More

    ‘ಭರತನಾಟ್ಯ ರಂಗಪ್ರವೇಶ’ಕ್ಕೆ ಅಣಿಯಾದ ಗ್ರಾಮೀಣ ಪ್ರತಿಭೆ

    ಮೈಸೂರು: ರೈತ ಕುಟುಂಬದ ಹಿನ್ನೆಲೆಯುಳ್ಳ ಗ್ರಾಮೀಣ ಪ್ರತಿಭೆ ‘ಭರತನಾಟ್ಯ ರಂಗಪ್ರವೇಶ’ ಮಾಡಲು ಅಣಿಯಾಗಿದ್ದಾರೆ.
    ಕಲಾನಿಧಿ ಸ್ಕೂಲ್ ಆ್ ಡಾನ್ಸ್ ವತಿಯಿಂದ ಮಾ.21 ರಂದು ಸಂಜೆ 5.30ಕ್ಕೆ ಕಲಾಮಂದಿರದಲ್ಲಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕುಮಾರಿ ಡಿ.ಎಲ್. ಮೋನಿಕಾ ‘ಭರತನಾಟ್ಯ ರಂಗಪ್ರವೇಶ’ ಮಾಡಲಿದ್ದಾರೆ ಎಂದು ಗುರು ವಿದುಷಿ ಪದ್ಮಶ್ರೀ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಮೋನಿಕಾ ರಂಗ ಪ್ರವೇಶದ ಕಾರ್ಯಕ್ರಮದಲ್ಲಿ ಪುಷ್ಪಾಂಜಲಿ, ಗಣೇಶಕೃತಿ, ದೇವಿ ಕೃತಿ, ಪದವರ್ಣ, ದೇವರನಾಮ, ಅಷ್ಟಪದಿ, ತಿಲ್ಲಾನ ಸೇರಿ ನಾನಾ ನೃತ್ಯಬಂಧಗಳನ್ನು ಪ್ರಸ್ತುತಪಡಿಸಲಿದ್ದಾರೆ. ಇವರಿಗೆ ಗುರು ಪದ್ಮಶ್ರೀ (ನಟುವಾಂಗ), ವಿದ್ವಾನ್ ನಂದಕುಮಾರ್ ಉನ್ನಿಕೃಷ್ಣನ್(ಹಾಡುಗಾರಿಕೆ), ವಿದ್ವಾನ್ ಲಿಂಗರಾಜು(ಮೃದಂಗ), ವಿದ್ವಾನ್ ಕಾರ್ತಿಕ್ ಸಾತವಳ್ಳಿ (ಕೊಳಲು), ವಿದ್ವಾನ್ ಶಂಕರ್ ರಾಮನ್(ವೀಣೆ), ವಿದ್ವಾನ್ ಕಾರ್ತಿಕ್ ವೈಧಾತ್ರಿ(ರಿದಂ ಪ್ಯಾಡ್) ಹಿಮ್ಮೇಳ ಸಹಕಾರ ನೀಡಲಿದ್ದಾರೆ ಎಂದರು.

    ಕಾರ್ಯಕ್ರಮದಲ್ಲಿ ಶಾಸಕ ರವೀಂದ್ರ ಶ್ರೀಕಂಠಯ್ಯ, ರಾಜರಾಜೇಶ್ವರಿ ಕಲಾನಿಕೇತನ ನಿರ್ದೇಶಕ ಡಾ.ವೀಣಾಮೂರ್ತಿ ವಿಜಯ್, ನಂದಿನಿ ನೃತ್ಯಾಲಯದ ನಿರ್ದೇಶಕಿ ಆರ್.ಕಣ್ಣನ್, ಸುನೀತಾ ಪುಟ್ಟಣ್ಣಯ್ಯ, ಸಿ.ಕೆ.ರವಿಚಾಮಲಾಪುರ ಭಾಗವಹಿಸಲಿದ್ದಾರೆ ಎಂದರು.

    ಮೋನಿಕಾ ಮಂಡ್ಯ ಜಿಲ್ಲೆ, ಶ್ರೀರಂಗಪಟ್ಟಣ ತಾಲೂಕಿನ ದರಸಗುಪ್ಪೆ ಗ್ರಾಮದ ಲೋಕೇಶ್, ಪಿ.ಎಂ.ರತ್ನಾ ದಂಪತಿ ಪುತ್ರಿಯಾಗಿದ್ದಾರೆ. ನಮ್ಮ 7ನೇ ವಯಸ್ಸಿನಿಂದಲೇ ನೃತ್ಯ ಅಭ್ಯಾಸ ಪ್ರಾರಂಭಿಸಿರುವ ಇವರು, ಕಲಾನಿಧಿ ಸ್ಕೂಲ್ ಆ್ ಡಾನ್ಸ್ ವಿದುಷಿ ಪದ್ಮಶ್ರೀ ಬಳಿ 15 ವರ್ಷಗಳ ಕಾಲ ನೃತ್ಯ ಕಲಿಯುತ್ತಿದ್ದಾರೆ. ಸಿವಿಲ್ ಡಿಪ್ಲೊಮಾ ಪೂರ್ಣಗೊಳಿಸಿರುವ ಇವರು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ವಿದ್ವತ್ ಪೂರ್ವ ಮತ್ತು ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಳಿಯ ಮಧ್ಯಮ ಪೂರ್ಣ ಪರೀಕ್ಷೆಗಳನ್ನು ಮುಗಿಸಿ, ವಿದ್ವತ್ ಅಂತಿಮಕ್ಕೆ ಪಾಠಾಭ್ಯಾಸ ಮಾಡುತ್ತಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts