More

    ಮಹಾ ಸಚಿವರಿಗೆ ಪ್ರವೇಶ ನಿರ್ಬಂಧಿಸಿ

    ಗೋಕಾಕ, ಬೆಳಗಾವಿ: ಮಹಾರಾಷ್ಟ್ರ ಸಚಿವರಿಗೆ ಬೆಳಗಾವಿ ಪ್ರವೇಶ ನಿಷೇಧಿಸುವಂತೆ ಆಗ್ರಹಿಸಿ ಕರವೇ ತಾಲೂಕು ಘಟಕದ ಕಾರ್ಯಕರ್ತರು ತಹಸೀಲ್ದಾರ್ ಮೂಲಕ ಬೆಳಗಾವಿ ಪೊಲೀಸ್ ಆಯುಕ್ತರಿಗೆ ಶುಕ್ರವಾರ ಮನವಿ ಸಲ್ಲಿಸಿದರು.

    ನಗರದ ಮಿನಿ ವಿಧಾನಸೌಧದ ಆವರಣದಲ್ಲಿ ಎಂಇಎಸ್ ಸಂಘಟನೆ ಮತ್ತು ಮಹಾ ಸಚಿವರಾದ ಚಂದ್ರಕಾಂತ ಪಾಟೀಲ ಹಾಗೂ ಶಂಭು ರಾಜೆ (ದೇಸಾಯಿ) ಅವರ ವಿರುದ್ಧ ಘೋಷಣೆ ಕೂಗಿದರು.
    ಕರವೇ ಅಧ್ಯಕ್ಷ ಬಸವರಾಜ ಖಾನಪ್ಪನವರ ಮಾತನಾಡಿ, ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿಚಾರಣೆ ಸುಪ್ರೀಂಕೋರ್ಟ್‌ನಲ್ಲಿ ಕೊನೆಯ ಹಂತದಲ್ಲಿರುವ ಸಂದರ್ಭದಲ್ಲಿ ಎಂಇಎಸ್ ಹಾಗೂ ಮಹಾರಾಷ್ಟ್ರ ರಾಜಕಾರಣಿಗಳು ವಿನಾಕಾರಣ ಮರಾಠಿ ಮತ್ತು ಕನ್ನಡ ಭಾಷಿಕರ ನಡುವೆ ವಿಷಬೀಜ ಬಿತ್ತುವ ಕಾರ್ಯ ಮಾಡುತ್ತಿದ್ದಾರೆ. ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಾಜನ ಅಂತಿಮ ಎಂದು ಹೇಳಿದರು.

    ಎಂಇಎಸ್ ಪುಂಡರು ಮಹಾರಾಷ್ಟ್ರದ ರಾಜಕಾರಣಿಗಳ ಸಹಾಯ ಪಡೆದು ಕನ್ನಡ ಮತ್ತು ಕರ್ನಾಟಕವನ್ನು ಅವಮಾನಿಸುತ್ತ ಬರುತ್ತಿದ್ದಾರೆ. ಈ ವಿಷಯದ ಕುರಿತು ಚರ್ಚಿಸಿ ಶಾಂತಿ ಸುವ್ಯವಸ್ಥೆಗೆ ಭಂಗ ತರಲು ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವರಾದ ಚಂದ್ರಕಾಂತ ಪಾಟೀಲ ಮತ್ತು ಶಂಭು ರಾಜೆ (ದೇಸಾಯಿ) ಅವರು ಬರುವ ಡಿ.6ರಂದು ಬೆಳಗಾವಿಗೆ ಬಂದು ಎಂಇಎಸ್ ಸಂಘಟನೆ ಜತೆಗೆ ಚರ್ಚಿಸುವ ಮೂಲಕ ಬೆಳಗಾವಿಯಲ್ಲಿ ಶಾಂತಿ, ಸುವ್ಯವಸ್ಥೆ ಭಂಗ ಮಾಡುವ ಉದ್ದೇಶ ಹೊಂದಿದ್ದಾರೆ. ಆದ್ದರಿಂದ ಮಹಾ ಸಚಿವರಿಗೆ ಬೆಳಗಾವಿ ಪ್ರವೇಶ ನಿಷೇಧಿಸಬೇಕು ಇಲ್ಲವಾದಲ್ಲಿ ಎಂಇಎಸ್ ಜತೆಗೆ ಜರುಗುವ ಸಭೆಗೆ ನುಗ್ಗಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಸಾಧಿಕ್ ಹಲ್ಯಾಳ, ದೀಪಕ ಹಂಜಿ, ನಿಜಾಮ ನದ್ಾ, ಕೆಂಪಣ್ಣ ಕಡಕೋಳ, ಮುಗುಟ ಪೈಲವಾನರ, ಮಂಜು ಪ್ರಭುನಟ್ಟಿ, ಬಸು ಗಾಡಿವಡ್ಡರ, ಕರೆಪ್ಪ ಹೊರಟ್ಟಿ, ಲಕ್ಷ್ಮ್ಮಣ ಗೊರಗುದ್ದಿ, ಶಿವಾನಂದ ಲಿಂಬೆನ್ನವರ, ರಾಮ ಕುಡ್ಡೆಮ್ಮಿ, ಅಪ್ಪಯ್ಯ ತಿಗಡಿ, ರಾಮ ಕೊಂಗನೋಳಿ, ಆನಂದ ಖಾನಪ್ಪನವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts