More

    ವಿಜ್ಞಾನ ಮಾದರಿ ಪ್ರದರ್ಶನ ಅವಶ್ಯಕ; ರವಿಕುಮಾರ

    ರಾಣೆಬೆನ್ನೂರ: ವಿದ್ಯಾರ್ಥಿಗಳಲ್ಲಿರುವ ಪ್ರತಿಭೆ ಹಾಗೂ ಕೌಶಲ ಗುರುತಿಸಿ ಉತ್ತೇಜಿಸಲು ಶಾಲಾ ಹಂತದಲ್ಲಿ ವಿಜ್ಞಾನ ಮಾದರಿ ಪ್ರದರ್ಶನ ಅವಶ್ಯಕವಾಗಿದೆ ಎಂದು ಚಳಗೇರಿ ಕ್ಲಸ್ಟರ್ ಸಿಆರ್‌ಪಿ ರವಿಕುಮಾರ ಹೇಳಿದರು.
    ತಾಲೂಕಿನ ಮಾಗೋಡ ಬಳಿಯ ರೇನ್ ಬೋ ರೆಸಿಡೆನ್ಸಿಯಲ್ ಸ್ಕೂಲ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ವಿವಿಷಯಾಧರಿತ, ದಿನ ಬಳಕೆಯ ಗೃಹಪಯೋಗಿ ಪದಾರ್ಥಗಳ ಪರಿಕರಗಳ, ವೈಜ್ಞಾನಿಕ ಪ್ರಯೋಗಗಳ ಹಾಗೂ ಐತಿಹಾಸಿಕ ವಿಶೇಷಗಳ ಮಾದರಿಗಳ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
    ವಿದ್ಯಾರ್ಥಿಗಳು ತಾವು ತಯಾರಿಸಿದ ವಿವಿಧ ಮಾದರಿಗಳನ್ನು ಪ್ರದರ್ಶನ ಮಾಡಿದರು.
    ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಸುರೇಶ ಸಿ.ಟಿ, ಉಪಾಧ್ಯಕ್ಷೆ ಲಲಿತಾ ಸುರೇಶ, ಎಸ್.ಎನ್. ಕಟ್ಟಿಮನಿ, ಮಾಲತೇಶ ಐ.ಕೆ., ನಾಗರಾಜ ಎಸ್.ಕೆ. ಹಾಗೂ ಸಿಬ್ಬಂದಿ ಇದ್ದರು.
    ವಿದ್ಯಾರ್ಥಿ ತನುಶ್ರೀ ಆರ್.ಬಿ. ನಿರೂಪಿಸಿದರು. ಮಾನ್ಯ ಪಿ.ಕೆ. ಹಾಗೂ ಗಿರಿಜಾ ಪಿ. ಸ್ವಾಗತಿಸಿದರು. ಯಶವಂತ ರೆಡ್ಡಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts