More

    ಮಕ್ಕಳಲ್ಲಿನ ರೋಗ ತಡೆಗೆ ಲಸಿಕೆ ಉಪಯುಕ್ತ: ಡಾ. ಎಚ್.ಎಸ್. ಸತೀಶ್ ಹೇಳಿಕೆ, ನ್ಯುಮೋಕಾಕಲ್ ಕಾಂಜುಗೇಟ್ ಲಸಿಕಾ ಕಾರ್ಯಕ್ಕೆ ಚಾಲನೆ

    ಮಾಗಡಿ : ಒಂದು ವರ್ಷದೊಳಗಿನ ಮಕ್ಕಳನ್ನು ನ್ಯುಮೋನಿಯಾ ಕಾಯಿಲೆಯಿಂದ ದೂರವಿಡಲು 3 ಡೋಸ್ ನ್ಯುಮೋಕಾಕಲ್ ಕಾಂಜುಗೇಟ್ ಲಸಿಕೆಯನ್ನು ಹಾಕಿಸುವಂತೆ ತಾಲೂಕು ಆರೋಗ್ಯಾಧಿಕಾರಿ ಡಾ. ಎಚ್.ಎಸ್. ಸತೀಶ್ ತಿಳಿಸಿದರು.

    ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರ ಏರ್ಪಡಿಸಿದ್ದ ನ್ಯುಮೋಕಾಕಲ್ ಕಾಂಜುಗೇಟ್ ಲಸಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಮಕ್ಕಳಿಗೆ ಬಾಲ್ಯದಲ್ಲಿ ಬರುವ ರೋಗಗಳನ್ನು ತಡೆಗಟ್ಟಲು ಲಸಿಕೆ ಹಾಕಿಸುವುದು ಅವಶ್ಯಕವಾಗಿದೆ. ಗ್ರಾಮೀಣ ಭಾಗದಲ್ಲಿ 0-1 ವರ್ಷದ ಮಕ್ಕಳಿಗೆ ಬಿಸಿಜಿ, ಪೋಲಿಯೋ, ನಾಯಿ ಕೆಮ್ಮು, ಧನುರ್ವಾಯು, ಗಂಟಲು ವಾರಿ, ದಡಾರ, ಮೆದುಳು ಜ್ವರ, ರೋಟೋವೈರಸ್ ಕಾಯಿಲೆಗಳಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿ ಮಂಗಳವಾರ ಮತ್ತು ಗುರುವಾರ ಉಚಿತವಾಗಿ ಲಸಿಕೆ ಹಾಕಲಾಗುವುದು. ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಕರೆ ನೀಡಿದರು.

    ಆಸ್ಪತ್ರೆ ಅಡಳಿತ ವೈದ್ಯಾಧಿಕಾರಿ. ಡಾ. ಸಿ.ಕೆ. ರಾಜೇಶ್ ಮಾತನಾಡಿ, ಚಿಕ್ಕಮಕಳಲ್ಲಿ ಜ್ವರ, ಕಿವಿಯಲ್ಲಿ ನೋವು, ಸೋರುವಿಕೆ, ಪಕ್ಕೆ ಸೆಳೆತ, ವೇಗವಾದ ಉಸಿರಾಟ, ಕತ್ತಿನ ಬಿಗಿತ, ತಲೆನೋವಿನಂಥ ರೋಗಗಳಿಗೆ ನ್ಯುಮೋಕಾಕಲ್ ಕಾಂಜುಗೇಟ್ ಲಸಿಕೆ ಉಪಯುಕ್ತವಾಗಿದೆ. ಖಾಸಗಿಯಾಗಿ ಮಾತ್ರ ಲಭ್ಯವಿದ್ದ ಈ ಲಸಿಕೆಯನ್ನು ಈಗ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ ಎಂದರು.

    ಮಕ್ಕಳಲ್ಲಿ ಕಂಡುಬರುವ ರೋಗ : ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಆರ್.ರಂಗನಾಥ್ ಮಾತನಾಡಿ, 2010ರಲ್ಲಿ ನ್ಯುಮೋಕಾಕಲ್ ನ್ಯುಮೋನಿಯಾದ ಸುಮಾರು 1.05 ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿದ್ದವು. ಶಿಶುಮರಣ ತಡೆಗಟ್ಟಲು ಈ ಲಸಿಕೆ ಬಹಳ ಉಪಯುಕ್ತವಾಗಿದೆ. ಮುಖ್ಯವಾಗಿ ಈ ರೋಗವು ಅಪೌಷ್ಟಿಕತೆ, ಎದೆ ಹಾಲಿನಿಂದ ವಂಚಿತವಾಗುವ ಮಕ್ಕಳು, ಸೌದೆ ಒಲೆಯಿಂದ ಬರುವ ಹೊಗೆಯನ್ನು ಉಸಿರಾಡುವ ಮಕ್ಕಳು, ಹೆಚ್ಚು ಜನಜಂಗುಳಿ ಇರುವ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳು ಈ ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ವಿವರಿಸಿದರು.
    ಪುರಸಭೆ ಸದಸ್ಯೆ ವಿಜಯ ರೂಪೇಶ್ ವಾತನಾಡಿದರು.

    ಮಾಜಿ ಸದಸ್ಯ ರೂಪೇಶ್, ದಂತವೈದ್ಯೆ ಡಾ. ಮಂಜುಳ, ಎಲ್‌ಎಚ್‌ವಿ. ಆರ್.ಮಂಜುಳಾ, ಆರೋಗ್ಯ ನಿರೀಕ್ಷಣಾಧಿಕಾರಿ ತುಕಾರಾಂ, ಬಿಪಿಎಂ ಕಾವ್ಯ, ಮಮತ,ರಾಜೇಶ್ವರಿ, ವನಜಾ, ರುದ್ರಾಣಮ್ಮ, ವತ್ಸಲಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts