More

    ಮಂಡೆಕೋಲು ಗ್ರಾಮದಲ್ಲಿ ಮುಂದುವರಿದ ಗಜ ಪಡೆ ಹಾವಳಿ

    ಮಂಗಳೂರು: ಕೇರಳ ಗಡಿ ಗ್ರಾಮ ಸುಳ್ಯ ತಾಲೂಕಿನ ಮಂಡೆಕೋಲಿನಲ್ಲಿ ಗಜ ಪಡೆ ಹಾವಳಿ ಮುಂದುವರಿದಿದೆ. ಕೃಷಿಗೆ ಅಪಾರ ಹಾನಿ ಉಂಟು ಮಾಡುತ್ತಿವೆ.

    ಗ್ರಾಮದ ದೇವರಗುಂಡ, ಕೇನಾಜೆ, ಕಾಜಳ, ಅಕ್ಕಪ್ಪಾಡಿ ಪ್ರದೇಶದಲ್ಲಿ ಕಳೆದ ಹತ್ತು ದಿನಗಳಿಂದ ಕಾಡಾನೆ ಹಾವಳಿ ಜೋರಾಗಿದೆ. ಬುಧವಾರ ಸಂಜೆ ಏಳು ಆನೆಗಳ ಹಿಂಡು ಮಂಡೆಕೋಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪರಪ್ಪೆ ತೂಗು ಸೇತುವೆ ಬಳಿಯಲ್ಲಿ ಪಯಸ್ವಿನಿ ನದಿಯಲ್ಲಿ ಕಂಡು ಬಂದಿವೆ. ಮರಿ ಆನೆಗಳ ಸಹಿತ ಆನೆಗಳ ಹಿಂಡು ಈ ಪ್ರದೇಶದಲ್ಲಿ ಬೀಡು ಬಿಟ್ಟಿವೆ.

    ಮನೆಗಳ ಸಮೀಪವೂ ದಾಂಗುಡಿ ಇಡುತ್ತಿರುವ ಗಜ ಪಡೆ ಭೀತಿ ಹುಟ್ಟಿಸಿವೆ. ಕೃಷಿಗೆ ವ್ಯಾಪಕ ಹಾನಿ ಮಾಡುತ್ತಿವೆ. ಬಾಳೆ, ಅಡಕೆ,ತೆಂಗು, ಕೊಕ್ಕೋ ಬೆಳೆ ನಾಶ ಮಾಡುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

    ಓಡಿಸುವ ಕಾರ್ಯಾಚರಣೆ ಸಂದರ್ಭದಲ್ಲಿ ಪಯಸ್ವಿನಿ ನದಿ ದಾಟಿ ಸಮೀಪದ ಕಾಡಿಗೆ ಹೋಗುತ್ತವೆ. ಸ್ವಲ್ಪ ಸಮಯದಲ್ಲಿ ಮರಳಿ ಗ್ರಾಮದ ಕಡೆಗೆ ಬರುತ್ತವೆ. ಮನೆಗಳ ಸಮೀಪವೂ ಬರುತ್ತಿರುವುದರಿಂದ ನಿವಾಸಿಗಳಿಗೆ ಮನೆಯಿಂದ ಹೊರಗೆ ಬರಲು ಭಯವಾಗುತ್ತಿದೆ. ನಡೆದುಕೊಂಡು ಹೋಗುವಾಗ ಮತ್ತು ವಾಹನಗಳಲ್ಲಿ ಪ್ರಯಾಣಿಸುವಾಗ ಹಲವರಿಗೆ ಗಜ ಪಡೆ ಎದುರಾಗಿದೆ. ಹಲವು ವರ್ಷಗಳಿಂದ ಕಾಡಾನೆ ದಾಳಿ ಸಮಸ್ಯೆ ಇದ್ದು, ಶಾಶ್ವತ ಪರಿಹಾರ ಮರೀಚಿಕೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts