More

    ಭೂಕುಸಿತದಲ್ಲಿ ಸಿಲುಕಿದ್ದ ಬಾಲಕಿ ಪಾರು

    ನರಗುಂದ: ಪಟ್ಟಣದಲ್ಲಿ ಸೋಮವಾರ ಭೂಕುಸಿತ ಸಂಭವಿಸಿದ್ದು, ಅದೃಷ್ಟವಶಾತ್ ಬಾಲಕಿಯೊಬ್ಬಳು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

    ಹಗೇದಕಟ್ಟಿ ಕುರುಬಗೇರಿ ಬಡಾವಣೆಯ 14 ವರ್ಷದ ಕಾವ್ಯಾ ನಿಂಗಪ್ಪ ಹೂಲಿ (ನುಗ್ಗಾನಟ್ಟಿ) ಎಂಬ ಬಾಲಕಿ ಭೂಕುಸಿತದಲ್ಲಿ ಸಿಲುಕಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಸೋಮವಾರ ಅಮಾವಾಸ್ಯೆ ಆಗಿದ್ದರಿಂದ ಕಾವ್ಯಾಳ ತಂದೆ ನಿಂಗಪ್ಪ ಪತ್ನಿಯೊಂದಿಗೆ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮಕ್ಕೆ ದೇವರ ದರ್ಶನಕ್ಕಾಗಿ ತೆರಳಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಾವ್ಯಾ ಆಕೆಯ 12 ವರ್ಷದ ತಮ್ಮ ಈರಪ್ಪನೊಂದಿಗೆ ಊಟ ಮಾಡಿಕೊಂಡು ಮನೆಯಲ್ಲಿ ಟಿವಿ ನೋಡುತ್ತ ಕುಳಿತಿದ್ದಳು. ಈ ವೇಳೆ ಏಕಾಏಕಿ ಭೂಮಿ ಅದರಿದಂತಾಗಿ ಭೂಕುಸಿತ ಸಂಭವಿಸಿ, ಮನೆಯ ಮೇಲ್ಚಾವಣೆ ಸಂಪೂರ್ಣ ಕುಸಿದಿದೆ. ಇದರಿಂದ ಮನೆಯ ಅವಶೇಷಗಳಡಿ ಕಾವ್ಯಾ ಸಿಲುಕಿ ನರಳಾಡುತ್ತಿದ್ದಳು. ಅಲ್ಲದೆ, ಆಕೆಯ ತಮ್ಮ ಈರಪ್ಪನ ತಲೆಗೆ ಬಲವಾದ ಪೆಟ್ಟು ಬಿದ್ದಿದ್ದರಿಂದ ಆತನು ಕೂಡ ಚೀರಾಡುತ್ತ ಮನೆಯಿಂದ ಹೊರಗೆ ಬಂದಿದ್ದಾನೆ.

    ಅಕ್ಕ-ಪಕ್ಕದ ಮನೆಯವರಿಗೆ ತನ್ನ ಸಹೋದರಿ ಕಾವ್ಯಾ ಅವಶೇಷಗಳಡಿ ಸಿಲುಕಿರುವ ಬಗ್ಗೆ ತಿಳಿಸಿದ್ದಾನೆ. ಸಮಯಕ್ಕೆ ಸರಿಯಾಗಿ ಧಾವಿಸಿದ ಬಡಾವಣೆಯ ಸಾರ್ವಜನಿಕರು ಕಾವ್ಯಾಳನ್ನು ರಕ್ಷಿಸಿದ್ದಾರೆ. ಕಾವ್ಯಾಳ ತಲೆ, ಕೈ-ಕಾಲುಗಳಿಗೆ ಗಂಭೀರ ಗಾಯಗಳಾಗಿವೆ. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಕಾವ್ಯಾಳಿಗೆ ತಾಲೂಕಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹುಬ್ಬಳ್ಳಿಯ ಕಿಮ್್ಸ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ಹಿಂದೆ ಇದೇ ಬಡಾವಣೆಯ ಶರಣಪ್ಪ ಹಾಗೂ ರುದ್ರವ್ವ ಎಂಬ ದಂಪತಿ ಗುಂಡಿಯಲ್ಲಿ ಸಿಲುಕಿ ಪ್ರಾಣಾಪಾಯದಿಂದ ಪಾರಾಗಿದ್ದರು. ಅಲ್ಲದೆ, ಹನುಮಂತ ಗಂಗಾಪೂರ ಎಂಬುವರ ಎತ್ತು ಕೂಡ ಭೂಕುಸಿತದ ಗುಂಡಿಯಲ್ಲಿ ಸಿಲುಕಿತ್ತು. ಆಗ ಅಗ್ನಿಶಾಮಕ ದಳದ ಅಧಿಕಾರಿಗಳು ರಕ್ಷಣೆ ಮಾಡಿದ್ದರು. ಭೂಕುಸಿತ ಘಟನೆಗಳು ಮರುಕಳಿಸುತ್ತಿದ್ದು, ಜನತೆಯಲ್ಲಿ ನಡುಕ ಹುಟ್ಟಿಸಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸ್, ಅಗ್ನಿಶಾಮಕ, ಪುರಸಭೆ, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts