More

    ಅತಿಥಿ ಶಿಕ್ಷಕರ ಬೇಡಿಕೆ ಈಡೆರಿಕೆಗೆ ಮನವಿ

    ಮಾನ್ವಿ: ಪ್ರತಿ ವರ್ಷ ಶೈಕ್ಷಣಿಕ ಸಾಲಿನ ಅತಿಥಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆಯಲ್ಲಿ ಮೆರಿಟ್ ಪದ್ಧತಿ ಕೈಬಿಟ್ಟು ಮೊದಲು ಕಾರ್ಯನಿರ್ವಹಿಸಿದವರಿಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿ ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜುಗೆ ತಾಲೂಕು ಅಥಿತಿ ಶಿಕ್ಷಕರ ಸಂಘ ಮನವಿ ಸಲ್ಲಿಸಿತು.

    ಇದನ್ನೂ ಓದಿ: ಹೆಚ್ಚಿನ ಅನುದಾನಕ್ಕಾಗಿ ಕೇಂದ್ರಕ್ಕೆ ಮನವಿ ಮಾಡಲಿ

    ಅತಿಥಿ ಶಿಕ್ಷಕ, ಶಿಕ್ಷಕಿಯರಿಗೆ ಸೇವಾ ಭದ್ರತೆ ಹಾಗೂ ಶೇ.5% ರಷ್ಟು ಕೃಪಾಂಕ ಪ್ರತಿವರ್ಷ ನೀಡಬೇಕು. ಅತಿಥಿ ಶಿಕ್ಷಕಿಯರಿಗೆ ವೇತನ ಸಹಿತ ಹೆರಿಗೆ ರಜೆ ಸೌಲಭ್ಯ ಕಲ್ಪಿಸಿ, ಶಿಕ್ಷಕರಿಗೆ 12 ತಿಂಗಳು ಪ್ರಮಾಣದ ಉದ್ಯೋಗ ಮತ್ತು ವೇತನ ನೀಡಬೇಕು,

    ಅತಿಥಿ ಶಿಕ್ಷಕ ಎಂಬ ಪದ ಬಳಕೆ ಕೈಬಿಟ್ಟು ಗೌರವ ಶಿಕ್ಷಕ ಎಂದು ನಮೂದಿಸಬೇಕು, ಅತಿಥಿ ಶಿಕ್ಷಕರಿಗೆ ಶೈಕ್ಷಣಿಕ ತರಬೇತಿಗಳು ಹಾಗೂ ಶಿಕ್ಷಕರ ಹಾಜರಾತಿಯಲ್ಲಿ ಅತಿಥಿ ಶಿಕ್ಷಕರನ್ನು ಸೇರ್ಪಡೆಗೊಳಿಸುವದು, ಅತಿಥಿ ಶಿಕ್ಷಕರ ವೇತನವನ್ನು ವಿಳಂಬ ಮಾಡದೆ ಜಮಾ ಮಾಡಿ ಇತರೆ ಬೇಡಿಕೆಗಳನ್ನು ಈಡೆರಿಸುವಂತೆ ಆಗ್ರಹಿಸಿದರು.

    ತಾಲೂಕು ಅಥಿತಿ ಶಿಕ್ಷಕರ ಸಂಘದ ತಾ.ಅಧ್ಯಕ್ಷ ದುರುಗಪ್ಪ ಅಮರಾವತಿ, ಉಪಾಧ್ಯಕ್ಷರಾದ ಗೊವಿಂದರಾಜ, ನವಿನ್‌ಕುಮಾರ, ಸವಿತಾ, ಭಾಗ್ಯಲಕ್ಷ್ಮೀ, ಮಂಜುಳ, ಅನಿತಾ ಇನ್ನಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts