More

    ಮಹಾರಾಷ್ಟ್ರಕ್ಕೆ ಸಾರಿಗೆ ಸೇವೆ ಪುನರಾರಂಭ

    ಕಲಬುರಗಿ: ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಮಹಾರಾಷ್ಟ್ರಕ್ಕೆ ಸ್ಥಗಿತಗೊಂಡಿದ್ದ ಸಾರಿಗೆ ಸಂಚಾರವನ್ನು ಪುನರಾರಂಭ ಮಾಡಲಾಗಿದೆ ಎಂದು ಈಶಾನ್ಯ ಕರ್ನಾ ಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಂ.ಕೂರ್ಮರಾವ್ ತಿಳಿಸಿದ್ದಾರೆ. ಬಸ್ನಲ್ಲಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಪ್ರಥಮ ಹಂತದಲ್ಲಿ ಸೊಲ್ಲಾಪುರ, ಉಮರ್ಗಾ , ಉದಗೀರ್, ದೇಗಲೂರ, ನಾಂದೇಡ್ ಹಾಗೂ ಔರಂಗಾಬಾದ್ ಮಾರ್ಗಗಳಲ್ಲಿ 16ರಿಂದ ಬಸ್ಗಳ ಕಾರ್ಯಾಚರಣೆ ಶುರುವಾಗಿದೆ. ಸಾಂಗ್ಲಿ ಮತ್ತು ಕೊಲ್ಲಾಪುರ ವಲಯಗಳಲ್ಲಿ 21ರವರೆಗೆ ಕಫ್ರ್ಯು ಜಾರಿಯಲ್ಲಿ ಇರುವುದರಿಂದ ಮಹಾರಾಷ್ಟ್ರದ ಎಲ್ಲೆಡೆ 22ರಿಂದ ಪೂರ್ಣ ಆಸನಗಳೊಂದಿಗೆ ಸೇವೆ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಮುಂಗಡ ಆಸನಗಳನ್ನು ಕೆಎಸ್ಆರ್ಟಿಸಿ ವೆಬ್ಸೈಟ್ ಇಲ್ಲವೇ ಸಂಸ್ಥೆ / ಪ್ರಾಂಚೈಸಿ ಕೌಂಟರ್ಗಳಲ್ಲೂ ಕಾದಿರಿಸಿಕೊಳ್ಳಬಹುದು. ಸಾರ್ವಜನಿಕರು ಸಾರಿಗೆ ಸೇವೆ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts