More

    ಹೆಚ್ಚಿನ ಅನುದಾನಕ್ಕಾಗಿ ಕೇಂದ್ರಕ್ಕೆ ಮನವಿ ಮಾಡಲಿ

    ಅಥಣಿ: ರಾಜ್ಯದಲ್ಲಿ ಬರ ತಾಂಡವವಾಡುತ್ತಿದ್ದು, ರೈತರು ಕಂಗಾಲಾಗಿದ್ದಾರೆ. ವೈಜ್ಞಾನಿಕವಾಗಿ ಸಮೀೆ ಮಾಡಿ ರಾಜ್ಯದಿಂದ ಸರ್ವ ಪದ ನಿಯೋಗದಿಂದ ಹೆಚ್ಚಿನ ಅನುದಾನಕ್ಕಾಗಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದು ಆಮ್​ ಆದ್ಮಿ ಪದ ರಾಜ್ಯಾಧ್ಯ ಮುಖ್ಯಮಂತ್ರಿ ಚಂದ್ರು ಹೇಳಿದರು.

    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬರಪಿಡೀತ ತಾಲೂಕು, ಜಿಲ್ಲೆಗಳ ರೈತರಿಗೆ ತಲಾ 25 ಸಾವಿರ ರೂ. ಪರಿಹಾರ ನೀಡಬೇಕು. ತೂಕದಲ್ಲಿ ಮೋಸ ಆಗುವುದನ್ನು ತಪ್ಪಿಸುವ ಜತೆ ಕಬ್ಬು ಕಟಾವು, ಸಾರಿಗೆ ವೆಚ್ಚಗಳನ್ನು ಸರ್ಕಾರ ಭರಿಸಬೇಕು. ಅದಕ್ಕೆ ಸೂಕ್ತ ಯೋಜನೆ ರೂಪಿಸಿ ರೈತರ ಹಿತ ಕಾಪಾಡಬೇಕು ಎಂದರು.

    ಸರ್ಕಾರ ರಚನೆಯಾಗಿ 7 ತಿಂಗಳಾದರೂ ಕನ್ನಡ ಮತ್ತು ಸಂಸತಿ ಇಲಾಖೆಯ ಅಧೀನದಲ್ಲಿರುವ 7 ಬೋರ್ಡ್​, 6 ಪ್ರಾಧಿಕಾರಗಳಿಂದ ಕಾರ್ಯ ಚಟುವಟಿಕೆ ಇಲ್ಲ. ಪ್ರಾಧಿಕಾರಕ್ಕೆ ಅಧ್ಯರಿಲ್ಲ. ಬಜೆಟ್​ನಲ್ಲಿ ಹೆಚ್ಚಿನ ಅನುದಾನವಿಲ್ಲ. ಕೇವಲ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್​&ಬಿಜೆಪಿ ಹೋರಾಟ ಮಾಡುತ್ತಿವೆ ಎಂದು ಟೀಕಿಸಿದರು.
    ಅಥಣಿ ೇತ್ರದಲ್ಲಿ 25 ವರ್ಷಗಳಿಂದ ಶಾಸಕ ಲಕ್ಷ$್ಮಣ ಸವದಿ ರಾಜಕಾರಣ ಮಾಡುತ್ತ ಹಲವು ಹುದ್ದೆ ಅಲಂಕರಿಸಿದ್ದಾರೆ. ಆದರೆ, 150 ವರ್ಷ ಹಳೆಯ ಪುರಸಭೆ ಇನ್ನೂ ನಗರಸಭೆಯಾಗಿ ಮೇಲ್ದಜೆಗೇರಿಲ್ಲ. ಮುಳುಗಡೆ ಪ್ರದೇಶದ ಜನರಿಗೆ ಶಾಶ್ವತ ಪುನರ್ವಸತಿ ಕಲ್ಪಿಸಿಲ್ಲ ಎಂದ ಅವರು, ಅಥಣಿ ಜಿಲ್ಲೆಯಾಗಿಸಲು ನಮ್ಮ ಸಹಕಾರ ಇದೆ. ಸಚಿವ ಸತೀಶ ಜಾರಕಿಹೊಳಿ ಅವರು ಅಥಣಿಗೂ ಬೆಂಬಲ ನೀಡಿ ಮೂರು ಜಿಲ್ಲೆ ಮಾಡಲಿ ಎಂದು ಚಂದ್ರು ಆಗ್ರಹಿಸಿದರು. ಮುಖಂಡರಾದ ಅರ್ಜುನ ಹಲಗೆಗೌಡರ, ಶಂಕರ ಹೆಗಡೆ, ಅಾನ್​ ಮಾಸ್ಟರ್​, ಶ್ರೀಕಾಂತ ಪಾಟೀಲ, ಸುಭಾಷ ಬಾಮನೆ, ಶಫೀಕ್​ ಮೋಮಿನ್​ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts