More

    ವಚನ ಸಾಹಿತ್ಯದಲ್ಲಿದೆ ಆದರ್ಶ ಬದುಕಿನ ಸೂತ್ರ

    ಬಸವಕಲ್ಯಾಣ: ಜಾಗತಿಕ ಮೌಲ್ಯ ಮತ್ತು ಆದರ್ಶ ಬದುಕಿನ ಸೂತ್ರಗಳು ವಚನ ಸಾಹಿತ್ಯದಲ್ಲಿವೆ. ವಚನಗಳನ್ನು ಅರಿತು ಅಳವಡಿಸಿಕೊಂಡಾಗ ಆದರ್ಶ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದು ಹುಲಸೂರು ಗುರುಬಸವೇಶ್ವರ ಸಂಸ್ಥಾನ ಮಠದ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ನುಡಿದರು.

    ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಹಾಗೂ ವಿಶ್ವಸ್ಥ ಸಮಿತಿಯಿಂದ ಶುಕ್ರವಾರ ಸಂಜೆ ಆಯೋಜಿಸಿದ್ದ ೨೦ ದಿನದ ಬಸವ ಪುರಾಣ ಪ್ರವಚನದ ಉದ್ಘಾಟನಾ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಶ್ರೀಗಳು, ಭೀಮಕವಿ ಬರೆದಿರುವ ಬಸವ ಪುರಾಣವನ್ನು ವಿಸ್ತಾರವಾಗಿ ಪ್ರಸ್ತುತಪಡಿಸಲಾಗುತ್ತದೆ. ವೈಚಾರಿಕ ಚಿಂತನೆ ಬೇರೆ, ಬಸವ ಪುರಾಣ ಬೇರೆ. ಅದನ್ನು ಹೇಳುವ ಸಿದ್ಧಿ ವಿರೂಪಾಕ್ಷ ಸ್ವಾಮೀಜಿಯವರಿಗೆ ಮಾತ್ರ ಸಾಧಿಸಿದೆ ಎಂದರು.

    ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಗುರುಬಸವ ಪಟ್ಟದ್ದೇವರು ಆಶೀರ್ವಚನ ನೀಡಿ, ಬಸವಣ್ಣನವರು ಬಿಜ್ಜಳ ರಾಜನ ಆಸ್ಥಾನದಲ್ಲಿ ಮಹಾಮಂತ್ರಿಯಾಗಿ ಸಾಮಾಜಿಕ ನ್ಯಾಯದೊಂದಿಗೆ ಅಧಿಕಾರದ ಸದ್ಬಳಕೆ ಮಾಡಿಕೊಂಡಿದ್ದರು. ರಾಜನ ಮಗ ರಾಜ ಆಗಲಿ ಎನ್ನದೆ ಪ್ರಜೆ ರಾಜನಾಗಲಿ, ಶಿಷ್ಯ ಶ್ರೇಷ್ಠತ್ವ ಪಡೆದು ಗುರು ಆಗಲಿ ಎಂದು ಅವರು ಬಯಸಿದ್ದರು ಎಂದು ಸ್ಮರಿಸಿದರು.

    ಶಾಸಕ ಶರಣು ಸಲಗರ ಕಾರ್ಯಕ್ರಮ ಉದ್ಘಾಟಿಸಿದರು. ಉಪ್ಪಿನ ಬೆಟಗೇರಿಯ ಶ್ರೀ ಕುಮಾರ ವಿರೂಪಾಕ್ಷ ಮಹಾಸ್ವಾಮೀಜಿ ಪುರಾಣ ಕಾರ್ಯðಕ್ರಮ ನಡೆಸಿಕೊಟ್ಟರು.

    ಬಸವೇಶ್ವರ ದೇವಸ್ಥಾನ ಪಂಚ ಚಮಿಟಿ ಅಧ್ಯಕ್ಷ ಬಸವರಾಜ ಕೋರಕೆ, ವಿಶ್ವಸ್ಥ ಸಮಿತಿ ಅಧ್ಯಕ್ಷ ಶಶಿಕಾಂತ ದುರ್ಗೆ, ಉಪಾಧ್ಯಕ್ಷ ಡಾ.ಜಿ.ಎಸ್. ಭುರಳೆ, ಬಿಡಿಪಿಸಿ ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ಸಹ ಕಾರ್ಯದರ್ಶಿ ವಿವೇಕಾನಂದ ಹೊದಲೂರೆ, ನಿರ್ದೇಶಕರಾದ ಅಶೋಕ ನಾಗರಾಳೆ, ರೇವಣಪ್ಪ ರಾಯವಾಡೆ, ಬಿಡಿವಿಸಿ ಕಾರ್ಯದರ್ಶಿ ನಾಗಯ್ಯ ಸ್ವಾಮಿ, ಶಿವರಾಜ ಶಾಶೆಟ್ಟೆ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ರಾಜಕುಮಾರ ಸಿರಗಾಪುರ, ಹಾರಕೂಡದ ಮಾಜಿ ಮಂಡಲ ಪ್ರಧಾನ ಮೇಘರಾಜ ನಾಗರಾಳೆ ಇತರರಿದ್ದರು.

    ವಿಶ್ವಗುರು ಬಸವಣ್ಣವರು ಭಕ್ತಿ ಸಾಮ್ರಾಜ್ಯ ಕಟ್ಟಿ ಇವನಾರವ ಎನ್ನದೆ ಇವ ನಮ್ಮವ ಎಂದು ಹೇಳಿ ಜಾತಿ ಭೇದ ಮಾಡದೆ ಎಲ್ಲರನ್ನೂ ಸಮಾನವಾಗಿ ಕಂಡಿದ್ದರು. ಅಂತಲೇ ಅಲ್ಲಮಪ್ರಭು ದೇವರು ಬಸವಣ್ಣನವರುನ್ನು ಗುರು ಎಂದು ಸಂಬೋಧಿಸಿದರು. ಬಸವಣ್ಣನವರ ಜೀವನ ಚರಿತ್ರೆಯನ್ನು ಮೂರು ವಾರ ಪ್ರವಚನದ ಮೂಲಕ ಶ್ರೀ ವಿರೂಪಾಕ್ಷ ಸ್ವಾಮೀಜಿ ಪ್ರಸ್ತುತಪಡಿಸಲಿದ್ದಾರೆ.
    | ಶ್ರೀ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ

    ಅಕ್ಕಮಹಾದೇವಿ ಕಾಲೇಜಿನಲ್ಲಿ ಪ್ರವಚನ: ಬಸವಕಲ್ಯಾಣದ ಅಕ್ಕಮಹಾದೇವಿ ಕಾಲೇಜು ಮೈದಾನದಲ್ಲಿ ಮಾರ್ಚ್ ೧೩ರವರೆಗೆ (೨೦ ದಿನ) ಸಂಜೆ ೬ರಿಂದ ೭.೩೦ರವರೆಗೆ ಬಸವಾದಿ ಶರಣರ ಜೀವನ ದರ್ಶನ ವಿಷಯ ಕುರಿತ ಬಸವ ಪುರಾಣ ಪ್ರವಚನವನ್ನು ಧಾರವಾಡ ಜಿಲ್ಲೆ ಮೂರುಸಾವಿರ ಮಠ ಉಪ್ಪಿನ ಬೆಟಗೇರಿಯ ಶ್ರೀ ಕುಮಾರ ವಿರೂಪಾಕ್ಷ ಮಹಾಸ್ವಾಮೀಜಿ ನಡೆಸಿಕೊಡಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts