More

    ಭದ್ರಗಿರಿಯಲ್ಲಿ ಕಾವಡಿ ಜಾತ್ರೆ

    ತರೀಕೆರೆ: ಎಂ.ಸಿ.ಹಳ್ಳಿ ಗ್ರಾಮದ ಭದ್ರಗಿರಿ ಶ್ರೀ ಶಿವಸುಬ್ರಹ್ಮಣ್ಯಸ್ವಾಮಿ ದೇಗುಲದಲ್ಲಿ ಶನಿವಾರ ಆಡಿ ಕೃತಿಕಾ ಕಾವಡಿ ಜಾತ್ರೆ ವೈಭವದಿಂದ ಜರುಗಿತು. ಜಾತ್ರೆ ಹಿನ್ನೆಲೆಯಲ್ಲಿ ಶ್ರೀ ಶಿವಸುಬ್ರಹ್ಮಣ್ಯಸ್ವಾಮಿಗೆ ವಿವಿಧ ಅಭಿಷೇಕ ನೆರವೇರಿಸಿ ಪೂಜೆ ಸಲ್ಲಿಸಲಾಯಿತು. ತರೀಕೆರೆ, ಭದ್ರಾವತಿ, ಚಿಕ್ಕಮಗಳೂರು, ಲಿಂಗದಹಳ್ಳಿ, ಲಕ್ಕವಳ್ಳಿ, ಎಂ.ಸಿ.ಹಳ್ಳಿ, ಕೃಷ್ಣಾಪುರ, ಕಲ್ಲತ್ತಿಪುರ, ಬಳ್ಳಾವರ, ಸಂತವೇರಿ, ಕಡೂರು, ಬೀರೂರು, ಶಿವಮೊಗ್ಗ, ಸಾಗರ, ದಾವಣಗೆರೆ ಇನ್ನಿತರ ಕಡೆಗಳಿಂದ ಭಕ್ತರು ಆಗಮಿಸಿದ್ದರು. ಭದ್ರಾವತಿ, ಶಾಂತಿನಗರ, ಹೊಸೂರು, ಕೃಷ್ಣಾಪುರ ಮತ್ತಿತರ ಕಡೆಯ ಭಕ್ತರು ಮನೆಯಲ್ಲಿ ಪೂಜೆ ಸಲ್ಲಿಸಿ ತಂದ ಪುಷ್ಪ ಜನ್ಮ ಮತ್ತು ನವಿಲು ಕಾವಡಿಯನ್ನು ದೇವರಿಗೆ ಸಮರ್ಪಿಸಿ ಹರಕೆ ತೀರಿಸಿದರು. ಸಿದ್ಲಿಪುರದ ಭಕ್ತನೊಬ್ಬ 16 ಅಡಿಯ ಶೂಲ(ವೇಲು) ವನ್ನು ಬಾಯಿಗೆ ಸಿಕ್ಕಿಸಿಕೊಂಡು ಬಂದು ಹರಕೆ ತೀರಿಸಿದ್ದು ವಿಶೇಷವಾಗಿತ್ತು. ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್, ಡಿ.ಎಸ್.ಸುರೇಶ್, ದೇಗುಲದ ಪ್ರಧಾನ ಅರ್ಚಕ ಮರುಗೇಶ್ ಸ್ವಾಮಿ, ದೇಗುಲ ಆಡಳಿತ ಮಂಡಳಿ ಅಧ್ಯಕ್ಷ ಎ.ಚಂದ್ರಘೊಷನ್, ಪದಾಧಿಕಾರಿಗಳಾದ ಭೂಪಾಲ್, ಸಂಜೀವ್​ಕುಮಾರ್, ಸತೀಶ್, ಮಂಜುನಾಥ್, ಸುಂದರ್​ಬಾಬು, ಅನ್ಬು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts