More

    ಮಹಿಳೆಯರಿಂದ ದೇಶದ ಸಂಸೃತಿ ಪೋಷಣೆ

    ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

    ಲಿಂಗರಾಜನಗರದ ಆದರ್ಶ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದಲ್ಲಿ ಬುಧವಾರ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು.

    ಪ್ರೊ.ಎಸ್.ಬಿ. ಕುನ್ನೂರ ಮಾತನಾಡಿ, ಮಹಿಳೆಯರು ಎಲ್ಲ ರಂಗದಲ್ಲಿಯೂ ರಾರಾಜಿಸಿದ್ದಾರೆ. ಮಾತೃತ್ವವನ್ನು ಪರಿಪೂರ್ಣವಾಗಿ ಪಾಲಿಸುವುದರ ಮೂಲಕ ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ ಎಂದರು.

    ಪ್ರಾಚಾರ್ಯು ಶಶಿಕಲಾ ಜೈನ್, ಉಪನ್ಯಾಸಕಿ ಸುನಂದಾ ಮೆಣಸಿನಕಾಯಿ ಮಾತನಾಡಿದರು.

    ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸಾವಕಾರ ಅಧ್ಯಕ್ಷತೆ ವಹಿಸಿ, ಮಾತನಾಡಿದರು.

    ಇಂಟರ್​ನ್ಯಾಷನಲ್ ಓಲಂಪಿಯಾಡ್ ಆಫ್ ಸೈನ್ಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬಂಗಾರದ ಪದಕ ಪಡೆದ ವಿದ್ಯಾರ್ಥಿನಿ ವೀಣಾ ಸಾಲಿಮಠ ಹಾಗೂ ಮಹಿಳಾ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು.

    ನಿರ್ದೇಶಕರಾದ ಪ್ರೊ.ಬಿ.ಸಿ. ಗೌಡರ, ಪ್ರೊ. ಡ್ಯಾನಿಯಲ್ ಹೊಸಕೇರಿ, ಪ್ರಾಚಾರ್ಯರಾದ ಎಂ. ಕೆ. ಬೆಳಗಲಿ, ಪ್ರೊ.ಬಿ.ಜಿ. ಅಣ್ಣಿಗೇರಿ, ಇತರರು ಉಪಸ್ಥಿತರಿದ್ದರು.

    ವಿದ್ಯಾರ್ಥಿನಿ ವೀಣಾ ಕಳ್ಳಿಮಠ ಪ್ರಾರ್ಥಿಸಿದರು. ವಿದ್ಯಾರ್ಥಿ ವೈಭವ ಸ್ವಾಗತಿಸಿದರು. ಉಪನ್ಯಾಸಕ ನಾಗಾರ್ಜುನ ಪಾದನಕಟ್ಟಿ ವಂದಿಸಿದರು. ಉಪನ್ಯಾಸಕ ಮಹಾಬಳೇಶ್ವರ ನಾಯ್ಕ ನಿರೂಪಿಸಿದರು.

    ವಿದ್ಯಾರ್ಥಿನಿಗೆ ಬಂಗಾರದ ಪದಕ: ನಗರದ ಶ್ರೀ ಸದಾಶಿವ ವಿದ್ಯಾವರ್ಧಕ ಸಮಿತಿಯ ಆದರ್ಶ ಪದವಿಪೂರ್ವ ವಿಜ್ಞಾನ ಮಹಾವಿದ್ಯಾಲಯದ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ ವೀಣಾ ಸಾಲಿಮಠ, ಸಿಲ್ವರ್ ಝೆೊನ್ ಓಲಂಪಿಯಾಡ್ 2022-23ನೇ ಸಾಲಿನ ಇಂಟರ್​ನ್ಯಾಷನಲ್ ಓಲಂಪಿಯಾಡ್ ಆಫ್ ಸೈನ್ಸ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬಂಗಾರದ ಪದಕ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts