More

    ಮಳೆಯಿಂದ ಮನೆಗೆ ನುಗ್ಗಿದ ನೀರು

    ಶಿರಸಿ: ನಗರದ ಯಲ್ಲಾಪುರ ರಸ್ತೆ ಬಳಿ ನೈಸರ್ಗಿಕವಾಗಿ ನೀರು ಹರಿಯುತ್ತಿದ್ದ ಚರಂಡಿಯನ್ನು ಇಲ್ಲಿಯ ಧಾರ್ವಿುಕ ಕೇಂದ್ರವೊಂದರ ವ್ಯಕ್ತಿಗಳು ಬಂದ್ ಮಾಡಿದ್ದರಿಂದ ರಾತ್ರಿ ಸುರಿದ ಮಳೆಯಿಂದಾಗಿ ಚರಂಡಿ ಸಂಪೂರ್ಣ ಬಂದಾಗಿ ಆ ಭಾಗದ ಮನೆಗಳಿಗೆ ನುಗಿದ್ದು, ಕೂಡಲೇ ತೆರವುಗೊಳಿಸದಿದ್ದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸ್ಥಳೀಯರು ಎಚ್ಚರಿಸಿದ್ದಾರೆ.

    ಸೋಮವಾರ ರಾತ್ರಿ ಶಿರಸಿಯಲ್ಲಿ ಏಕಾಏಕಿ ಗುಡುಗು ಸಹಿತ ಭಾರಿ ಮಳೆ ಅಬ್ಬರಿಸಿದ್ದು, ಪಾದುಕಾಶ್ರಮ ಹಾಗೂ ಆಶಾ ಪ್ರಭು ಆಸ್ಪತ್ರೆಯವರು ಗಟಾರ ಮುಚ್ಚಿದ್ದರಿಂದ ಮಳೆ ನೀರು ಸಂಗ್ರಹವಾಗಿತ್ತು. ಇದರಿಂದ ರಸ್ತೆಯೆಲ್ಲಾ ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗಿತ್ತು. ಇಷ್ಟು ವರ್ಷಗಳ ಕಾಲ ಮಳೆಗಾಲದ ನೀರು ಸರಾಗವಾಗಿ ಹರಿದು ಹುಬ್ಬಳ್ಳಿ ರಸ್ತೆ ಮೂಲಕ ಮುಂದಿನ ಕಾಲುವೆ ಸೇರುತ್ತಿತ್ತು. ಆದರೆ, ಏಕಾಏಕಿ ಧಾರ್ವಿುಕ ಕೇಂದ್ರದವರು ಚರಂಡಿಗೆ ಕಲ್ಲು ಮತ್ತು ಸಿಮೆಂಟ್​ನಿಂದ ಕಟ್ಟಿ ಬಂದ್ ಮಾಡಿದ್ದಾರೆ. ಇದರಿಂದ ಸಾವಿರಾರು ಕುಟುಂಬಗಳಿಗೆ ಮಳೆಗಾಲದಲ್ಲಿ ಮನೆಗಳಿಗೆ ನೀರು ನುಗ್ಗಲಿದೆ. ಮೊದಲ ಮಳೆಗೆ ನೀರು ನುಗ್ಗುವ ಮುನ್ಸೂಚನೆ ನೀಡಿದ್ದು, ಮಳೆಗಾಲದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಕೂಡಲೇ ಇದನ್ನು ತೆರವುಗೊಳಿಸದಿದ್ದರೆ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಸ್ಥಳೀಯರು ಎಚ್ಚರಿಸಿದರು.

    ಕಾರವಾರದಲ್ಲಿ ಆಲಿಕಲ್ಲು ಮಳೆ; ಕಾರವಾರ: ಸೋಮವಾರ ರಾತ್ರಿ ಸುರಿದ ಮಳೆಗೆ ನಗರದ ವಿವಿಧೆಡೆ ಮನೆಗಳ ಮೇಲೆ ಮರ ಬಿದ್ದು ಹಾನಿಯಾಗಿದೆ. ಅಮದಳ್ಳಿಯಲ್ಲಿ ಮನೆಯೊಂದರ ಮೇಲೆ ಮರ ಬಿದ್ದು ಹಾನಿಯಾಗಿದೆ. ಮಾಜಾಳಿ ಭಾಗದಲ್ಲಿ ಆಲಿಕಲ್ಲು ಸಮೇತ ಮಳೆಯಾಗಿದೆ. ಇದರಿಂದ ಹಲವು ಮನೆಗಳ ಹಂಚು ಒಡೆದಿದೆ.

    ಶಬ್ದಕ್ಕೆ ಬೆಚ್ಚಿದ ಜನ: ತಾಲೂಕಿನ ಬೈತಖೋಲ್, ಬಿಣಗಾ ಭಾಗದಲ್ಲಿ ರಾತ್ರಿ 12 ಗಂಟೆಯ ಹೊತ್ತಿಗೆ ವಿಚಿತ್ರ ಶಬ್ದ ಬರುತ್ತಿದ್ದು, ಆತಂಕಗೊಂಡ ಜನ ಸುರಿಯುವ ಮಳೆಯಲ್ಲೂ ಮನೆಯಿಂದ ಹೊರ ಬಂದಿದ್ದಾರೆ. ಜೆಟ್ ವಿಮಾನ ನೆಲದ ಅತಿ ಸಮೀಪ ಹೋಗುತ್ತಿದ್ದ ಮಾದರಿಯಲ್ಲಿ ಶಬ್ದ ಕೇಳುತ್ತಿತ್ತು ಎನ್ನಲಾಗಿದೆ. ಆದರೆ, ಶಬ್ದ ಯಾವುದು ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts