More

    ಮಗು ಕೊಂದು ಸೂಟ್‌ಕೇಸ್‌ನಲ್ಲಿ ಸಾಗಿಸುತ್ತಿದ್ದ ಮಹಿಳೆ

    ಚಿತ್ರದುರ್ಗ:ಹೆತ್ತ ಮಗುವನ್ನು ಕೊಂದು ಸೂಟ್‌ಕೇಸ್‌ನಲ್ಲಿ ಸಾಗಿಸುತ್ತಿದ್ದ ಮಹಿಳೆಯನ್ನು ಐಮಂಗಲ ಪೊಲೀಸರು ವಶಕ್ಕೆ ಪಡೆದು ಗೋವಾ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
    ಬೆಂಗಳೂರಿಂದ ಗೋವಾಕ್ಕೆ ಫೈಟ್‌ನಲ್ಲಿ ಮೊನ್ನೆ ಗೋವಾಕ್ಕೆ ಮಗುವಿನೊಂದಿಗೆ ತೆರಳಿದ್ದ ಮಹಿಳೆ ಸುಚನಾ(38)ಅಲ್ಲಿಯ ಸರ್ವಿಸ್ ಆ ಪಾರ್ಟ್‌ಮೆಂಟ್‌ ವೊಂದರಲ್ಲಿ ತಂಗಿದ್ದು, ನಿನ್ನೆ ಬೆಳಗ್ಗೆ ತರಾತುರಿಯಲ್ಲಿ ಆಪಾರ್ಟ್‌ಮೆಂಟ್‌ನವರಿಗೆ ಹೇಳಿ ಟ್ಯಾಕ್ಸಿ ಮಾಡಿಕೊಂಡು ಬೆಂಗ ಳೂರಿಗೆ ಹಿಂತಿರುಗುತ್ತಿದ್ದಾಗ ಐಮಂಗಲ ಠಾಣೆ ಪೊಲೀಸರು ವಶಕ್ಕೆ ಪಡೆದು,ಗೋವಾ ಪೊಲೀಸರಿಗೆ ಆಕೆಯನ್ನು ಒಪ್ಪಿಸಿದ್ದಾರೆ.
    ಆಪಾರ್ಟ್‌ಮೆಂಟ್ ರೂಂ.ಕ್ಲೀನ್ ಮಾಡುವಾಗ ಅಲ್ಲಿದ್ದ ರಕ್ತದ ಕಲೆಗಳನ್ನು ನೋಡಿದ ಸಿಬ್ಬಂದಿ ಕೂಡಲೇ ಸ್ಥಳೀಯ ಪೊಲೀಸರಿಗೆ ಮಾ ಹಿತಿ ನೀಡಿದ್ದು,ಪೊಲೀ ಸರು,ಮಹಿಳೆಗೆ ಅನುಮಾನ ಬರದಂತೆ ಟ್ಯಾಕ್ಸಿ ಡ್ರೈವರ್ ಜತೆ ಕೊಂಕಣಿಯಲ್ಲಿ ಮಾತನಾಡಿ,ಮಾರ್ಗ ಮಧ್ಯೆ ಸ ಮೀಪದ ಠಾಣೆಯಲ್ಲಿ ಕಾರು ನಿಲ್ಲಿಸುವಂತೆ ಸೂಚಿಸಿದ್ದಾರೆ.
    ಅವರ ಸೂಚನೆಯಂತೆ ಚಿತ್ರದುರ್ಗ ದಾಟಿ ಮುಂದೆ ಸಾಗುತ್ತಿದ್ದಂತೆ ಸಿಗುವ ಐಮಂಗಲ ಠಾಣೆಗೆ ಡ್ರೈವರ್ ಕಾರನ್ನು ತೆಗೆ ದುಕೊಂಡು ಹೋಗಿದ್ದಾನೆ.
    ಕೂಡಲೇ ಐಮಂಗಲ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದು ಕಾರು ತಪಾಸಣೆ ಮಾಡಿದಾಗ ಸೂಟ್‌ಕೇಸ್‌ನಲ್ಲಿದ್ದ ಮಗುವಿನ ಶವ ಪತ್ತೆಯಾಗಿದೆ. ತಕ್ಷಣ ಗೋವಾ ಪೊಲೀಸರಿಗೆ ಸುದ್ದಿಮುಟ್ಟಿಸಿದ ಪೊಲೀಸರು, ಆರೋಪಿ ಮಹಿಳೆಯನ್ನು ನ್ಯಾ ಯಾಧೀಶರೆದುರು ನಿನ್ನೆ ರಾತ್ರಿ ಹಾಜ ರುಪಡಿಸಿದ ಬಳಿಕ ಮುಂದಿನ ತನಿಖೆಗಾಗಿ ಮಹಿಳೆಯನ್ನು ಹಾಗೂ ಮರಣೋತ್ತರ ಪರೀಕ್ಷೆಗಾಗಿ ಮಗುವಿನ ಶವವನ್ನು ಗೋವಾ ಪೊಲೀಸರ ವಶಕ್ಕೆ ಒಪ್ಪಿ ಸಿದ್ದಾರೆ.
    ಆರೋಪಿ ಮಹಿಳೆ ಬೆಂಗಳೂರಿನ ಸ್ಟಾರ್ಟ್ ಆಪ್ ಬ್ಯುಸಿನೆಸ್ ನಡೆಸುತ್ತಿದ್ದಳೆನ್ನಲಾಗಿದ್ದು,ಮಹಿಳೆ ಮತ್ತು ಆಕೆ ಪತಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು. ಸುದ್ದಿ ತಿಳಿದ ಪತಿ ಇಂಡೊನೇಶಿಯಾದ ಜಕಾರ್ತದಿಂದ ಗೋವಾಕ್ಕೆ ತೆರಳುತ್ತಿದ್ದಾರೆಂಬ ಮಾಹಿತಿಯನ್ನು ಹಿರಿಯೂರು ಪೊಲೀಸರು ನೀಡಿದ್ದಾರೆ. ಮಗುವಿನೊಂದಿಗೆ ಬಂದಿದ್ದ ಮಹಿಳೆ ಒಬ್ಬಳೇ ಟ್ಯಾಕ್ಸಿಯಲ್ಲಿ ಹೊರಟಿದ್ದಾಗ ಮಗುವೆಲ್ಲಿ ಎಂದು ಪೊಲೀಸರು ಹಾಗೂ ಆಪಾರ್ಟ್‌ಮೆಂಟ್ ಸಿಬ್ಬಂದಿ ಕೇಳಿದಾಗ, ಫ್ರೆಂಡ್ ಮನೆಯಲ್ಲಿ ಮಗುವನ್ನು ಬಿಟ್ಟಿದ್ದೇನೆ ಎಂದು ಸುಳ್ಳು ಹೇಳಿದ್ದಾಳೆ. ಆದರೆ ಆಕೆ ತಿಳಿಸಿದ್ದ ಗೋವಾದ ವಿಳಾಸ ನಕಲಿಯಾಗಿತ್ತು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts