More

    ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸಿ

    ಕಲಬುರಗಿ: ಭರತನಾಟ್ಯದಂತಹ ಕಲೆಯನ್ನು ಆರಾಧಿಸುವ ಮೂಲಕ ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸಬೇಕಿದೆ ಎಂದು ಹರಿದಾಸ ಪ್ರಚಾರ ವಾಹಿನಿ ಅಧ್ಯಕ್ಷ ಪಂಡಿತ ಗೋಪಾಲಾಚಾರ್ಯ ಅಕಮಂಚಿ ಅಭಿಪ್ರಾಯಪಟ್ಟರು.
    ಡಾ.ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ವರ್ಣಸಿಂಧು ನೃತ್ಯ ಕಲಾಕೇಂದ್ರದ ವಾ ಕೋತ್ಸವದ ನರ್ಮದಾ ನೃತ್ಯೋತ್ಸವದಲ್ಲಿ ಮಾತನಾಡಿದ ಅವರು, ಭರತನಾಟ್ಯ ತುಂಬ ಹಳೆಯ ಕಲೆ. ಇಂತಹ ಕಲೆ ಮೈಗೂಡಿಸಿಕೊಳ್ಳುವುದರ ಜತೆಗೆ ಭಾರತೀಯ ಸಂಸ್ಕೃತಿ ಉಳಿಸಿ ಬೆಳೆಸಲು ಸಹಕಾರಿಯಾಗಬೇಕು ಎಂದರು.
    ವರ್ಣಸಿಂಧು ನೃತ್ಯ ಕಲಾಕೇಂದ್ರದ ನೂರಾರು ಪುಟಾಣಿಗಳು ತಮ್ಮ ಪ್ರತಿಭೆ ಅನಾವರಣಗೊಳಿಸಿದ್ದು ಶ್ಲಾಘನೀಯ. ಪಾಲಕರು ತಮ್ಮ ಮಕ್ಕಳನ್ನು ಭರತನಾಟ್ಯ ಕಲಿಕೆಗೆ ಅಣಿಗೊಳಿಸಿರುವುದು ಸ್ತುತ್ಯರ್ಹ. ಜೀವನದಲ್ಲಿ ಕಲೆ, ಸಾಹಿತ್ಯ, ಸಂಗೀತ ಅಳವಡಿಸಿಕೊಂಡಲ್ಲಿ ಜ್ಞಾನಾಭಿವೃದ್ಧಿ, ದೇಶಾಭಿವೃದ್ಧಿ ಆಗಲಿದೆ ಎಂದು ಹೇಳಿದರು.
    ವಿಜಯವಾಣಿ ಸ್ಥಾನಿಕ ಸಂಪಾದಕ ವಾದಿರಾಜ ವ್ಯಾಸಮುದ್ರ ಮಾತನಾಡಿ, ಈ ಭಾಗದಲ್ಲಿ ಕಲೆ, ಸಾಹಿತ್ಯದಲ್ಲಿ ಅನೇಕ ಪ್ರತಿಭೆಗಳಿದ್ದರೂ ಪ್ರಚಾರ, ಪ್ರೋತ್ಸಾಹ ಕೊರತೆಯಿಂದ ಪ್ರತಿಭೆ ಅನಾವರಣಗೊಳಿಸಲು ಸಾಧ್ಯವಾಗುತ್ತಿಲ್ಲ. ಕಲ್ಯಾಣ ಕರ್ನಾಟಕದ ಪ್ರತಿಭೆಗಳನ್ನು ಗುರುತಿಸಿ ಮಾಧ್ಯಮದ ಮೂಲಕ ಸಮಾಜಕ್ಕೆ ಪರಿಚಯಿಸುವ ಕೆಲಸ ಆಗಬೇಕು ಎಂದು ಸಲಹೆ ನೀಡಿದರು.
    ಕೆಲ ಪ್ರಮುಖ ಸಮಾರಂಭಗಳಲ್ಲಿ ಸ್ಥಳೀಯ ಕಲಾವಿದರನ್ನು ಕಡೆಗಣಿಸಲಾಗುತ್ತಿದೆ. ಆದರೆ ಅವಕಾಶ ಕಲ್ಪಿಸಿದರೆ ಅವರು ಯಾರಿಗಿಂತ ಕಡಿಮೆ ಇಲ್ಲ ಎಂಬುದನ್ನು ತೋರಿಸಬಲ್ಲರು. ಇಂತಹ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗಬೇಕು. ಪುಟ್ಟ ಮಕ್ಕಳ ಪ್ರತಿಭೆ ಅನಾವರಣ ಆಗಬೇಕು. ಈ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಅನಂತ ಚಿಂಚನಸೂರ ಅಭಿನಂದನಾರ್ಹರು ಎಂದರು.
    ಸಾಧಕರಾದ ಆಶಾ ಹೆಗಡೆ, ಸುನಂದ ಸಾಲವಾಡಗಿ, ಮಂಗಲಾ ಉಪ್ಪಿನ್, ಸ್ವಪ್ನಾ ಪಾಟೀಲ್, ರವೀಂದ್ರ ಕುಲಕಜ ಅವರನ್ನು ಹಿರಿಯ ಕಲಾವಿದ ಅನಂತ ಚಿಂಚನಸೂರ ದಂಪತಿ ಸತ್ಕರಿಸಿದರು. ಅಂಬುಜಾ ಮಳಖೇಡಕರ್ ನಿರೂಪಣೆ ಮಾಡಿದರು.

    ಭಾರತೀಯ ಸಂಸ್ಕೃತಿಗೆ ಭರತನಾಟ್ಯ ದೊಡ್ಡ ಕೊಡುಗೆ ನೀಡಿದೆ. ಈ ಕಲೆ ಅಳವಡಿಸಿಕೊಳ್ಳುವ ಮಕ್ಕಳು ಸಾಂಸ್ಕೃತಿಕ ರಾಯಭಾರಿಗಳು. ಮಕ್ಕಳಲ್ಲಿ ಆಚಾರ, ವಿಚಾರ, ಏಕಾಗ್ರತೆ ಈ ಕಲೆಯಿಂದ ಲಭ್ಯವಾಗಲಿದೆ.
    | ಜಿ.ವಿ.ಪ್ರಸಾದ
    ಶಿಕ್ಷಕ, ಎಸ್ಬಿಆರ್ ಶಾಲೆ ಕಲಬುರಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts