More

    ಕೊಣ್ಣೂರಲ್ಲಿ ಜೈನ ಬಸದಿಗೆ ಶಿಲಾನ್ಯಾಸ

    ನರಗುಂದ: ತಾಲೂಕಿನ ಕೊಣ್ಣೂರ ಗ್ರಾಮದ ಭಗವಾನ್ ಶ್ರೀ 1008 ಮಹಾವೀರ ದಿಗಂಬರ ಜೈನ ಬಸದಿ ನಿರ್ವಣಕ್ಕೆ ಶಿರಸಿ ಸೋಂದಾಮಠದ ಜಗದ್ಗುರು ಶ್ರೀ ಭಟ್ಟಾಕಲಂಕ ಭಟ್ಟಾರಕ ಮಹಾಸ್ವಾಮಿಗಳು ಗುರುವಾರ ಶಿಲಾನ್ಯಾಸ ನೆರವೇರಿಸಿದರು.
    ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು, ಕೊಣ್ಣೂರಿನ ನೂತನ ಜೈನ ಬಸದಿ (ದೇವಸ್ಥಾನವನ್ನು) 33 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ವಿುಸಲಾಗುತ್ತಿದೆ. ಬಸದಿ ನಿರ್ವಣಕ್ಕೆ ಜಿಪಂ ಇಲಾಖೆಯಿಂದ ಈ ಹಿಂದೆ 5 ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಂಡಿತ್ತು. ಇದರಲ್ಲಿ ಬಸದಿಯ ತಳಪಾಯ ಹಾಕಲಾಗಿದೆ. ಈಗ ಬಾಗಲಕೋಟಿ ಲೋಕಸಭಾ ಸಂಸದ ಪಿ.ಸಿ. ಗದ್ದಿಗೌಡ್ರ ಅವರು 5 ಲಕ್ಷ ರೂಪಾಯಿ ಅನುದಾನ ನೀಡುವುದರ ಒಪ್ಪಿಗೆ ಪತ್ರ ನೀಡಿದ್ದಾರೆ. ಬಸದಿ ನಿರ್ವಣಕ್ಕೆ ತಗಲುವ ಇನ್ನೂಳಿದ ಸಂಪೂರ್ಣ ವೆಚ್ಚವನ್ನು ಜೈನ ಸಮಾಜದವರಿಂದ ಸಂಗ್ರಹಿಸಿದ ದೇಣಿಗೆ ಹಣದಿಂದ ನಿರ್ವಿುಸುವ ಸಂಕಲ್ಪ ಕೈಗೊಂಡಿರುವುದು ಇತರರಿಗೆ ಮಾದರಿ ಹಾಗೂ ಸ್ತುತ್ಯಾರ್ಹ ಕಾರ್ಯವಾಗಿದೆ ಎಂದು ಬಣ್ಣಿಸಿದರು.
    ಬಸದಿಯ ದ್ವಾರಬಾಗಿಲು, ಗರ್ಭಗುಡಿ ಬಾಗಿಲು ಶಿಲಾನ್ಯಾಸ ಕಾರ್ಯಕ್ರಮದ ಪ್ರಯುಕ್ತ ಕೊಣ್ಣೂರಿನ ಪ್ರಮುಖ ಬೀದಿಗಳಲ್ಲಿ ಸಮಾಜದ ಮಹಿಳೆಯರಿಂದ ಕುಂಭ ಆರತಿ, ಕರಡಿ ಮಜಲಿನ ವಾದ್ಯ ಮೇಳಗಳ ಮೆರವಣಿಗೆ ಮೂಲಕ ಶಿಲಾನ್ಯಾಸ ಪುರಪ್ರವೇಶ ಕಾರ್ಯಕ್ರಮ ಜರುಗಿತು.
    ಈ ಸಂದರ್ಭದಲ್ಲಿ ಬಸದಿಗೆ ಭೂದಾನ ಮಾಡಿರುವ ಚಂದ್ರಗೌಡ ಪಾಟೀಲ, ವಿಜುಗೌಡ ಪಾಟೀಲ, ಜೈನ ಸಮಾಜದ ನರಗುಂದ ತಾಲೂಕು ಅಧ್ಯಕ್ಷ ತವನಪ್ಪ ರೋಖಡೆ, ರವೀಂದ್ರಪ್ಪ ಭೋಗಾರ, ಮಂಜುನಾಥ ವಜ್ರಾಂಗಿ, ಮಹಾವೀರ ವಜ್ರಾಂಗಿ, ನಾಗಪ್ಪ ವಜ್ರಾಂಗಿ, ರವಿ ವಜ್ರಾಂಗಿ, ಹೇಮಣ್ಣ ವಜ್ರಾಂಗಿ, ಹಾವೇರಿ, ಹೊಳೆಆಲೂರ, ಗುಡಿಸಾಗರ, ಪಡೇಸೂರ ಗ್ರಾಮಗಳ ಜೈನ ಸಮಾಜದ ಗುರು,ಹಿರಿಯರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts