More

    ಮಕ್ಕಳ ಚಟುವಟಿಕೆಗಳ ಮೇಲಿರಲಿ ನಿಗಾ  -ಪಾಲಕರಿಗೆ ಪಿಐ ಇಮ್ರಾನ್‌ಬೇಗ್ ಸಲಹೆ 

    ದಾವಣಗೆರೆ: ಮಕ್ಕಳಿಗೆ ಕನಿಷ್ಠ ಎಸ್ಸೆಸ್ಸೆಲ್ಸಿವರೆಗೆ ಶಿಕ್ಷಣ ನೀಡಿ, ಅವರ ಚಟುವಟಿಕೆಗಳ ಮೇಲೂ ನಿಗಾ ಇರಿಸಿ ಎಂದು ಆಜಾದ್‌ನಗರ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಇಮ್ರಾನ್‌ಬೇಗ್ ಪಾಲಕರಿಗೆ ಸಲಹೆ ನೀಡಿದರು.
    ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನದ ಅಂಗವಾಗಿ ನೆರಳು ಬೀಡಿ ಕಾರ್ಮಿಕರ ಯೂನಿಯನ್‌ನಿಂದ ಎಸ್‌ಎಸ್‌ಎಂ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.
    ಮಕ್ಕಳನ್ನು ದುಡಿಮೆಗೆ ಹಚ್ಚದೆ ಶಿಕ್ಷಣ ಕೊಡಿಸುವತ್ತ ಆದ್ಯತೆ ನೀಡಬೇಕು. ನೀವು ವಾಸಿಸುವ ಪ್ರದೇಶಗಳಲ್ಲಿ ಅಕ್ರಮ ಚಟುವಟಿಕೆ ಕಂಡುಬಂದರೆ 112 ನಂಬರ್‌ಗೆ ಕರೆ ಮಾಡಿ ಮಾಹಿತಿ ನೀಡಿದರೆ ಇಲಾಖೆ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.
    ಬಸವನಗರ ಠಾಣೆ ಇನ್ಸ್‌ಪೆಕ್ಟರ್ ಗುರುಬಸವರಾಜ ಮಾತನಾಡಿ, ನಿಮ್ಮ ಬಡಾವಣೆಗಳಲ್ಲಿ ಅಕ್ರಮ ಕಂಡುಬಂದರೆ ಅದನ್ನು ತಡೆಯುವ ಕೆಲಸ ಮಾಡಬೇಕು. ನೋಡಿಕೊಂಡು ಸುಮ್ಮನೆ ಕೂರಬಾರದು ಎಂದು ಹೇಳಿದರು.
    ಪತ್ರಕರ್ತ ಕೆ. ದೇವೇಂದ್ರಪ್ಪ ಮಾತನಾಡಿ ವ್ಯಸನಿಗಳನ್ನು ಕಾನೂನು ಶಿಕ್ಷೆಗೆ ಒಳಪಡಿಸುವುದರಿಂದ ಸರಿದಾರಿಗೆ ತರಲು ಆಗುವುದಿಲ್ಲ. ಆಯಾ ಕುಟುಂಬಗಳ ಸದಸ್ಯರು ಅಂಥವರ ಬಗ್ಗೆ ಮುತುವರ್ಜಿ ವಹಿಸಬೇಕು. ವ್ಯೆದ್ಯಕೀಯ ಸಮಾಲೋಚನೆ ಮೂಲಕ ಅವರನ್ನು ವ್ಯಸನಮುಕ್ತಗೊಳಿಸುವ ಪ್ರಯತ್ನವಾಗಬೇಕು ಎಂದು ತಿಳಿಸಿದರು.
    ಯೂನಿಯನ್‌ನ ಅಧ್ಯಕ್ಷೆ ಜಬೀನಾ ಖಾನಂ, ಮಕ್ಕಳನ್ನು ಶಾಲೆಗೆ ಕಡ್ಡಾಯವಾಗಿ ಕಳುಹಿಸುವಂತೆ ಪಾಲಕರಿಗೆ ಪ್ರಮಾಣವಚನ ಬೋಧಿಸಿದರು. ವಕೀಲ ಎಲ್.ಎಚ್. ಅರುಣ್‌ಕುಮಾರ್ ಮಾತನಾಡಿದರು. ಯೂನಿಯನ್‌ನ ನಗೀನಾಬಾನು, ಸಬ್ರೀನ್ ತಾಜ್ ಇದ್ದರು. ಎಂ. ಕರಿಬಸಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts