More

    ಮನೆಗಳ ನಿರ್ವಣಕ್ಕೆ 137.85 ಕೋಟಿ ರೂ.

    ಹಳಿಯಾಳ: ಪ್ರಧಾನ ಮಂತ್ರಿ ಆವಾಸ್ ಯೋಜನೆ (ನಗರ)ಯಡಿಯಲ್ಲಿ ವಸತಿ ರಹಿತ ಬಡವರಿಗಾಗಿ ಹಳಿಯಾಳ ಮತ್ತು ದಾಂಡೇಲಿ ತಾಲೂಕಿನ ಕೊಳೆಗೇರಿಯಲ್ಲಿ ಮನೆಗಳ ನಿರ್ವಣಕ್ಕಾಗಿ 137.85 ಕೋಟಿ ರೂ. ಗಳು ಮಂಜೂರಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭಾಸ್ ಕೋರ್ವೆಕರ ಹೇಳಿದರು.

    ಸೋಮವಾರ ಪಕ್ಷದ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ವಿಸ್ತ್ರತ ಯೋಜನಾ ವರದಿ ಅನುಮೋದನೆಗೊಂಡು, ಕೇಂದ್ರ ಸರ್ಕಾರದ ಮಂಜೂರಾತಿ ಮತ್ತು ಮೇಲ್ವಿಚಾರಣೆ ಸಮಿತಿ’ಯು ಅನುಮತಿ ನೀಡಿತ್ತು. ಈಗ ಈ ಪ್ರಸ್ತಾವನೆಗೆ ರಾಜ್ಯ ಸರ್ಕಾರದಿಂದ ಆಡಳಿತಾತ್ಮಕ ಮಂಜೂರಾತಿ ದೊರಕಿರುವುದು ಸ್ವಾಗತಾರ್ಹ ಎಂದರು. ಹಳಿಯಾಳ ಮತ್ತು ದಾಂಡೇಲಿಯ ಕೊಳೆಗೇರಿ ನಿವಾಸಿಗಳಿಗೆ ನೀಡಿದ ವಾಗ್ದಾಣದಂತೆ ಶಾಸಕ ಆರ್.ವಿ. ದೇಶಪಾಂಡೆ ಅವರು ಹಳಿಯಾಳ ಪಟ್ಟಣಕ್ಕೆ 661 ಹಾಗೂ ದಾಂಡೇಲಿ ನಗರಕ್ಕೆ 1176 ಮನೆಗಳನ್ನು ಮಂಜೂರು ಮಾಡಿಸಿದ್ದಾರೆ ಎಂದರು.

    ಸುದ್ದಿಗೋಷ್ಠಿಯಲ್ಲಿ ಮಹಿಳಾ ಘಟಕದ ಅಧ್ಯಕ್ಷೆ ಹನೋರಿಯಾ ಬೃಗಾಂಜಾ, ಯುವ ಕಾಂಗ್ರೆಸ್ ಅಧ್ಯಕ್ಷ ರವಿ ತೋರಣಗಟ್ಟಿ, ಪುರಸಭಾ ಸದಸ್ಯ ಫಯಾಜ್ ಶೇಖ್, ಪುರಸಭಾ ಮಾಜಿ ಉಪಾಧ್ಯಕ್ಷ ಸತ್ಯಜಿತ ಗಿರಿ, ಮಾರುತಿ ಕಲಬಾವಿ, ಸಂಜು ಮಿಶಾಳೆ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts