More

    ಮರಾಠ ಅಭಿವೃದ್ಧಿ ನಿಗಮಕ್ಕೆ ಎಂ.ಜಿ.ಮುಳೆ ಅಧ್ಯಕ್ಷ

    ಮಾರ್ಥಂಡ ಜೋಶಿ ಬಸವಕಲ್ಯಾಣ
    ಮರಾಠ ಸಮಾಜದ ಹಿರಿಯ ಮುಖಂಡ, ಮಾಜಿ ಶಾಸಕ ಮಾರುತಿರಾವ ಗೋವಿಂದರಾವ(ಎಂ.ಜಿ.) ಮುಳೆ ಅವರಿಗೆ ಕನರ್ಾಟಕ ಮರಾಠ ಅಭಿವೃದ್ಧಿ ನಿಗಮದ ಸಾರಥ್ಯ ವಹಿಸಲಾಗಿದೆ.

    ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ದಿನವಾದ ಶನಿವಾರ ಬೆಂಗಳೂರಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಘೋಷಣೆ ಮಾಡಿದರು. ಇದರ ಬೆನ್ನಲ್ಲೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಕರ್ಾರದ ಅಧೀನ ಕಾರ್ಯದಶರ್ಿ ವಿ.ಅಕ್ಕಮಹಾದೇವಿ ಅಧಿಕೃತ ಆದೇಶ ಹೊರಡಿಸಿದ್ದಾರೆ. ನಿಗಮಕ್ಕೆ ಮುಳೆ ಮೊದಲ ಅಧ್ಯಕ್ಷ ಎಂಬುದು ವಿಶೇಷ. ಇದು ಗಡಿ ಭಾಗದ ಮರಾಠ ಸಮಾಜದಲ್ಲಿ ಸಂಭ್ರಮ ತಂದಿದೆ.

    ಶಾಸಕ ಬಿ.ನಾರಾಯಣರಾವ್ ನಿಧನದಿಂದಾಗಿ ಕಳೆದ ವರ್ಷ ನಡೆದ ಉಪ ಚುನಾವಣೆ ವೇಳೆ ಮರಾಠ ಸಮಾಜಕ್ಕೆ 2ಎಗೆ ಸೇರ್ಪಡೆ, ಅಭಿವೃದ್ಧಿ ನಿಗಮ ಸ್ಥಾಪನೆ, ಶಿವಾಜಿ ಪಾಕರ್್ ನಿಮರ್ಾಣ ಇತರ ಭರವಸೆಗಳು ಅಂದಿನ ಸಿಎಂ ಯಡಿಯೂರಪ್ಪ, ಆಗ ಗೃಹ ಸಚಿವರಾಗಿದ್ದ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದರು. ಇಂದು ನಿಗಮಕ್ಕೆ ಅಧ್ಯಕ್ಷರಾಯ್ಕೆಯು ಕಾರ್ಯರೂಪಕ್ಕೆ ಬಂದಿದೆ. ಮುಳೆ ನೇಮಕ ಜತೆಗೆ ಮರಾಠ ನಿಗಮದ ಚಟುವಟಿಕೆಗಳಿಗೂ ಅಧಿಕೃತ ಚಾಲನೆ ನೀಡಿದಂತಾಗಿದೆ.
    ಛತ್ರಪತಿ ಶಿವಾಜಿ ಜಯಂತಿ ಮುನ್ನ ದಿನವಾದ ಶುಕ್ರವಾರ ಬಸವಕಲ್ಯಾಣದಲ್ಲಿ ಶಿವಾಜಿ ಪಾಕರ್್ಗಾಗಿ ಜಿಲ್ಲಾಡಳಿತ 8 ಎಕರೆ ಜಮೀನು ಮಂಜೂರಿ ಮಾಡಿ ಆದೇಶ ಹೊರಡಿಸಿದ್ದರೆ, ಜಯಂತಿ ದಿನದಂದು ಮರಾಠ ನಿಗಮಕ್ಕೆ ಸಕರ್ಾರ ಮುಳೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಿ ಸಮಾಜಕ್ಕೆ ಡಬಲ್ ಕೊಡುಗೆ ಕೊಟ್ಟಿದೆ.

    ಮರಾಠ ಸಮಾಜದ ಪ್ರಭಾವಿ ನಾಯಕರಲ್ಲಿ ಮುಳೆ ಒಬ್ಬರು. ಕಳೆದ ಉಪ ಚುನಾವಣೆ ವೇಳೆ ಬಿಜೆಪಿ ಸೇರಿದ್ದರು. ಮುಳೆ ಅವರ ಈ ನಡೆ ಮತ್ತು ಸಮಾಜದ ಬೆಂಬಲ ಬಿಜೆಪಿ ಅಭ್ಯಥರ್ಿ ಶರಣು ಸಲಗರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು ಎಂಬುದು ಗಮನಾರ್ಹ. ಸಕರ್ಾರ(ಬಿಜೆಪಿ) ಸಹ ಮುಳೆ ಅವರಿಗೆ ಪ್ರಮುಖ ಹುದ್ದೆ ನೀಡುವ ಮೂಲಕ ಉಪ ಚುನಾವಣೆಯ ಬೋನಸ್ ನೀಡಿ ಸಮುದಾಯದ ಋಣ ತೀರಿಸಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

    ಹೀಗಿದೆ ಸೋಲು-ಗೆಲುವಿನ ಹಾದಿ…
    ಮೂರೂವರೆ ದಶಕದಿಂದ ಸಕ್ರಿಯ ರಾಜಕೀಯದಲ್ಲಿರುವ ಎಂ.ಜಿ.ಮುಳೆ ಅನೇಕ ಏಳು-ಬೀಳುಗಳು ಕಂಡಿದ್ದಾರೆ. ಅಧಿಕಾರವಿರಲಿ, ಇಲ್ಲದಿರಲಿ ಸದಾ ಸಮಾಜದ ಹಿತ ಬಯಸಿ ಕೆಲಸ ಮಾಡಿರುವುದು ವಿಶೇಷ. 1985ರಿಂದ ಮೂರು ಸಲ ಕಾಂಗ್ರೆಸ್ನಿಂದ ಬಸವಕಲ್ಯಾಣ ವಿಧಾನಸಭೆಗೆ ಸ್ಪಧರ್ಿಸಿ ಸೋತರು. 1999ರಲ್ಲಿ ಕಾಂಗ್ರೆಸ್ ಟಿಕೆಟ್ ಕೈತಪ್ಪಿದಾಗ ಜೆಡಿಎಸ್ನಿಂದ ಕಣಕ್ಕಿಳಿದು ಮೊದಲ ಬಾರಿ ವಿಧಾನಸಭೆಗೆ ಪ್ರವೇಶಿಸಿದರು. ಗೆದ್ದ ನಂತರ ಮತ್ತೆ ಕಾಂಗ್ರೆಸ್ ಸೇರಿ 2004 ಮತ್ತು 2008ರಲ್ಲಿ ಸ್ಪಧರ್ಿಸಿ ಸೋಲುಂಡರು. 2013ರಲ್ಲಿ ಬಿಎಸ್ಆರ್ ಕಾಂಗ್ರೆಸ್ನಿಂದ ಕಣಕ್ಕಿಳಿದು ಪರಾಭವಗೊಂಡರು. 2018ರಲ್ಲಿ ಜೆಡಿಎಸ್ನಿಂದ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಮರಾಠ ಸಮಾಜದ ಹಿರಿಯ ಮುಖಂಡ ಪಿ.ಜಿ.ಆರ್.ಸಿಂಧ್ಯಾ ಅವರಿಗೆ ದಳಪತಿಗಳು ಮಣೆ ಹಾಕಿದ್ದರಿಂದ ಟಿಕೆಟ್ ಕೈತಪ್ಪಿತು. ಶಾಸಕ ಬಿ. ನಾರಾಯಣರಾವ್ ನಿಧನದ ಹಿನ್ನೆಲೆಯಲ್ಲಿ ಕಳೆದ ವರ್ಷ ನಡೆದ ಉಪ ಚುನಾವಣೆಯಲ್ಲಿ ಶರದ್ ಪವಾರ್ ನೇತೃತ್ವದ ಎನ್ಸಿಪಿ ಸೇರಿ ನಾಮಪತ್ರ ಸಲ್ಲಿಸಿದರು. ಬಳಿಕ ವಾಪಸ್ ಪಡೆದು ನಂತರ ಕೇಸರಿಪಡೆಗೆ ಜೈ ಎಂದು ಶರಣು ಸಲಗರ ಗೆಲುವಿಗೆ ಕೈಜೋಡಿಸಿದ್ದರು. ಸಮಾಜದ ಹಿತದಿಂದ ಬಿಜೆಪಿಗೆ ಸೇರಿದ್ದಾಗಿ ಮುಳೆ ತಮ್ಮ ಈ ನಡೆಯನ್ನು ಸಮಥರ್ಿಸಿಕೊಂಡಿದ್ದಕ್ಕೂ ಈಗ ಫಲ ಸಿಕ್ಕಂತಾಗಿದೆ.


    ಎಂ.ಜಿ.ಮುಳೆ ಅವರು ಅನುಭವಿ, ಸರಳ ಹಾಗೂ ಮರಾಠ ಸಮಾಜದ ಹಿರಿಯ ಮುಖಂಡರು. ಅವರನ್ನು ನಿಗಮದ ಅಧ್ಯಕ್ಷರಾಗಿ ಮಾಡುವ ಮೂಲಕ ಮಕ್ಕಳಿಗೆ ಶಿಕ್ಷಣ, ಉದ್ಯೋಗ ಹಾಗೂ ಸಮಾಜದ ಅಭಿವೃದ್ಧಿಗೆ ಸಕರ್ಾರ ಬದ್ಧವಿದೆ ಎಂಬುದನ್ನು ತೋರಿಸಿಕೊಟ್ಟಿದೆ. ಮರಾಠ ಸಮಾಜದ ಹಿತದಿಂದ ಮಂಡಳಿಗೆ ಆಥರ್ಿಕ ಮತ್ತು ಆಡಳಿತಾತ್ಮಕವಾಗಿ ಸಕರ್ಾರ ಅಗತ್ಯ ನೆರವು ನೀಡಲಿದೆ.
    | ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts