More

    ಮಹಾತ್ಮರಲ್ಲಿದೆ ವಿಜ್ಞಾನ ಮೀರಿಸುವ ಶಕ್ತಿ

    ಸೇಡಂ : ಕಲ್ಯಾಣ ಶರಣರು- ಸಂತರ ನಾಡಾಗಿದ್ದು, ಇಲ್ಲಿ ಶತಮಾನಗಳಿಂದಲೂ ಮಹಾತ್ಮರು ನಡೆದಾಡಿದ್ದಾರೆ. ವಿಜ್ಞಾನವನ್ನು ಮೀರಿಸಿ ಪವಾಡಗಳನ್ನು ನಡೆಸಿದ ಅನೇಕ ಉದಾಹರಣೆಗಳು ನಾವು ಕಾಣಬಹುದಾಗಿದೆ ಎಂದು ಮುಗಳಖೋಡ-ಜಿಡಗಾ ಮಠದ ಪೀಠಾಧಿಪತಿ ಶ್ರೀ ಡಾ.ಮುರುಘರಾಜೇಂದ್ರ ಸ್ವಾಮೀಜಿ ನುಡಿದರು.
    ಸಟಪಟನಹಳ್ಳಿಯಲ್ಲಿ ಸದ್ಗುರು ಯಲ್ಲಾಲಿಂಗ ಮಹಾರಾಜರ ಮಂದಿರದ ಶಿಖರ ಕಳಸಾರೋಹಣ ಮತ್ತು ಹನುಮಾನ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಅವರು, ಎಲ್ಲರಿಗೂ ಆಶ್ರಯ ನೀಡುವ ಮರಗಳನ್ನು ಬೆಳೆಸುವ ಕೆಲಸ ನಮ್ಮಿಂದಾಗಬೇಕಾಗಿದೆ. ನಿಸರ್ಗವನ್ನು ಪ್ರೀತಿಸುವುದರ ಜತೆಗೆ ನಿಸರ್ಗದಲ್ಲಿ ದೇವರನ್ನು ಕಾಣುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು ಎಂದರು.
    ವಿಜ್ಞಾನವನ್ನು ಮೀರಿಸುವ ಶಕ್ತಿ ಮಹಾತ್ಮರಿಗಿದೆ, ನಮ್ಮ ಮಹಾತ್ಮರು ಅನೇಕ ಪವಾಡಗಳನ್ನು ಮಾಡಿದ್ದಾರೆ. ಅದನ್ನು ಯಾವ ವಿಜ್ಞಾನಿಯಿಂದಲೂ ಕಂಡುಹಿಡಿಯಲು ಸಾಧ್ಯವಿಲ್ಲ. ಧರ್ಮದಿಂದ ನಡೆಯುವ ಸಮಾಜ ನಿರ್ಮಾಣವಾಗಬೇಕು. ಅಂದಾಗ ನಾವೇಲ್ಲರೂ ಒಂದೆ ಎಂಬ ಭಾವ ಮೂಡುತ್ತದೆ.
    ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಠಗಳು ದೇಶದ ಜ್ಞಾನದ ಕೇಂದ್ರಗಳು. ಶ್ರೀ ಮುರುಘರಾಜೇಂದ್ರ ಸ್ವಾಮಿಗಳನ್ನು ಜನತೆ ನಡೆದಾಡುವ ದೇವರೆಂದು ನಂಬಿದ್ದು, ವರ್ಷಕ್ಕೆ 1-2 ಬಾರಿ ನಮ್ಮ ಭಾಗದತ್ತ ಆಗಮಿಸಿ ಜನರ ಕಷ್ಟಗಳನ್ನು ದೂರ ಮಾಡಬೇಕು ಎಂದು ಮನವಿ ಮಾಡಿದರು.
    ಹಾಲಪ್ಪಯ್ಯ ವಿರಕ್ತ ಮಠದ ಶ್ರೀ ಪಂಚಾಕ್ಷರಿ ಸ್ವಾಮೀಜಿ ಮಾತನಾಡಿದರು. ಕೊತ್ತಲ ಬಸವೇಶ್ವರ ಸಂಸ್ಥಾನದ ಶ್ರೀ ಸದಾಶಿವ ಸ್ವಾಮೀಜಿ, ಹಾಫ್ಕಾಮ್ಸ್ ರಾಜ್ಯಾಧ್ಯಕ್ಷ ಬಸವರಾಜ ಪಾಟೀಲ್ ಊಡಗಿ, ಜಿಪಂ ಮಾಜಿ ಅಧ್ಯಕ್ಷ ಶರಣಪ್ಪ ಪಾಟೀಲ್ ತೆಲ್ಕೂರ, ಪಿಎಸ್ಐ ಸುಶೀಲಕುಮಾರ, ಪ್ರಮುಖರಾದ ಶಿವಕುಮಾರ ಪಾಟೀಲ್ ತೆಲ್ಕೂರ, ಶಂಕರ ಅವರಾದಿ, ಶಿವರಾಯ ಲೋಕಮಣಿ, ನೀಲಕಂಠ ಹಡಪದ, ಭೀಮರಾವ ನಿಡಗುಂದಾ, ಮಲ್ಲಿಕಾರ್ಜುನ ಕುರಕುಂಟಾ, ಚಿತ್ರಶೇಖರ ಕೊಳ್ಳಿ, ರಾಮಚಂದ್ರ ಉಡಮಿನೋಳ, ವಿಜಯಕುಮಾರ ಅವರಾದಿ, ಶಿವಶಂಕರ ಅವರಾದಿ, ಸೋಮಶೇಖರ ಪಾಟೀಲ್ ಇದ್ದರು.
    ದೇವಸ್ಥಾನಕ್ಕೆ ಭೂ ದಾನ ನೀಡಿದ ಸಿದ್ದಪ್ಪ ತಳವಾರ, ಈಶ್ವರಪ್ಪ ತಳವಾರ ಹಾಗೂ ಭೀಮರಾಯ ಗರಪಳ್ಳಿ, ಶಿವಶರಣಪ್ಪ ಮರತುರಕರ್ ಅವರನ್ನು ಪೂಜ್ಯರು ಆಶೀರ್ವದಿಸಿದರು. ಸಿದ್ದಣ್ಣ ಪಂಚಾಳ, ಶಿವು ಸ್ವಾಮಿ ಮಠಪತಿ ಪ್ರಾರ್ಥಿಸಿದರು. ರಾಜಶೇಖರ ಬಿಡಪ ನಿರೂಪಣೆ ಮಾಡಿದರು. ಪತ್ರಕರ್ತ ಶಿವಕುಮಾರ ನಿಡಗುಂದ ವಂದಿಸಿದರು.

    ಭರತಹುಣ್ಣಿಮೆ ಮಾರನೇ ದಿನ ಜಾತ್ರೋತ್ಸವಕಳೆದ 3-4 ವರ್ಷಗಳಿಂದ ಸಟಪಟನಹಳ್ಳಿಗೆ ಬರುವಂತೆ ಇಲ್ಲಿನ ಭಕ್ತರು ವಿನಂತಿಸಿದರು. ಆದರೆ ಕಾರಣಾಂತರಗಳಿಂದ ಬರಲು ಆಗಿರಲಿಲ್ಲ. ಆದರೆ ಶಾಸಕರು ವರ್ಷಕ್ಕೊಮ್ಮೆಯಾದರು ಆಗಮಿಸುವಂತೆ ಕೋರಿದ್ದಾರೆ. ಹೀಗಾಗಿ ಮುಂದಿನ ವರ್ಷದಿಂದ ಭರತ ಹುಣ್ಣಿಮೆಯ ಮಾರನೇ ದಿನದಂದು ಜಾತ್ರೋತ್ಸವ ನಡೆಸಲಾಗುವುದು. ಅಂದು ಇಡೀ ದಿನ ಗ್ರಾಮದಲ್ಲಿಯೇ ಇದ್ದು, ಭಕ್ತರನ್ನು ಆಶೀರ್ವದಿಸುತ್ತೇನೆ ಎಂದು ಶ್ರೀ ಮುರುಘರಾಜೇಂದ್ರ ಸ್ವಾಮಿಗಳು ಹೇಳಿದರು.


    ನೂರು ಅಡಿ ಆಳ ತೆಗೆದರೂ ನೀರು ಸಿಗುವುದು ಕಷ್ಟವಾಗುತ್ತಿದೆ. ಅಂತರ್ಜಲ ಕುಸಿಯುತ್ತಿರುವುದು ನೋವಿನ ವಿಚಾರ. ನೂರಡಿ ಆಳದ ಬೋರವೆಲ್ ಕೊರೆಸುವ ಬದಲು ಪ್ರತಿಯೊಬ್ಬರೂ ಮೂರಡಿ ಆಳ ತೆಗೆದು ಸಸಿ ನೆಟ್ಟು ಮರ ಬೆಳೆಸುವ ಕೆಲಸ ಮಾಡಬೇಕು.
    | ಶ್ರೀ ಡಾ.ಮುರುಘರಾಜೇಂದ್ರ ಸ್ವಾಮೀಜಿ, ಮುಗಳಖೋಡ-ಜಿಡಗಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts