More

    ಮಳೆಗೆ ಕೊಳೆಯುತ್ತಿದೆ ಬೆಳೆ

    ಡಂಬಳ: ಹೋಬಳಿ ವ್ಯಾಪ್ತಿಯಲ್ಲಿ ಕಳೆದ ಒಂದು ತಿಂಗಳಿನಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಟಾವಿಗೆ ಬಂದ ಸೂರ್ಯಕಾಂತಿ, ಬಿಟಿ ಹತ್ತಿ ಬೆಳೆ ಜಮೀನಿನಲ್ಲೇ ಕೊಳೆಯುತ್ತಿದ್ದು, ಇದರಿಂದ ರೈತರಲ್ಲಿ ನಷ್ಟ ಅನುಭವಿಸುವಂತಾಗಿದೆ.

    ಗ್ರಾಮದ ಶಿವರಡ್ಡಿ ಬಂಡಿಹಾಳ ಅವರು ತಮ್ಮ 3 ಎಕರೆ ಜಮೀನಿನಲ್ಲಿ ಸೂರ್ಯಕಾಂತಿ ಬಿತ್ತನೆ ಮಾಡಿದ್ದಾರೆ. ಸುಮಾರು 30ರಿಂದ 40 ಸಾವಿರ ರೂ. ಖರ್ಚು ಮಾಡಿದ್ದಾರೆ. ಬೆಳೆ ಕೂಡ ಸಮೃದ್ಧವಾಗಿ ಬಂದಿದ್ದು ಕಟಾವು ಮಾಡಬೇಕಿದೆ. ಆದರೆ, ಬಿಡುವು ಕೊಡದ ಮಳೆಯಿಂದಾಗಿ ಕಟಾವು ಮಾಡಲಾಗದೆ ಜಮೀನಿನಲ್ಲೇ ಕೊಳೆಯುವಂತಾಗಿದೆ. ಹೀಗಾಗಿ ಬಿತ್ತನೆ ಮಾಡಿದ ಖರ್ಚು ಕೂಡ ವಾಪಸ್ ಬರದಂತಹ ಸ್ಥಿತಿ ನಿರ್ವಣವಾಗಿದೆ.

    ಮೇವುಂಡಿ, ಡೋಣಿ, ಹಿರೇವಡ್ಡಟ್ಟಿ, ಶಿವಾಜಿನಗರ, ಡೋಣಿ ತಾಂಡಾ, ಅತ್ತಿಕಟ್ಟಿ, ಕದಾಂಪುರ, ಬರದೂರ ಡಂಬಳ ಹೋಬಳಿ ಸೇರಿ 2900 ಹೆಕ್ಟೇರ್ ಪ್ರದೇಶದಲ್ಲಿ ಸೂರ್ಯಕಾಂತಿ, 1250 ಹೆಕ್ಟೇರ್ ಬಿಟಿ ಹತ್ತಿ ಬಿತ್ತನೆ ಮಾಡಲಾಗಿದೆ. ಬೆಳೆಯು ಕಟಾವಿಗೆ ಬಂದಿದ್ದು ವರ್ಷಧಾರೆಯ ಅಬ್ಬರಕ್ಕೆ ಹೊಲದಲ್ಲೇ ಬೆಳೆ ಹಾಳಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts