More

    ಮಕ್ಕಳ ಸಾಧನೆ ಪಾಲಕರಿಗೆ ಹೆಮ್ಮೆ

    ಚನ್ನಮ್ಮನ ಕಿತ್ತೂರು: ತಂದೆ, ತಾಯಿ ನಿಮ್ಮ ಮೇಲೆ ಇಟ್ಟಿರುವ ನಂಬಿಕೆ ಉಳಿಸಿ ದೇಶಕ್ಕೆ ನಿಮ್ಮದೆ ಆದ ಕೊಡುಗೆ ನೀಡಿ ಕೀರ್ತಿ ತರಬೇಕು ಎಂದು ಶಾಸಕ ಮಹಾಂತೇಶ ದೊಡಗೌಡರ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

    ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ನೂತನ ಕೊಠಡಿ ಅಡಿಗಲ್ಲು ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮಾತನಾಡಿದ ಅವರು, ಮಕ್ಕಳಿಗೆ ಯಾವುದೇ ಕಷ್ಟ ಬರದ ಹಾಗೆ ಒಳ್ಳೆಯ ಶಿಕ್ಷಣ ನೀಡುತ್ತಿರುವ ನಿಮ್ಮ ತಂದೆ- ತಾಯಿ ವಿಶ್ವಾಸ ಉಳಿಸಿ. ನಾಡಿಗೆ, ದೇಶಕ್ಕೆ ಕೀರ್ತಿ ತರುವಂತಹ ಕೆಲಸ ಮಾಡಿ ಎಂದರು.

    ರಾಜ್ಯದಲ್ಲಿ 7 ಸಾವಿರ ಶಾಲೆಗಳ ಕೊಠಡಿ ನಿರ್ಮಾಣ ಮಡುವ ಕೆಲಸವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಡಿದ್ದಾರೆ. ಕಿತ್ತೂರು ಕ್ಷೇತ್ರಕ್ಕೆ 35 ರಿಂದ 40 ಶಾಲಾ ಕೊಠಡಿಗಳು ಮಂಜೂರಾಗಿದ್ದು, ಇವುಗಳಲ್ಲಿ ಉರ್ದು ಶಾಲೆಗೆ ಎರಡು ಕೊಠಡಿ ನೀಡಲಾಗಿದೆ ಎಂದರು. ಭೂದಾನಿಗಳಾದ ಫಹಮೀದಾ ಅಜ್ಮತುಲ್ಲಾ ಕಾಸ್ಮಿ ಅವರನ್ನು ಸನ್ಮಾನಿಸಲಾಯಿತು.

    ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.ಮುಪ್ತಿ ಇನಾಮುಲ್ಲಾ ಹಸನಸಾಬ್ ಹಾಗೂ ಮಡಿವಾಳ ರಾಜ ಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಆರ್.ಟಿ.ಬಳಿಗಾರ, ಫರಹಬೇಗಂ ಸಯ್ಯದ್, ಅತುಲ್ ಗಡಕಾರಿ, ಚಾಂದ ಗಂಗಾವತಿ, ಬಸವರಾಜ ನಾಲತವಾಡ, ಗಾಯತ್ರಿ ಅಜ್ಜನವರ, ಹಬಿಬ್ ಶಿಲ್ಲೆದಾರ್, ಮನ್ಸೂರ್ ಸಯ್ಯದ್, ಪ್ರದೀಪ ಶೆಟ್ಟಿ, ಮುಸ್ತಾಕ್ ಸವಣೂರ, ಅಮೀರಹಮಾಜ್ ಹಾವನೂರು, ಗಜಾನಂದ ಸೊಗಲನ್ನವರ, ಈಶ್ವರ ಉಪರಿ, ಮೈನುದ್ದೀನ್ ಹವಾಲ್ದಾರ್, ಎಂ.ಎಫ್.ಜಕಾತಿ, ಎಸ್.ಎ .ಸೌದಾಗರ್, ಎ.ಎಸ್.ಜರ್ಮನ್, ಬೀಬಿಸೂಫಿಯಾ ತಿಗಡೊಳ್ಳಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts