More

    ಮಲ್ಲಪ್ಪಾಜೀಯವರದ್ದು ಧೀಮಂತ ವ್ಯಕ್ತಿತ್ವ


    ಯಾದಗಿರಿ: ಹಲವು ದಶಕದ ಕಾಲ ಸಕ್ರೀಯ ರಾಜಕೀಯದಲ್ಲಿದ್ದರೂ ಅಧಿಕಾರದ ಆಸೆ ಪಡದೆ ಬಡವರ ಉದ್ಧಾರಕ್ಕೆ ಶ್ರಮಿಸಿದ ಮಂತ ನಾಯಕ ಕುಯಿಲೂರು ಮಲ್ಲಪ್ಪನವರು ಎಂದು ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿನಿಖಿಲ ವ್ಹಿ.ಶಂಕರ್ ತಿಳಿಸಿದರು.
    ನಗರದ ಮಲ್ಲಪ್ಪ ಲೇಔಟ್ನಲ್ಲಿ ಗುರುವಾರ ಆಯೋಜಿಸಿದ್ದ ಹೈದರಾಬಾದ್ (ಕಲ್ಯಾಣ) ಕರ್ನಾಟಕ,ದ ಗಾಂ ಎಂದೇ ಖ್ಯಾತಿಯಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಕುಯಿಲೂರು ಮಲ್ಲಪ್ಪನವರ 117ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ನಿಜಾಮರ ಕಪಿಮುಷ್ಠಿಯಲ್ಲಿ ಸಿಲುಕಿದ್ದ ನಮ್ಮ ಭಾಗವನ್ನು ಬಂಧಮುಕ್ತಗೊಳಿಸಲು ಮಲ್ಲಪ್ಪಾಜಿ ಮಾಡಿದ ಹೋರಾಟ, ತ್ಯಾಗ ಅಜರಾಮರ ಎಂದರು.
    ತಮ್ಮ ಕಿರಿಯ ವಯಸ್ಸಿನಲ್ಲಿಯೇ ರಾಷ್ಟ್ರಪಿತ ಮಹಾತ್ಮ ಗಾಂಜಿಯವರಿಂದ ಪ್ರಭಾವಿತರಾಗಿ ಬ್ರಿಟಿಷರ ವಿರುದ್ಧ ಹೋರಾಟಕ್ಕೆ ಧುಮುಕಿದ ಮಲ್ಲಪ್ಪ ಹೈದರಾಬಾದ್ ಕನರ್ಾಟಕದ ಗಾಂ ಎಂದೇ ಚಿರಪರಿಚಿತರಾಗಿದ್ದರು. 1905ರಲ್ಲಿ ಜನಿಸಿದ ಕುಯಿಲೂರು ಮಲ್ಲಪ್ಪ ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಕುಷ್ಠರೋಗಿಗಳ ಅನುಕೂಲಕ್ಕಾಗಿ ನಗರದಲ್ಲಿ ಜನತಾ ಕಾಲೋನಿ ಸ್ಥಾಪನೆ ಮಾಡಿದ್ದರು ಎಂದು ಹೇಳಿದರು.
    ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಮಲ್ಲಪ್ಪಾಜಿ ಅವರ ಸ್ಮಾರಕ ನಿಮರ್ಾಣಕ್ಕೆ 2 ಕೋಟಿ ರೂ.ಅನುದಾನ ನೀಡಿದ್ದರು. ಆದರೆ ಇದುವರೆಗೂ ಸ್ಮಾರಕ ನಿಮರ್ಾಣವಾಗದಿರುವುದು ಅಭಿಮಾನಿಗಳಲ್ಲಿ ಬೇಸರ ತರಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಇದೇ ವೇಳೆ ಗ್ರಾಪಂ ಸದಸ್ಯ ಹಣಮಂತ್ರಾಯಗೌಡ ಮಾಲೀ ಪಾಟೀಲ್, ಭೀಮಣ್ಣ ಮೂಲಿಮನಿ, ನಿಂಗಣ್ಣ ಜಡಿ, ಬೀರಲಿಂಗ ಬಾದ್ಯಾಪುರ, ಕೃಷ್ಣಮೂತರ್ಿ ಕುಲಕಣರ್ಿ, ಸಿದ್ದಪ್ಪ ಕುಯುಲೂರು, ರಾಕೇಶ ಮೈಸೂರ, ವಿಜಯಕುಮಾರ ಬಾದ್ಯಾಪುರ, ಬಸವರಾಜ ಕವಲಿ ಹರಟೂರ, ಬಸಲಿಂಗಪ್ಪ ಹುಲಕಲ್, ರವಿ ಲಿಂಗೇರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts