More

    ಭಾರತದ ಪ್ರಾಥಮಿಕ, ಪ್ರೌಢ ಶಿಕ್ಷಣವೇ ಶ್ರೇಷ್ಠ

    ಹುಬ್ಬಳ್ಳಿ: ಭಾರತದ ಶೈಕ್ಷಣಿಕ ವ್ಯವಸ್ಥೆ ಕೆಟ್ಟಿದೆ ಎನ್ನುವ ಆರೋಪಗಳ ಮಧ್ಯೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವೇ ಶ್ರೇಷ್ಠ. ಜೀವನದಲ್ಲಿ ಪ್ರತಿಯೊಬ್ಬರೂ ಇಲ್ಲಿ ಕಲಿಸಿದ ಶಿಕ್ಷಕರನ್ನು ಯಾವತ್ತಿಗೂ ಮರೆಯುವುದಿಲ್ಲ ಎಂದು ಖ್ಯಾತ ಅಂಕಣಕಾರ ಪ್ರೊ. ಎಂ. ಕೃಷ್ಣೇಗೌಡ ಸ್ಮರಿಸಿದರು.

    ಅವ್ವ ಸೇವಾ ಟ್ರಸ್ಟ್, ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ, ಶಹರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ವತಿಯಿಂದ ಇಲ್ಲಿನ ಘಂಟಿಕೇರಿಯ ನೆಹರು ಕಾಲೇಜ್​ನ ಅಂಜುಮನ್ ಆಡಿಟೋರಿಯಂ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ಪ್ರೌಢಶಾಲಾ ಶಿಕ್ಷಕರಿಗಾಗಿ ಚಿಂತನಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಬರೀ ಸಂಬಳದ ಉಪಾಧ್ಯಾಯರಾಗದೇ ಅದರಾಚೆ ಸೇವಾ ಮನೋಭಾವ ರೂಢಿಸಿಕೊಳ್ಳಬೇಕು. ಶಾಲೆಯಲ್ಲಿ ಮಕ್ಕಳು ಕಲಿಯುವುದಷ್ಟೇ ಅಲ್ಲ, ಶಿಕ್ಷಕರ ಕಲಿಕೆಯೂ ಇದೆ. ಮಕ್ಕಳಿಗೆ ಕಲಿಸುವ ತುಡಿತ ಎಲ್ಲರಿಗೂ ಬರಬೇಕು. ಅಂದಾಗ ಮಾತ್ರ ಶಿಕ್ಷಣ ವ್ಯವಸ್ಥೆಯ ಉನ್ನತೀಕರಣ ಸಾಧ್ಯ ಎಂದರು.

    ಎಂಎಲ್​ಸಿ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಿಕ್ಷಣ, ರಾಜಕಾರಣ, ಸಾಮಾಜಿಕ ವ್ಯವಸ್ಥೆಯಲ್ಲಿ ಬದಲಾಗಿದೆ. ಆದರ್ಶ, ಮೌಲ್ಯಗಳನ್ನು ಅಳೆದು ತೂಗಿ ನೋಡುವ ದುಸ್ಥಿತಿ ಬಂದಿದೆ. ಆದರೆ, ಆದರ್ಶಗಳನ್ನು ತುಂಬುವ ಕೆಲಸವನ್ನು ಶಿಕ್ಷಕರು ಮಾಡಬೇಕು ಎಂದರು.

    ಕೆಎಲ್​ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಜೀವನದ ಮೌಲ್ಯ ಕಲಿಸುವ ಅಗತ್ಯವಿದೆ. ಭಾಷಣ ಮಾಡುವುದು ದೊಡ್ಡದಲ್ಲ. ಮಾತಿನಂತೆ ಕೃತಿಯೂ ಇದ್ದರೆ ಜೀವನ ಆದರ್ಶವಾಗಲಿದೆ. ಅಂಕಗಳ ಆಧಾರದ ಮೇಲೆ ವಿದ್ಯಾರ್ಥಿಗಳ ಭವಿಷ್ಯ ಅಳೆಯುವುದಕ್ಕಿಂತ ಸಮಾಜಕ್ಕೆ ಒಳಿತು ಮಾಡುವ ಮೌಲ್ಯಗಳನ್ನು ನೋಡುವುದು ಒಳ್ಳೆಯದು ಎಂದು ಸಲಹೆ ನೀಡಿದರು.

    ಅಂಜುಮನ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎಂ.ಸಿ. ಸವಣೂರ, ಅವ್ವ ಸೇವಾ ಟ್ರಸ್ಟ್ ಕಾರ್ಯದರ್ಶಿ ಶಶಿ ಸಾಲಿ ಮಾತನಾಡಿದರು.

    ಶಹರ ಬಿಇಒ ಶ್ರೀಶೈಲ ಕರಿಕಟ್ಟಿ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಆರ್. ಭಟ್, ಉಪಾಧ್ಯಕ್ಷ ಎಂ.ಬಿ. ನಾತು, ಜಿಲ್ಲಾಧ್ಯಕ್ಷ ವಿ.ಎಸ್. ಹುದ್ದಾರ, ಬಿ.ಕೆ. ಮಳಗಿ, ಎಸ್.ವಿ. ಪಟ್ಟಣಶೆಟ್ಟಿ, ಎನ್. ಸವಣೂರ, ಜ್ಯೋತಿ ಪಾಟೀಲ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts