More

    ಮಲೆನಾಡಿನಲ್ಲಿ ಹೆಚ್ಚಾದ ಎಲೆಚುಕ್ಕಿ ರೋಗ


    ಶೃಂಗೇರಿ: ಹಳದಿ ಎಲೆ, ಕೊಳೆರೋಗದಿಂದ ಹೈರಾಣಾಗಿರುವ ಮಲೆನಾಡಿನ ಪ್ರಮುಖ ಬೆಳೆ ಅಡಕೆಗೆ ಹವಾಮಾನ ವೈಪರೀತ್ಯದಿಂದ ಎಲೆಚುಕ್ಕಿ ರೋಗ ಕಂಡುಬಂದಿದ್ದು ಕೃಷಿಕರ ಆರ್ಥಿಕ ಸ್ಥಿತಿ ಅತಂತ್ರವಾಗಿದೆ ಎಂದು ಮೂಡಿಗೆರೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಗಿರೀಶ್ ಹೇಳಿದರು.
    ರೈತ ದಿನಾಚರಣೆ ಅಂಗವಾಗಿ ತಾಲೂಕು ಕೃಷಿಕ ಸಮಾಜ, ಕೃಷಿ ಮತ್ತು ತೋಟಗಾರಿಕಾ ಇಲಾಖೆ ಸೋಮವಾರ ಹಮ್ಮಿಕೊಂಡಿದ್ದ ಅಡಕೆ ಬೆಳೆಯಲ್ಲಿ ಎಲೆಚುಕ್ಕಿ ರೋಗ ನಿರ್ವಹಣೆ ಹಾಗೂ ಹತೋಟಿ ಕುರಿತು ಉಪನ್ಯಾಸ ನೀಡಿದರು.
    ಗಾಳಿ, ಮಳೆ, ಬಿಸಿಲು ಎದುರಾದಾಗ ಎಲೆಚುಕ್ಕಿ ರೋಗದ ತೀವ್ರತೆ ಹೆಚ್ಚಾಗುತ್ತದೆ. ರೋಗ ನಿವಾರಣೆಗೆ ಬಾಧಿತ ಎಲೆಗಳನ್ನು ತೆಗೆಯಬೇಕು. ತಜ್ಞರು ಶಿಫಾರಸು ಮಾಡಿದ ಮ್ಯಾಂಕೋಜೆಬ್, ಕಾಬೋಮೆಂಡೈಜೆನ್ ಔಷಧಗಳನ್ನು ಎಲೆಗಳಿಗೆ ಸಿಂಪಡಿಸಿದರೆ ರೋಗ ಹತೋಟಿಗೆ ಬರುತ್ತದೆ ಎಂದರು.
    ವರ್ಷಕೊಮ್ಮೆ ಅಡಕೆ ಮರದ ಸುಳಿ, ಗರಿಗಳಿಗೆ ಬೋಡೋ ದ್ರಾವಣ ಸಿಂಪಡಿಸಬೇಕು. ಮಲೆನಾಡಿನಲ್ಲಿ ಮಳೆ ಅಧಿಕವಾಗಿರುವುದರಿಂದ ಭೂಮಿಗೆ ಸುಣ್ಣ ನೀಡಬೇಕು. ಅಡಕೆ ಗಿಡಗಳಿಗೆ ಕೊಟ್ಟಿಗೆ ಹಾಗೂ ಜೀವಾಣು ಗೊಬ್ಬರ ನೀಡಬೇಕು. ರೈತರು ಸಾವಯವ ಕೃಷಿಗೆ ಹೆಚ್ಚಿನ ಒತ್ತು ನೀಡಬೇಕು. ಕಾಳುಮೆಣಸಿನ ಬಳ್ಳಿಗಳಿಗೆ ಸೊರಗು ರೋಗ ಕಾಣಿಸಿಕೊಳ್ಳುತ್ತಿದ್ದು ಪ್ರತಿರೋಧಕ ಶಕ್ತಿ ಇರುವ ತಳಿಗಳನ್ನು ಆಯ್ಕೆ ಮಾಡಿ ಎಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts