More

    ಮಕ್ಕಳಲ್ಲಿ ದೇಶಪ್ರೇಮ, ಸಂಸ್ಕೃತಿ, ಸಂಸ್ಕಾರ ಬಿತ್ತಬೇಕು

    ಮೈಸೂರು: ಮಕ್ಕಳಲ್ಲಿ ದೇಶಪ್ರೇಮ, ಸಮಾಜದ ಬಗ್ಗೆ ಕಳಕಳಿ, ಸಂಸ್ಕೃತಿ, ಸಂಸ್ಕಾರ ಬಿತ್ತುವ ಕಾರ್ಯವಾಗಬೇಕೆಂದು ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಆರ್.ಪೇಟೆ ಕೃಷ್ಣ ಅಭಿಪ್ರಾಯಪಟ್ಟರು.

    ಸಂಚಲನ ಮೈಸೂರು ತಂಡ ನಗರದ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಸಂಚಲನ ಮಕ್ಕಳ ನಾಟಕೋತ್ಸವ’ದ ಎರಡನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರ ತರುವ ಕಾರ್ಯ ಆಗಬೇಕು. ಅವರ ಪ್ರತಿಭೆಗೆ ಅವಕಾಶ ಮಾಡಿಕೊಟ್ಟರೆ ಅವರು ಉತ್ತಮ ಕಲಾವಿದ, ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುತ್ತಾರೆ. ಸಮಾಜಕ್ಕೆ ಇಂಥ ವ್ಯಕ್ತಿಗಳ ಅವಶ್ಯಕತೆ ಎಂದರು.

    ಸಮಾಜದಲ್ಲಿ ಪ್ರಸ್ತುತ ಉತ್ತಮ ವ್ಯಕ್ತಿಗಳು ಸಿಗುವುದು ಅಪರೂಪವಾಗಿದೆ. ಈ ಮಾತು ಎಲ್ಲ ಕ್ಷೇತ್ರಗಳಿಗೂ ಅನ್ವಯವಾಗುತ್ತದೆ. ದೇಶಕ್ಕೆ ಸ್ವಾತಂತ್ರೃ ಬಂದ ಸಂದರ್ಭ ನಮ್ಮ ಹಿರಿಯರು ನಮ್ಮ ದೇಶದ ಬಗ್ಗೆ ಕನಸುಗಳನ್ನು ಕಂಡಿದ್ದರು. ಆದರೆ, ಆ ಕನಸುಗಳನ್ನು ಸಾಕಾರಗೊಳಿಸಲು ಉತ್ತಮ ವ್ಯಕ್ತಿಗಳನ್ನು ತಯಾರು ಮಾಡುವ ಕಾರ್ಯವಾಗಬೇಕು. ಆ ನಿಟ್ಟಿನಲ್ಲಿ ಸಂಚಲನ ಮೈಸೂರು ತಂಡ ಪ್ರಯತ್ನ ನಡೆಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಕೃಷ್ಣರಾಜಪೇಟೆ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಿ.ಆರ್.ವೆಂಕಟೇಶ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಅಂಚಿ ಸಣ್ಣಸ್ವಾಮಿಗೌಡ, ಪ್ರಥಮ ದರ್ಜೆ ಗುತ್ತಿಗೆದಾರ ಎಸ್.ಎಲ್.ಮೋಹನ್, ಹಿರಿಯ ರಂಗಕರ್ಮಿ ಕೆ.ಜಿ.ನಾರಾಯಣ ಕಿಕ್ಕೇರಿ, ಉದಯರವಿ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ಸೋಮಶೇಖರ್, ಸಂಚಲನ ಮೈಸೂರು ತಂಡದ ಅಧ್ಯಕ್ಷ ದೀಪಕ್ ಮೈಸೂರು, ನಿರ್ದೇಶಕ ಪ್ರವೀಣ್ ಇತರರು ಇದ್ದರು.

    ಸಭಾ ಕಾರ್ಯಕ್ರಮದ ನಂತರ ಕೆ.ಆರ್.ಪೇಟೆಯ ಉದಯರವಿ ಟ್ರಸ್ಟ್ ಮಕ್ಕಳಿಂದ ಹಿಡಿಂಬನ ತೋಟ ನಾಟಕ ಪ್ರದರ್ಶನಗೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts