More

    ಜ್ಞಾನದ ಬೆಳಕು ತೋರಿದ ದಾರ್ಶನಿಕ ಅಲ್ಲಮ

    ಬಸವಕಲ್ಯಾಣ: ಲಿಂಗಾಂಗ ಯೋಗದ ಮೂಲಕ ಅಂಗವೇ ಲಿಂಗ, ಲಿಂಗವೇ ಅಂಗ ಎಂದು ತೋರಿಸಿಕೊಟ್ಟ ಮಹಾ ಗುರು ಶ್ರೀ ಅಲ್ಲಮಪ್ರಭು ದೇವರು ಎಂದು ಹುಲಸೂರಿನ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಬಣ್ಣಿಸಿದರು.

    ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಹಾಗೂ ವಿಶ್ವಸ್ಥ ಸಮಿತಿಯಿಂದ ಶೂನ್ಯ ಸಿಂಹಾಸನ ಪೀಠಾಧ್ಯಕ್ಷ ಅಲ್ಲಮಪ್ರಭು ದೇವರ ಜಯಂತಿ ನಿಮಿತ್ತ ನಗರಲ್ಲಿ ಮಂಗಳವಾರ ಪಲ್ಲಕ್ಕಿ ಮೆರವಣಿಗೆ ನಂತರ ಅಲ್ಲಮಪ್ರಭು ದೇವರ ಗದ್ದುಗೆ ಮಠದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ಅವರು, ಅಜ್ಞಾನ ಕಳೆದು ಜ್ಞಾನದ ಬೆಳಕು ತೋರಿದ ಶ್ರೇಷ್ಠ ದಾರ್ಶನಿಕ ಅಲ್ಲಮರು ಎಂದರು.

    ಅಲ್ಲಮಪ್ರಭು ದೇವರು ವಿರಕ್ತ ಪರಂಪರೆ ಮಠಗಳ ಮೂಲ ಪುರುಷರು. ಅವರು ಸ್ಥಾಪಿಸಿದ ವಿರಕ್ತ ಮಠ ಪರಂಪರೆ ವ್ಯಾಪಕವಾಗಿ ಬೆಳೆದಿದ್ದು, ನಾಡಿನ ಎಲ್ಲ ವಿರಕ್ತ ಮಠಗಳಲ್ಲಿ ವಿಶ್ವಗುರು ಬಸವಣ್ಣ ಹಾಗೂ ಅಲ್ಲಮಪ್ರಭು ದೇವರ ಭಾವಚಿತ್ರ ಕಡ್ಡಾಯವಾಗಿ ಅಳವಡಿಸಬೇಕು ಎಂದು ಒತ್ತಾಸೆ ವ್ಯಕ್ತಪಡಿಸಿದರು.

    ಸಾಯಗಾಂವದ ಶ್ರೀ ಶಿವಾನಂದ ಸ್ವಾಮೀಜಿ ಪ್ರಾರ್ಥನೆ ನಡೆಸಿಕೊಟ್ಟರು. ಅನುಭವ ಮಂಟಪ ಟ್ರಸ್ಟ್ ಸಂಚಾಲಕರಾದ ಶ್ರೀ ಶಿವಾನಂದ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೊರಕೆ, ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಉಪಾಧ್ಯಕ್ಷ ಡಾ.ಜಿ.ಎಸ್. ಭುರಳೆ, ಬಿಡಿಪಿಸಿ ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ಸಹ ಕಾರ್ಯದರ್ಶಿ ವಿವೇಕ ಹೊದಲೂರೆ, ಕೋಶಾಧ್ಯಕ್ಷ ರಾಜಕುಮಾರ ಹೊಳಕುಂದೆ, ನಿರ್ದೇಶಕರಾದ ಸುಭಾಷ ಹೊಳಕುಂದೆ, ಅನೀಲಕುಮಾರ ರಗಟೆ, ಕಾಶಪ್ಪ ಸಕ್ಕರಬಾವಿ, ಮಲ್ಲಯ್ಯ ಸ್ವಾಮಿ, ಜಗನ್ನಾಥ ಖೂಬಾ, ಅಶೋಕ ನಾಗರಾಳೆ, ಬದ್ರಿನಾಥ ಪಾಟೀಲ್, ರೇವಣಪ್ಪ ರಾಯವಾಡೆ, ವಿಜಯಲಕ್ಷ್ಮೀ ಗಡ್ಡೆ, ವಿಶ್ವಸ್ಥರಾದ ಶಿವರಾಜ ಶಾಶೆಟ್ಟಿ, ಗದಗೆಪ್ಪ ಗಲಶೆಟ್ಟಿ, ಸೋಮಶೇಖರಯ್ಯ ವಸ್ತçದ, ನಾಗಯ್ಯ ಸ್ವಾಮಿ, ಮಲ್ಲಿನಾಥ ಮಂಠಾಳೆ, ಪ್ರಮುಖರಾದ ಬಸವರಾಜ ಬಾಲಿಕಿಲೆ, ಗುರುಪಾದಪ್ಪ ಪಾಟೀಲ್, ಮಲ್ಲಿಕಾರ್ಜುನ ವಾಂಜರಖೇಡೆ ಇತರರಿದ್ದರು. ಡಾ.ರುದ್ರಮುನಿ ಮಠಪತಿ ಸ್ವಾಗತಿಸಿ ನಿರೂಪಣೆ ಮಾಡಿದರು.

    ವೈಭವದ ಮೆರವಣಿಗೆ: ಅಲ್ಲಮಪ್ರಭು ದೇವರ ಜಯಂತಿ ನಿಮಿತ್ತ ಶ್ರೀ ಬಸವೇಶ್ವರ ದೇವಸ್ಥಾನದಿಂದ ಪರುಷ ಕಟ್ಟೆ, ಕೋಟೆ ಮೂಲಕ ಮುಖ್ಯ ರಸ್ತೆ ಮಾರ್ಗವಾಗಿ ಗದ್ದುಗೆ ಮಠದವರೆಗೆ ತೆರೆದ ವಾಹನದಲ್ಲಿ ಅಲ್ಲಮಪ್ರಭು ದೇವರ ಭಾವಚಿತ್ರ ಮತ್ತು ಪಲ್ಲಕ್ಕಿ ಮೆರವಣಿಗೆ ವೈಭವದಿಂದ ನಡೆಯಿತು. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಮೆರವಣಿಗೆಗೆ ಹುಲಸೂರಿನ ಶ್ರೀ ಶಿವಾನಂದ ಮಹಾಸ್ವಾಮೀಜಿ ಚಾಲನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts