷ್ಟು ಸಿಬ್ಬಂದಿ ಕೊರತೆ ಇದೆ. ೩೦೦ ಗ್ರಾಮ ಲೆಕ್ಕಿಗರ ಪೈಕಿ ೭೧ ಹುದ್ದೆಗಳು ಖಾಲಿ ಇವೆ. ವಿವಿಧ ಇಲಾಖೆಗಳಿಂದ ಬೇರೆ ಜಿಲ್ಲೆಗಳಲ್ಲಿ ನಿಯೋಜಿತ ಅಧಿಕಾರಿಗಳನ್ನು ವಾಪಾಸ್ ಕರೆಸಲು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.
    ನನಗೆ ಹುದ್ದೆಯ ಆಹಂ ಇಲ್ಲ, ಎಲ್ಲಾ ಅಧಿಕಾರಿ, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದು ಜಿಲ್ಲೆಯ ಶ್ರೇಯೋಭಿವೃದ್ಧಿಗೆ ಕಾರ್ಯನಿರ್ವಹಿಸುತ್ತೇನೆ. ಮೈಸೂರು, ಮಡಿಕೇರಿ, ಹಾಸನ,ಬೆಂಗಳೂರು ಸೇರಿ ಅನೇಕ ಕಡೆ ಕಾರ್ಯನಿರ್ವಹಿಸಿದ್ದೇನೆ. ಆಲ್ಪಸಂಖ್ಯಾತರ ಇಲಾಖೆ, ಕಾರ್ಮಿಕ ಇಲಾಖೆ, ಸಕ್ಕರೆ ಕಂಪನಿ, ಹಿಂದುಳಿದ ಇಲಾಖೆ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ್ದೇನೆಂದು ಹೇಳಿದರು.
    ಕಾರ್ಮಿಕ ಇಲಾಖೆಯಲ್ಲಿದ್ದಾಗ ೪೦ ಲಕ್ಷ ಕಾರ್ಮಿಕ ಮಕ್ಕಳನ್ನು ನೊಂದಾಯಿಸುವ ಮೂಲಕ ಅನುಕೊಲಗಳನ್ನು ಕಲ್ಪಿಸಿದೆ. ೧೧ ಲಕ್ಷ ವಿದ್ಯಾರ್ಥಿಗಳಿಗೆ ೮೦೦ ಕೋಟಿ ರೂ.ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು. ಪೈಲೆಟ್ ಯೋಜನೆ ಮೂಲಕ ವಿಮೆ, ಉನ್ನತ ಶಿಕ್ಷಣ ಸೌಲಭ್ಯಗಳು, ಸಾಮಾಜಿಕ ಭದ್ರತೆ ನೀಡಲಾಯಿತು. ಕೊರೋನಾ ಸಂದರ್ಭದಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪದ್ಮಾಬಸಂತಪ್ಪ ಮಾತನಾಡಿ, ಪ್ರಥಮ ದರ್ಜೆ ಗುಮಾಸ್ತೆಯಾಗಿ, ಉಪನ್ಯಾಸಕಿಯಾಗಿ, ಉಪವಿಭಾಗಾಧಿಕಾರಿಯಾಗಿ, ಅಪರ ಜಿಲ್ಲಾಧಿಕಾರಿಯಾಗಿ ವಿವಿಧಡೆ ಕಾರ್ಯ ನಿರ್ವಹಿಸಿರುವ ವಿವಿಧ ಜಿಲ್ಲೆಗಳ ಪರಿಚಯದೊಂದಿಗೆ ತಮ್ಮ ಕೊಡುಗೆಗಳನ್ನು ತಿಳಿಸಿದ ಅವರು, ಕೋಲಾರದಲ್ಲಿ ಜಿಪಂ ಸಿಇಒ ಆಗಿ ಕರ್ತವ್ಯ ನಿರ್ವಹಣೆಗೆ ೨ನೇ ಬಾರಿಗೆ ಅವಕಾಶ ದೊರಕಿದೆ. ಅಧಿಕಾರ ವಹಿಸಿಕೊಂಡ ನಂತರ ಅಂಗನಾವಡಿ, ಅಮೃತ ಸರೋವರ ಯೋಜನೆಯಡಿ ನಡೆದಿರುವ ಕೆರೆ ಅಭಿವೃದ್ಧಿಯನ್ನು ಗಮನಿಸಿರುವೆ ಎಂದು ಹೇಳಿದರು.
    ಈ ಹಿಂದಿನ ಸಿ.ಇ.ಓ. ಯುಕೇಶ್‌ಕುಮಾರ್ ಉತ್ತಮ ಕೆಲಸ ಮಾಡಿ ಜಿಲ್ಲೆಗೆ ಪ್ರಶಸ್ತಿ ತಂದು ಕೊಟ್ಟಿದ್ದಾರೆ. ಅಮೃತ ಸರೋವರ ಯೋಜನೆಯಲ್ಲಿ ೨೦೦ ಕೆರೆಗಳ ಅಭಿವೃದ್ದಿ ಗುರಿ ನಿಗಧಿಪಡಿಸಲಾಗಿದೆ ಅದರೆ ನಾವು ಇನ್ನು ಹೆಚ್ಚುವರಿಯಾಗಿ ೨೨೪ ಕೆರೆಗಳ ಗುರಿ ಹೊಂದಿರುವುದಾಗಿ ತಿಳಿಸಿದರು. ಜಲ ಜೀವನ್ ಮಿಷನ್, ಶೌಚಗೃಹ, ಸ್ವಚ್ಛತೆ, ರಸ್ತೆಗಳ ಅಭಿವೃದ್ದಿ, ನರೇಗಾ ಮೂಲಕ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕಿದೆ ಎಂದರು.
    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಮಾತನಾಡಿ, ನಾನು ಅವಿಭಜಿತ ಕೋಲಾರ ಜಿಲ್ಲೆಯ ಮಂಡಿಕಲ್ ಗ್ರಾಮದ ಬಡ ಕುಟುಂಬದಿಂದ ಬಂದಿದ್ದು, ಚಿಕ್ಕಬಳ್ಳಾಪುರ,ಬೆಂಗಳೂರು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದಿದ್ದು, ಉನ್ನತ ಶಿಕ್ಷಣದ ತರಬೇತಿಯಲ್ಲಿ ೧೨೦ ಮಂದಿ ಪೈಕಿ ೫೦ ಮಂದಿ ಕೋಲಾರದವರೇ ಇದ್ದದ್ದು ವಿಶೇಷತೆಯಾಗಿತ್ತು. ಲೋಕಯುಕ್ತ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದು ತೃಪ್ತಿ ತಂದಿದ್ದು, ಬೆಸ್ಕಾಂ ಜಾಗೃತ ದಳದಲ್ಲಿ ಕಾರ್ಯನಿರ್ವಹಿಸಿರುವೆ. ಪೊಲೀಸ್ ಇಂಟಲೇಜೆನ್ಸ್ ಸೇರಿ ಎಎಸ್‌ಪಿ, ಡಿಸಿಪಿಯಾಗಿ ವಿವಿಧೆಡೆ ಕಾರ್ಯನಿರ್ವಹಿಸಿದ್ದು,ಕರೋನಾ ಸಂದರ್ಭ ಬೆಂಗಳೊರಿನಲ್ಲಿ ೧೫೦ ಅಂಬ್ಯುಲೆನ್ ವ್ಯವಸ್ಥೆ ಮಾಡಿಸಿದ್ದನ್ನು ಸ್ಮರಿಸಿಕೊಂಡರು.
    ಪತ್ರಕರ್ತರ ಸಂಘ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಜಿಲ್ಲೆಗೆ ಅಗತ್ಯ ಮೂಲಸೌಲಭ್ಯ ಒದಗಿಸಲು ಜಿಲ್ಲಾಡಳಿತ ಮುಂದಾಗಬೇಕು. ದೊಡ್ಡ ಹಳ್ಳಿಯಂತೆ ಇರುವ ಕೋಲಾರದ ಅಭಿವೃದ್ಧಿಗೆ ಸಹಕಾರ ನೀಡಿ ಎಂದು ಮನವಿ ಮಾಡಿದರು.
    ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ಜಿಲ್ಲಾಧಿಕಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ಸ್ಥಳೀಯರು ಮತ್ತು ಕನ್ನಡಿಗರಾಗಿದ್ದು, ಹೊಂದಾಣಿಕೆಯಿಂದ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಲಿ ಎಂದು ಆಶಿಸಿದರು.
    ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಚೇತನ್‌ಕುಮಾರ್, ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿ.ಮುನಿರಾಜು, ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ.ಸುರೇಶ್‌ಕುಮಾರ್ ಇತರರು ಇದ್ದರು. ಸಂವಾದದಲ್ಲಿ ಹಿರಿಯ ಪತ್ರಕರ್ತ ಎಂ.ಜಿ.ಪ್ರಭಾಕರ, ಎಸ್.ಸಚ್ಚಿದಾನಂದ, ಅಬ್ಬಣಿಶಂಕರ್, ಬಿ.ಎಲ್.ರಾಜೇಂದ್ರಸಿಂಹ ಇತರರು ಪಾಲ್ಗೊಂಡಿದ್ದರು.


    ಚುನಾವಣೆ ಹಿನ್ನೆಲೆಯಲ್ಲಿ ೪ತಿಂಗಳಿಂದ ಜಿಲ್ಲೆಯಲ್ಲಿ ಕಾನೂನು ಸುವ್ಯವ್ಯಸ್ಥೆ ಕಡೆ ಹೆಚ್ಚು ಗಮನ ಹರಿಸಲು ಸಾಧ್ಯವಾಗಲಿಲ್ಲ. ಕೆಲವಡೆ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದು ಇವುಗಳ ನಿಗ್ರಹಕ್ಕೆ ಕ್ರಮಕೈಗೊಳ್ಳಲಾಗುತ್ತಿದೆ. ರಾತ್ರಿ ೧೧ ಗಂಟೆ ನಂತರ ಸಂಚರಿಸುವರ ಬೆರಳಚ್ಚು ಪಡೆಯಲಾಗುವುದು, ನರಸಾಪುರ ಮತ್ತು ಸುಗಟೂರಿನಲ್ಲಿ ಹೆಚ್ಚುವರಿಯಾಗಿ ಪೊಲೀಸ್ ಠಾಣೆಗಳ ಸ್ಥಾಪನೆಗೆ ಕ್ರಮ ಜರುಗಿಸಲಾಗುವುದು.

    -ಎಂ.ನಾರಾಯಣ, ಎಸ್ಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts