More

    ಮಣಿದ ಸರಕಾರ, ಗೆದ್ದ ಅನ್ನದಾತ

    ಯಾಗದಿರಿ: ಮೆಣಸಿನಕಾಯಿ ಬೆಳೆಗೆ ನಾರಾಯಣಪುರ ಜಲಾಶಯದಿಂದ ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ರಾಜ್ಯ ರೈತ ಸಂಘದಿಂದ ಸತತ 21 ದಿನಗಳ ನಡೆಸಿದ ಅಹೋರಾತ್ರಿ ಹೋರಾಟಕ್ಕೆ ಕೊನೆಗೆ ಸರಕಾರ ಮಣಿದಿದ್ದು, 15 ದಿನಗಳ ಕಾಲ 2.75 ಟಿಎಂಸಿ ನೀರು ಹರಿಸಲು ಸಮ್ಮತಿಸಿದೆ.

    ನೀರಿಗಾಗಿ ರೈತ ಸಂಘದ ಜತೆಯಲ್ಲಿ ಅನೇಕ ಸಂಘ-ಸಂಸ್ಥೆಗಳು ತೀವೃಗೊಳಿಸಿದ ಹೋರಾಟದಿಂದ ಎಚ್ಚೆತ್ತುಕೊಂಡ ಸರಕಾರ, ಶನಿವಾರ ತಡರಾತ್ರಿ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ, ಕೃಷ್ಣಾ ಟಚ್ಚುಕಟ್ಟು ಪ್ರದೇಶದ ಕ್ಷೇತ್ರಗಳ ಶಾಸಕರು, ಮಂತ್ರಿಗಳೊಡನೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮೆಣಸಿನಕಾಯಿ ಬೆಳೆಗೆ ನೀರಿನ ಲಭ್ಯತೆ ಇರುವ ಬಗ್ಗೆ ಸುದೀರ್ಘವಾಗಿ ಚಚರ್ೆ ನಡೆಸಿದ್ದರು.

    ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ, ರೈತರ ಬೇಡಿಕೆ ಹಿನ್ನೆಲೆಯಲ್ಲಿ ನಾರಾಯಣಪುರ ಜಲಾಶಯದಿಂದ 2.75 ಟಿಎಂಸಿ ನೀರು ಬಿಡಲು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ ಎಂದು ಪ್ರಕಟಿಸಿದರು. ರೈತರ ಜತೆಗೆ ಸರಕಾರವಿದ್ದು, ಕಳೆದ ವರ್ಷ ಮುಂಗಾರು ಮಳೆಯಾಗದ ಕಾರಣ ಆಲಮಟ್ಟಿ ಜಲಾಶಯದಲ್ಲಿ ಸಧ್ಯ 48 ಟಿಎಂಸಿ ನೀರು ಸಂಗ್ರಹವಿದೆ. ಇದರಲ್ಲಿ 38 ಟಿಎಂಸಿ ನೀರನ್ನು ಬೇಸಿಗೆಯಲ್ಲಿ ಕುಡಿಯಲು ಮೀಸಲಿಟ್ಟಿದ್ದು, ಉಳಿದ ನೀರನ್ನು ಕೈಗಾರಿಕೆ ಮತ್ತು ವಿದ್ಯುತ್ಗಾಗಿ ಸಂಗ್ರಹಿಸಲಾಗಿದೆ ಎಂದರು.

    ಜಲಾಶಯದಿಂದ ನೀರು ಹರಿಸಲು ಮಂತ್ರಿಗಳು, ಸಂಬಂಧಪಟ್ಟ ಕ್ಷೇತ್ರಗಳ ಶಾಸಕರೊಡನೆ ಚಚರ್ೆ ನಡೆಸಿ, ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಬೇಸಿಗೆ ವೇಳೆ ಸ್ವಲ್ಪ ಸಮಸ್ಯೆಯಾದರೂ ರೈತರ ಬೆಳೆಗಳ ಹಿತದೃಷ್ಟಿ ನಮಗೆ ಬಹುಮುಖ್ಯ. ಹೀಗಾಗಿ ನೀರು ಪೋಲಾಗದಂತೆ ಬೆಳೆಗಳಿಗೆ ಹರಿಸುವು ಜಿಮ್ಮೆದಾರಿ ರೈತರ ಮೇಲಿದೆ ಎಂದು ಸಲಹೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts