More

  ಕನ್ನಡ, ಸಂಸ್ಕೃತಿ ಇಲಾಖೆಯಿಂದ ಸಂಘ-ಸಂಸ್ಥೆಗಳಿಗೆ ಅನುದಾನ

  ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಪ.ಜಾತಿ, ಪ.ಪಂಗಡ ಉಪಯೋಜನೆಯಡಿ ವಿಭಾಗಾವಾರು ಸಂಘ-ಸಂಸ್ಥೆಗಳ ಪಟ್ಟಿ ಅಂತಿಮಗೊಳಿಸಿ ಮೊದಲ ಕಂತಿನ ಧನಸಹಾಯ ಬಿಡುಗಡೆ ಮಾಡಿ ಆದೇಶ ಹೊರಡಿಸಿದೆ.

  ಜಿಲ್ಲಾ ಸಮಿತಿ ಶಿಫಾರಸು ಮಾಡಿದ ಅನುದಾನದಲ್ಲಿ ಪರಿಶಿಷ್ಟ ಜಾತಿ ಉಪಯೋಜನೆಯಡಿ ಆಯ್ಕೆಯಾದ ಸಂಘ- ಸಂಸ್ಥೆಗಳಿಗೆ ಮೊದಲ ಕಂತಿನಲ್ಲಿ ಶೇ.31 ಪರಿಶಿಷ್ಟ ಪಂಗಡ ಉಪಯೋಜನೆಯಡಿ ಆಯ್ಕೆಯಾದ ಸಂಘ-ಸಂಸ್ಥೆಗಳಿಗೆ ಶೇ. 33 ಅನುದಾನ ಬಿಡುಗಡೆ ಮಾಡಲಾಗಿದೆ.

  ಪರಿಶಿಷ್ಟ ಜಾತಿ ಉಪಯೋಜನೆಯಡಿ ಬೆಂಗಳೂರು ವಿಭಾಗದಡಿ 230 ಸಂಘ-ಸಂಸ್ಥೆಗಳಿಗೆ ಜಿಲ್ಲಾ ಸಮಿತಿ ಶಿಫಾರಸು ಮಾಡಿದ 3.13 ಕೋಟಿಯಲ್ಲಿ 97.10 ಲಕ್ಷ ಮಂಜೂರು ಮಾಡಲಾಗಿದೆ. ಮೈಸೂರು ವಿಭಾಗದಡಿ 60 ಸಂಘ-ಸಂಸ್ಥೆಗಳಿಗೆ 1.35 ಕೋಟಿಯಲ್ಲಿ 41.85 ಲಕ್ಷ, ಕಲಬುರಗಿ ವಿಭಾಗದಡಿ 186 ಸಂಘ-ಸಂಸ್ಥೆಗಳಿಗೆ 3.35 ಕೋಟಿಯಲ್ಲಿ 1.03 ಕೋಟಿ, ಬೆಳಗಾವಿ ವಿಭಾಗದಡಿ 43 ಸಂಘ-ಸಂಸ್ಥೆಗಳಿಗೆ ಶಿಫಾರಸು ಮಾಡಲಾದ 1.03 ಕೋಟಿಯಲ್ಲಿ 31.93 ಲಕ್ಷ ಮಂಜೂರು ಮಾಡಲಾಗಿದೆ.

  ಪರಿಶಿಷ್ಟ ಪಂಗಡ ಉಪಯೋಜನೆಯಡಿ ಬೆಂಗಳೂರು ವಿಭಾಗದಡಿ 42 ಸಂಘ-ಸಂಸ್ಥೆಗಳಿಗೆ ಶಿಫಾರಸು ಮಾಡಲಾದ 59.50 ಲಕ್ಷದಲ್ಲಿ 19.63 ಲಕ್ಷ, ಮೈಸೂರು ವಿಭಾಗದಡಿ 8 ಸಂಘಸಂಸ್ಥೆಗಳಿಗೆ 24.50 ಲಕ್ಷದಲ್ಲಿ 8.08 ಲಕ್ಷ, ಕಲಬುರಗಿ ವಿಭಾಗದಿಂದ 19 ಸಂಘ-ಸಂಸ್ಥೆಗಳಿಗೆ 43.50 ಲಕ್ಷದಲ್ಲಿ 14.35 ಲಕ್ಷ, ಬೆಳಗಾವಿ ವಿಭಾಗದಿಂದ 28 ಸಂಘ-ಸಂಸ್ಥೆಗಳಿಗೆ ಶಿಫಾರಸು ಮಾಡಲಾದ 77.50 ಲಕ್ಷದಲ್ಲಿ 25.57 ಲಕ್ಷ ಮಂಜೂರು ಮಾಡಲಾಗಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts