More

    ಮಕ್ಕಳಲ್ಲಿ ಕ್ಷೀಣಿಸುತ್ತಿದೆ ಗುಣಮಟ್ಟದ ಆಹಾರ


    ಯಾದಗಿರಿ: ಜಾಗತಿಕರಣದ ಇಂದಿನ ಪ್ರಭಾವದಿಂದಾಗಿ ನಮ್ಮ ಜೀವನಶೈಲಿ ಸಾಕಷ್ಟು ಬದಲಾಗುತ್ತಿದ್ದು, ಗುಣಮಟ್ಟದ ಆಹಾರ ಸೇವನೆ ಮಾಡದ ಕಾರಣ ಸಣ್ಣ ವಯಸ್ಸಿನಲ್ಲಿ ಆರೋಗ್ಯ ಸಮಸ್ಯೆಗಳು ಬಾಧಿಸುತ್ತಿವೆ ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ.ವಂದನಾ ಗಾಳಿಯವರ್ ಕಳವಳ ವ್ಯಕ್ತಪಡಿಸಿದರು.

    ನಗರದಲ್ಲಿ ಸ್ವಾಮಿ ವಿವೇಕಾನಂದ ಬಡಾವಣೆಯ ಮೆಟ್ರಿಕ್ ನಂತರದ ಸಕರ್ಾರಿ ಬಾಲಕೀಯರ ವಸತಿ ನಿಲಯದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಆಹಾರ ಮತ್ತು ಪೋಷಣೆ ಉಪನ್ಯಾಸ ಹಾಗೂ ಉಚಿತ ಹೋಮಿಯೊಪತಿ ಚಿಕಿತ್ಸೆ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಾಚೀನ ಕಾಲದಲ್ಲಿ ನಮ್ಮ ಪೂರ್ವಜರು ಆಹಾರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಅಲ್ಲದೆ, ಊಟ, ಉಪಹಾರ ಹಾಗೂ ಫಲಹಾರ ಸೇವನೆಗೂ ಒಂದೊಂದು ಸಮಯ ಪ್ರತ್ಯೇಕವಾಗಿ ನಿಗದಿಗೊಳಿಸುತ್ತಿದ್ದರು ಎಂದರು.

    ವೈದ್ಯಾಧಿಕಾರಿ ಡಾ.ಪ್ರಕಾಶ ರಾಜಾಪುರ ಮಾತನಾಡಿ, ಇಂದಿನ ಯುವ ಜನಾಂಗ ದುಶ್ಚಟಗಳಿಗೆ ಬಲಿಯಗುತ್ತಿದ್ದಾರೆ. ಫಾಸ್ಟ್ಫುಡ್ಗಳ ಸೇವನೆಯಿಂದ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ ಸಮಯಕ್ಕೆ ಸರಿಯಾಗಿ ನಾವು ಊಟ ಮಾಡಬೇಕು. ಅಲ್ಲದೆ, ದೇಹಕ್ಕೆ ಪೋಷಕಾಂಶ ನೀಡುವ ಹಣ್ಣು, ತರಕಾರಿ, ಕಾಳು, ಮೊಟ್ಟೆ ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಬೇಕು ಎಂದು ಸಲಹೆ ನೀಡಿದರು.
    ಪ್ರತಿನಿತ್ಯ ಬೆಳಗ್ಗೆ ಯೋಗ, ಧ್ಯಾನ, ಪ್ರಾಣಾಯಾಮ ಮಾಡುವುದರಿಂದ ನಮ್ಮ ಮನಸ್ಸು ಸಕಾರಾತ್ಮಕ ಚಿಂತನೆಗಳ ಕಡೆಗೆ ವಾಲುತ್ತದೆ. ದೇಹ ದಂಡನೆಯಿಂದ ಆರೋಗ್ಯ ಹೆಚ್ಚು ಸದೃಢವಾಗುತ್ತದೆ ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts