More

    ಮಲಯ ಮಾರ್ಟ್ ಆರಂಭ ನಾಡಿದ್ದು

    ಮುಂಡಗೋಡ: ಪಟ್ಟಣದಲ್ಲಿ ಜು. 7ರಂದು ಮಲಯ ಮಾರ್ಟ್ (ಸೂಪರ್ ಮಾರ್ಕೆಟ್) ಆರಂಭಿಸುತ್ತಿರುವುದು ಲಾಭಕ್ಕಿಂತ ಹೆಚ್ಚಾಗಿ ಸಮಾಜ ಸೇವೆ ಮಾಡಲು ಎಂದು ಮಲಯ ಮಾರ್ಟ್ ಮಾಲೀಕರಾದ ವೀಣಾ ಬಸವರಾಜ ಓಶಿಮಠ ಹೇಳಿದರು.

    ಪಟ್ಟಣದ ಎಚ್.ಪಿ. ಗ್ಯಾಸ್ ವಿತರಣೆ ಕೇಂದ್ರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಮಲಯ ಮಾರ್ಟ್ ಪಟ್ಟಣದ ಬಸವನ ಬೀದಿಯಲ್ಲಿರುವ ಬಸವಣ್ಣ ದೇವಸ್ಥಾನದ ವ್ಯಾಪಾರ ಮಳಿಗೆಯಲ್ಲಿ (ಎಚ್.ಪಿ. ಗ್ಯಾಸ್ ವಿತರಣೆ ಕೇಂದ್ರದ ಪಕ್ಕ) ಆರಂಭವಾಗಲಿದೆ. ಪ್ರಾರಂಭೋತ್ಸವದ ದಿನ ಮೊದಲು ಬರುವ ಗ್ರಾಹಕನಿಂದ ಮಲಯ ಮಾರ್ಟ್ ಆರಂಭಿಸಲಾಗುವುದು ಎಂದರು. ದಿನ ಬಳಕೆಯ ಗೃಹೂಪಯೋಗಿ ಕಿರಾಣಿ, ಸ್ಟೇಷನರಿ, ಸುಗಂಧ ದ್ರವ್ಯಗಳು, ಗಿಡ ಮೂಲಿಕೆಗಳು, ಪತಂಜಲಿ ಉತ್ಪನ್ನಗಳನ್ನು ಹೋಲ್​ಸೇಲ್ ಹಾಗೂ ರಿಟೇಲ್ ದರದಲ್ಲಿ ಮಾರಾಟ ಮಾಡಲಾಗುವುದು. ಕೋವಿಡ್- 19ನಿಂದ ಗ್ರಾಹಕರು ಭಯಪಡಬೇಕಾಗಿಲ್ಲ. ಮಾರಾಟ ಕೇಂದ್ರವನ್ನು ಸಂಪೂರ್ಣವಾಗಿ ಸ್ಯಾನಿಟೈಸರ್​ಗೊಳಿಸಲಾಗಿದೆ ಎಂದು ವೀಣಾ ಓಶಿಮಠ ತಿಳಿಸಿದರು. ಈ ವೇಳೆ ಎಚ್.ಪಿ. ಗ್ಯಾಸ್ ವಿತರಕ, ಬಿಜೆಪಿ ಮುಖಂಡ ಬಸವರಾಜ ಓಶಿಮಠ, ಅಲ್ಲಂ ಓಶಿಮಠ ಮತ್ತು ಸರೋಜ ಓಶಿಮಠ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts