More

    ಭಾನುವಾರ ಸ್ತಬ್ಧ ಸೋಮವಾರ ತದ್ವಿರುದ್ಧ

    ಕಲಬುರಗಿ: ಕರೊನಾ ಮಣಿಸಲು ಭಾನುವಾರ ಕರೆ ನೀಡಿದ್ದ ಜನತಾ ಕಫ್ಯರ್ೂಗೆ ನಗರ ಸೇರಿ ಜಿಲ್ಲಾದ್ಯಂತ ಭಾರಿ ಬೆಂಬಲ ಸಿಕ್ಕಿದ್ದರಿಂದ ಎಲ್ಲವೂ ಸ್ಥಬ್ದಗೊಂಡಿತ್ತು. ಆದರೆ ಸೋಮವಾರದ ಸ್ಥಿತಿ ಅದಕ್ಕೆ ತದ್ವಿರುದ್ಧವಾಗಿತ್ತು.
    ಕರೊನಾ ವಿರುದ್ಧ ಹೋರಾಡುವ ಬದಲು ಆಹ್ವಾನಿಸುವಂಥ ದೃಶ್ಯಗಳು ಮಹಾನಗರದಲ್ಲಿ ಕಂಡು ಬಂದವು. ಸಂಪೂರ್ಣ ಲಾಕ್ಡೌನ್ ಮಂಗಳವಾರದಿಂದ ಪರಿಣಾಮಕಾರಿಯಾಗಿ ಜಾರಿಗೊಳ್ಳಲಿದೆ. ಇದರಿಂದಾಗಿ ಮಂಗಳವಾರ ಬಹುತೇಕ ಕಲಬುರಗಿ ಸ್ತಬ್ಧವಾಗಲಿದೆ. ಅದಕ್ಕಾಗಿ ಪೊಲೀಸರು ಸಂಜೆಯಿಂದ ಇನ್ನಿಲ್ಲದ ಕಸರತ್ತು ಶುರುವಿಟ್ಟಿದ್ದಾರೆ.
    ಪಾಲನೆಯಾಗದ ಆದೇಶ: ನಿಷೇಧಾಜ್ಞೆ ಇದ್ದರೂ ನಗರ ಸೇರಿ ಜಿಲ್ಲೆಯ ಎಲ್ಲಿಯೂ ಆದೇಶ ಪಾಲನೆ ಆಗುತ್ತಿಲ್ಲ. ನಗರದಲ್ಲಿ ವಿಜಯವಾಣಿ ರೌಂಡ್ ಹಾಕಿದ ವೇಳೆ ಬೈಕ್ಗಳ ಸಂಚಾರ ಜೋರಾಗಿ ಕಂಡಿತು. ಜಿಲ್ಲಾಧಿಕಾರಿ ಆದೇಶ ಸ್ಪಷ್ಟವಾಗಿ ಉಲ್ಲಂಘಿಸಿದ್ದರೂ ಯಾರೊಬ್ಬರಿಗೂ ಹಿಡಿಯುವ, ಪ್ರಕರಣ ದಾಖಲಿಸುವ, ಕನಿಷ್ಠ ಎಚ್ಚರಿಕೆ ನೀಡುವಂಥ ಕೆಲಸ ಪೊಲೀಸರು ಸೇರಿ ಸಂಬಂಧಿತರಿಂದ ನಡೆದಿರುವುದು ಕಾಣಲಿಲ್ಲ. ಸಂಜೆ ಹೊತ್ತಿಗೆ ಪೊಲೀಸರು ಮೈಕೊಡವಿಕೊಂಡು ಎದ್ದು ವಾಹನಗಳಲ್ಲಿ ಲೌಡ್ ಸ್ಪೀಕರ್ ಮೂಲಕ ಎಚ್ಚರಿಕೆ ನೀಡಲು ಶುರುವಿಟ್ಟರು.

    ವಿನಾಕಾರಣ ಓಡಾಡಿದರೂ ಕಠಿಣ ಕ್ರಮ
    ನಗರದಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ. ಅಲ್ಲದೆ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿದ್ದರಿಂದ ಮನೆಯಿಂದ ಅನಗತ್ಯವಾಗಿ ಹೊರಬರುವಂತಿಲ್ಲ. ಸಕಾರಣ ಇಲ್ಲದೆ ಹೊರಗಡೆ ಬಂದು ರಸ್ತೆಯಲ್ಲಿ ಓಡಾಡಿದರೆ ಕೇಸ್ ದಾಖಲಿಸುವ ಮೂಲಕ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್. ನಾಗರಾಜ ಎಚ್ಚರಿಕೆ ನೀಡಿದ್ದಾರೆ. ನಗರ ಪ್ರವೇಶಿಸುವ ಐದು ಪ್ರಮುಖ ಸ್ಥಳಗಲ್ಲಿ ಚೆಕ್ ಪೋಸ್ಟ್ ಆರಂಭಿಸಲಾಗಿದೆ. ನಗರದ ವಿವಿಧೆಡೆ 16 ಚೆಕ್ಪೋಸ್ಟ್ಗಳ ಕಾರ್ಯಾಚರಣೆ ಶುರುವಾಗಿದೆ. ಚೆಕ್ಪೋಸ್ಟ್ಗಳು ದಿನದ 24 ಗಂಟೆ ಕಾರ್ಯನಿರ್ವಹಿಸಲಿದ್ದು, ಸರದಿಯಂತೆ ಸಿಬ್ಭಂದಿ ಕೆಲಸ ನಿರ್ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಜನರು ಜಮಾಗೊಂಡರೆ ಅವರ ವಿರುದ್ಧ ಐಪಿಸಿ 269 ಮತ್ತು 270 ಅಡಿ ಕೇಸ್ ದಾಖಲಿಸಲಾಗುವುದು. ಅನುಚಿತವಾಗಿ ನಡೆದುಕೊಂಡರೂ ಕೇಸ್ ದಾಖಲಿಸುವುದಾಗಿ ನಾಗರಾಜ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts