More

    ಅಮೃತ್-2 ಯೋಜನೆಯಡಿ ಕುಡಿಯುವ ನೀರು

    ಸಿಂದಗಿ: ಪಟ್ಟಣದ ವಾರ್ಡ್‌ನ ಪ್ರತಿ ಮನೆಗೂ ನಲ್ಲಿಗಳ ಮೂಲಕ ಕುಡಿಯುವ ನೀರು ಒದಗಿಸುವ 96 ಕೋಟಿ ರೂ. ವೆಚ್ಚದ ಅಮೃತ್-2 ಯೋಜನೆಯನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.

    ಪಟ್ಟಣದಲ್ಲಿನ ಸೋಮಲಿಂಗೇಶ್ವರ ಚೌಕ್‌ಬಳಿ, ಸೋಮವಾರ ಪುರಸಭೆಯ 60ಲಕ್ಷ ರೂ. ಅನುದಾನದಲ್ಲಿ ಸಿಸಿ ರಸ್ತೆ, ಬೀದಿದೀಪ ಅಳವಡಿಸುವ ಮೂರು ಪ್ರತ್ಯೇಕ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

    ಅಮೃತ್-2 ಯೋಜನೆಯಲ್ಲಿ ದಿನದ 24 ಗಂಟೆಯೂ ಪಟ್ಟಣದ ನಿವಾಸಿಗಳಿಗೆ ನೀರು ಒದಗಿಸಲು ಸರ್ಕಾರ 40ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದೆ. ಪಟ್ಟಣದ ಸಿಸಿ ರಸ್ತೆ, ಒಳಚರಂಡಿ, ಶೌಚಗೃಹ, ಸರ್ಕಾರಿ ಶಾಲೆಗಳ ಸುಧಾರಣೆ ಸೇರಿದಂತೆ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರದಿಂದ 100 ಕೋಟಿ ರೂ. ಅನುದಾನ ತರುವುದಾಗಿ ಭರವಸೆ ನೀಡಿ, ಕಳೆದ 12 ವರ್ಷಗಳಿಂದ ದುರಸ್ತಿಗೆ ಕಾದಿರುವ ನೀರಿನ ಘಟಕ ದುರಸ್ತಿಗೆ ಶೀಘ್ರ ಟೆಂಡರ್ ಕರೆಯಲಾಗುವುದು ಎಂದರು.

    ಪುರಸಭೆ ಸದಸ್ಯರಾದ ಶಾಂತವೀರ ಬಿರಾದಾರ, ಹಾಸಿಂಪೀರ್ ಆಳಂದ, ಎಸಿ ಆಬೀದ್ ಗದ್ಯಾಳ, ತಹಸೀಲ್ದಾರ್ ಡಾ. ಪ್ರದೀಪಕುಮಾರ ಹಿರೇಮಠ, ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಶಾಂತಪ್ಪ ರಾಣಾಗೋಳ, ಶಿವಣ್ಣ ಕೊಟಾರಗಸ್ತಿ, ವೀರೇಶ ದುರ್ಗಿ, ಮಂಜುನಾಥ ಬಿರಾದಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts