More

    ಮಹಾಮಾರಿಗೆ ಮತ್ತೆ ಮೂವರು ಬಲಿ

    ಗದಗ: ಜಿಲ್ಲೆಯಲ್ಲಿ ಭಾನುವಾರ 88 ಜನರಿಗೆ ಕರೊನಾ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ತಿಳಿಸಿದ್ದಾರೆ.

    ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1568ಕ್ಕೆ ಏರಿದ್ದು, ಭಾನುವಾರ 6 ಜನ ಸೇರಿ 540 ಜನರು ಗುಣವಾಗಿದ್ದಾರೆ. ಕೋವಿಡ್-19 ಸೋಂಕಿನಿಂದ ಭಾನುವಾರ ಮೂವರು ಮೃತಪಟ್ಟಿದ್ದಾರೆ. ಇಲ್ಲಿವರೆಗೆ ಸೋಂಕಿನಿಂದ ಒಟ್ಟು 37 ಜನರು ಸಾವಿಗೀಡಾಗಿದ್ದಾರೆ.

    ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು: ಗದಗ-ಬೆಟಗೇರಿ ನಗರಸಭೆ ವ್ಯಾಪ್ತಿಯ ರಿಂಗ್ ರಸ್ತೆ, ವಕ್ಕಲಗೇರಿ ಓಣಿ, ರೈಲು ನಿಲ್ದಾಣದ ಹತ್ತಿರ, ಕುಂಬಾರ ಓಣಿ ಬೆಟಗೇರಿ, ಹೊಸಪೇಟೆ ಚೌಕ್, ಸಂಭಾಪುರ ಪೊಲೀಸ್ ಕ್ವಾಟರ್ಸ್, ಕಾಗದಗೇರಿ ಓಣಿ, ಗಂಗಾಪುರ ಪೇಟೆ, ಹುಡ್ಕೋ ಕಾಲನಿ, ಬಾಲಕಿಯರ ಬಾಲಮಂದಿರ, ಸಂಭಾಪುರ ರಸ್ತೆ, ಎ.ಪಿ.ಎಂ.ಸಿ.ಯಾರ್ಡ್, ಜಿಮ್ಸ್ ಹಾಸ್ಟೆಲ್, ಕುರಹಟ್ಟಿ ಪೇಟ, ಕೇಶವ ನಗರ, ಹಾತಲಗೇರಿ ನಾಕಾ, ನೇಕಾರ ಕಾಲನಿ, ವಿವೇಕಾನಂದ ನಗರ, ಗದಗ ತಾಲೂಕಿನ ಹುಲಕೋಟಿ, ಕುರ್ತಕೋಟಿ, ಮುಳಗುಂದ. ನರಗುಂದ ಪಟ್ಟಣದ ಕಲಕೇರಿ ಓಣಿ, ಗುರ್ಲಕಟ್ಟಿ ಓಣಿ, ಕುರ್ಲಗೇರಿ ಓಣಿ, ನರಗುಂದ ತಾಲೂಕಿನ ಕೊಣ್ಣೂರ, ಹುಣಸೀಕಟ್ಟಿ, ಬೈರನಟ್ಟಿ, ರೋಣ ಪಟ್ಟಣದ ಗುರುಭವನ ಹತ್ತಿರ, ಹೊರಪೇಟೆ ಓಣಿ, ರೋಣ ತಾಲೂಕಿನ ಹೊಳೆಆಲೂರ, ಪಿ.ಎಚ್.ಸಿ ಕ್ವಾರ್ಟರ್ಸ್ ಹಿರೇಹಾಳ, ಹಡಗಲಿ, ಸೂಡಿ, ಮುಶಿಗೇರಿ, ನಿಡಗುಂದಿ ಪಿ.ಎಚ್.ಸಿ.ಕ್ವಾರ್ಟರ್ಸ್,

    ಮುಂಡರಗಿ ಪಟ್ಟಣದ ವಿದ್ಯಾನಗರ, ಮುಂಡರಗಿ, ಮಲ್ಲಿಕಾರ್ಜುನಪುರ, ಭಜಂತ್ರಿ ಓಣಿ, ಪೋಸ್ಟ್ ಆಫೀಸ್ ಹತ್ತಿರ, ಎ.ಡಿ.ನಗರ, ಮುಂಡರಗಿ ತಾಲೂಕಿನ ಹಿರೇವಡ್ಡಟ್ಟಿ, ಕೋಟಬಾಗಿ, ನಾಗರಹಳ್ಳಿ, ಹಮ್ಮಗಿ, ಡಂಬಳ. ಶಿರಹಟ್ಟಿ, ಕೋಟಿ ಓಣಿ, ಶಿರಹಟ್ಟಿ ತಾಲೂಕಿನ ಶಿಗ್ಲಿ, ರಾಮಗೇರಿ. ಲಕ್ಷ್ಮೇಶ್ವರ ಪಟ್ಟಣದ ಸಮಗಾರ ಓಣಿ, ಸುಣಗಾರ ಓಣಿ, ಬಸ್ತಿ ಬಣ.ಗಜೇಂದ್ರಗಡದ ಜವಳಿ ಪ್ಲಾಟ್, ಬಸವೇಶ್ವರ ನಗರ ಹಾಗೂ ಅಥಣಿ ತಾಲೂಕಿನ ಹುಲಗಬಲ್ ಗ್ರಾಮ, ಬಾಗಲಕೋಟೆ ಜಿಲ್ಲೆಯ ಇಲಕಲ್ ಪಟ್ಟಣದಲ್ಲಿ ಸೋಂಕು ಪತ್ತೆಯಾಗಿದೆ.

    ಮೃತರ ವಿವರ: ಗದಗ ಶಹರದ ಕಾಗದಗಾರ ಓಣಿ ನಿವಾಸಿ 72 ವರ್ಷದ ಪುರುಷ ಮೃತಪಟ್ಟಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 26 ರಂದು ಅವರಿಗೆ ಕೋವಿಡ್-19 ದೃಢಪಟ್ಟಿತ್ತು. ನ್ಯೂಮೊನಿಯಾ ಹಾಗೂ ಹೃದಯಾಘಾತದಿಂದಾಗಿ ಜುಲೈ 30 ರಂದು ಮೃತಪಟ್ಟಿದ್ದಾರೆ. ಗದಗ ತಾಲೂಕಿನ ಬಿಂಕದಕಟ್ಟಿ ನಿವಾಸಿ 52 ವರ್ಷದ ಪುರುಷ ಮೃತಪಟ್ಟಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಜುಲೈ 29 ರಂದು ಅವರಿಗೆ ಕೋವಿಡ್ ದೃಢಪಟ್ಟಿತ್ತು ತೀವ್ರ ಉಸಿರಾಟದ ತೊಂದರೆಯಿಂದಾಗಿ ಜುಲೈ 30 ರಂದು ಮೃತಪಟ್ಟಿದ್ದಾರೆ. ಶಿರಹಟ್ಟಿ ನಿವಾಸಿ 72 ವರ್ಷದ ಪುರುಷ ಮೃತಪಟ್ಟಿದ್ದಾರೆ. ಅನಾರೋಗ್ಯದ ಹಿನ್ನೆಲೆಯಲ್ಲಿ ಅವರನ್ನು ಜಿಮ್ಸ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜುಲೈ 30 ರಂದು ಅವರಿಗೆ ಕೋವಿಡ್-19 ದೃಢಪಟ್ಟಿತ್ತು. ಹೃದಯ ಸಂಬಂಧಿ ಕಾಯಿಲೆ ಹಾಗೂ ನ್ಯೂಮೊನಿಯಾದಿಂದಾಗಿ ಜುಲೈ 30 ರಂದು ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ವರದಿಯಿಂದ ತಿಳಿದು ಬಂದಿದೆ. ಮೃತರ ಅಂತ್ಯ ಕ್ರಿಯೆಯನ್ನು ಕೋವಿಡ್-19ರ ಮಾರ್ಗಸೂಚಿಗಳನ್ವಯ ನೆರವೇರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸುಂದರೇಶ ಬಾಬು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts