More

    ಮಕ್ಕಳ ಬೆಳವಣಿಗೆಗೆ ಜಂತು ನಿವಾವರಣೆ ಮಾತ್ರೆ ಅವಶ್ಯ

    ಕಂಪ್ಲಿ: ತಾಲೂಕಿನ ಎಮ್ಮಿನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ರಾಷ್ಟ್ರೀಯ ಜಂತುಹುಳು ನಿವಾರಣ ದಿನ ಸೋಮವಾರ ಆಚರಿಸಲಾಯಿತು.

    ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಬಸವನಗೌಡ ಮಾತನಾಡಿ, ಜಂತು ನಿವಾರಣ ಮಾತ್ರೆ ಸೇವನೆಯಿಂದ ದೈಹಿಕ ಮತ್ತು ಮಾನಸಿಕ ಕುಂಠಿತ ಬೆಳವಣಿಗೆ ತಡೆಯಬಹುದು. ಹೀಗಾಗಿ ಒಂದರಿಂದ 19ವರ್ಷದ ಎಲ್ಲ ಮಕ್ಕಳಿಗೂ ಜಂತು ಮಾತ್ರೆ ನೀಡಬೇಕೆಂದು ತಿಳಿಸಿದರು.

    ಆರೋಗ್ಯ ನಿರೀಕ್ಷಣಾಧಿಕಾರಿ ಕೃಷ್ಣಮೂರ್ತಿ, ಮುಖ್ಯಶಿಕ್ಷಕ ಎರಿಸ್ವಾಮಿ, ಶಿಕ್ಷಕರಾದ ಬಿ.ಎಸ್.ಸದ್ಯೋಜಾತಪ್ಪ, ಆದೇಶ ಜವಳಿ, ಪ್ರದೀಪ್, ಗೋಣಿ ಬಸಪ್ಪ, ವಿಜಯಶ್ರೀ, ಮಂಜುಶ್ರೀ, ವಾಣಿ, ಎಸ್.ರಾಮಪ್ಪ, ಜೆ.ಲೋಕೇಶ್, ಧನಂಜಯ ರೆಡ್ಡಿ, ಮಾಬುಲಿ, ಮಂಜುನಾಥ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts