More

    ಭಗವಂತನನ್ನು ಒಲಿಸಿಕೊಂಡ ಸಂತ

    ಕಾರವಾರ: ತನ್ನ ಭಕ್ತಿಯ ಭಜನೆಗಳ ಮೂಲಕ ಭಗವಂತನನ್ನು ಒಲಿಸಿಕೊಂಡ ಸಂತ ಶ್ರೇಷ್ಠರು ಕನಕದಾಸರು ಎಂದು ತಹಸೀಲ್ದಾರ್ ರಾಮಚಂದ್ರ ಕಟ್ಟಿ ಹೇಳಿದರು.

    ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ಸರಳವಾಗಿ ಆಯೋಜಿಸಿದ್ದ ಕನಕದಾಸ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ತಾಪಂ ಇಒ ಆನಂದಕುಮಾರ ಬಾಲಪ್ಪನವರ್ ಅತಿಥಿಯಾಗಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಗ್ರೇಡ್-2 ತಹಸೀಲ್ದಾರ್ ಶ್ರೀದೇವಿ ಭಟ್, ಉಪ ತಹಸೀಲ್ದಾರ್ ಎಸ್.ಕೆ.ನಾಯ್ಕ, ಆಹಾರ ಶಿರಸ್ತೆದಾರ್ ಎಸ್.ವಿ.ನಾಯ್ಕ, ಡಿ.ಆರ್.ನಾಯ್ಕ, ಎನ್.ಡಿ.ಗಾಂವಕರ್, ಸುಭಾಷ ಅಂಬಿಗ ಇದ್ದರು.

    ಅಂಕೋಲಾ ವರದಿ: ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ಕನಕದಾಸರ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ಉದಯ ಕುಂಬಾರ, ಉಪತಹಸೀಲ್ದಾರರಾದ ಸುರೇಶ ಹರಿಕಂತ್ರ, ರಾಮ ಗೌಡ, ಅಮರ ನಾಯ್ಕ, ಶಿರಸ್ತೇದಾರರಾದ ಎನ್.ಬಿ. ಗುನಗಾ, ಅನುಪಮಾ ನಾಯ್ಕ, ಗ್ರಾಮ ಲೆಕ್ಕಿಗ ಭಾರ್ಗವ ನಾಯಕ, ಸಿಬ್ಬಂದಿ ವಿನಯಾ, ಭಾವನಾ ಗಾಂವಕರ ಉಪಸ್ಥಿತರಿದ್ದರು.

    ಯಲ್ಲಾಪುರ ವರದಿ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ಭಕ್ತ ಕನಕದಾಸ ಜಯಂತಿ ಆಚರಿಸಲಾಯಿತು. ತಹಸೀಲ್ದಾರ ಗಣಪತಿ ಶಾಸ್ತ್ರಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಬಿಇಒ ಎನ್. ಆರ್. ಹೆಗಡೆ, ದೈಹಿಕ ಶಿಕ್ಷಣ ಪರಿವೀಕ್ಷಕ ರವೀಂದ್ರ ಕಾಪ್ಸೆ, ಉಪನ್ಯಾಸಕ ಮಾಲತೇಶ ಕಂಬಳಿ, ಪ್ರಮುಖರಾದ ವೈ. ಎಸ್. ಗೋಕುಲ, ನಾಗೇಶ ಮಲಮೇತ್ರಿ ಇತರರಿದ್ದರು.

    ಕಂಚನಳ್ಳಿಯಲ್ಲಿ: ತಾಲೂಕಿನ ಕಂಚನಳ್ಳಿಯ ಗೌರೀಶಂಕರ ಜ್ಞಾನ ವಿದ್ಯಾ ಗುರುಕುಲದಲ್ಲಿ ಕನಕದಾಸ ಜಯಂತಿ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಮಹೇಶ ಭಟ್ಟ, ಉಪಳೇಶ್ವರ ಹಾಲು ಉತ್ಪಾದಕರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಚಂದ್ರಶೇಖರ ಭಟ್ಟ, ನಾರಾಯಣ ಭಟ್ಟ ಕಂಚನಳ್ಳಿ, ಗೋಪಾಲಕೃಷ್ಣ ಭಟ್ಟ, ತಿಮ್ಮಣ್ಣ ಭಟ್ಟ ಉಪಸ್ಥಿತರಿದ್ದರು.

    ಭಟ್ಕಳ ವರದಿ: ತಹಸೀಲ್ದಾರ್ ಕಚೇರಿಯಲ್ಲಿ ಕನಕದಾಸ ಜಯಂತಿ ಆಚರಿಸಲಾಯಿತು. ತಹಸೀಲ್ದಾರ್ ರವಿಚಂದ್ರ, ಬಿಎಒ ದೇವಿದಾಸ ಮೊಗೇರ, ಎಎಸ್​ಐ ನವೀನ ಭೋರ್ಕರ ಸೇರಿ ಇತರರು ಇದ್ದರು.

    ಮುಂಡಗೋಡ ವರದಿ: ಕನಕದಾಸರ ಜಯಂತ್ಯುತ್ಸವದ ಅಂಗವಾಗಿ ಮುಂಡಗೋಡದ ಹೆಸ್ಕಾಂ ಕಚೇರಿಯ ಮುಂಭಾಗದಲ್ಲಿರುವ ಕನಕದಾಸರ ಗದ್ದುಗೆಗೆ ಗುರುವಾರ ಮಾಲಾರ್ಪಣೆ ಮಾಡಿ ಪೂಜೆ ಸಲ್ಲಿಸಲಾಯಿತು. ಈ ವೇಳೆ ತಹಸೀಲ್ದಾರ್ ಶ್ರೀಧರ ಮುಂದಲಮನಿ, ಕುರುಬ ಸಮಾಜದ ಜಿಲ್ಲಾಧ್ಯಕ್ಷ ಪ್ರಕಾಶ ಹುದ್ಲಮನಿ, ಎಸ್.ಎಸ್. ಪಾಟೀಲ, ರಾಜು ಗುಬ್ಬಕ್ಕನವರ, ಮಂಜು ಕೋಣನಕೇರಿ, ಗುಡದಯ್ಯ ಕಳಸಗೇರಿ, ಯಲ್ಲಪ್ಪ ಗೋಣೆನವರ, ರವಿ ಯಲ್ಲಾಪುರ ಇತರರಿದ್ದರು.

    ದಾಂಡೇಲಿ ವರದಿ: ನಗರಸಭೆ ಸಭಾಂಗಣದಲ್ಲಿ ಗುರುವಾರ ಕನಕದಾಸ ಜಯಂತಿ ಆಚರಿಸಲಾಯಿತು. ಉಪನ್ಯಾಸಕ ಹನುಮಂತ ಕುಂಬಾರ ಉಪನ್ಯಾಸ ನೀಡಿದರು. ತಹಸೀಲ್ದಾರ್ ಶೈಲೇಶ ಪರಮಾನಂದ, ನಗರಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ, ಉಪಾಧ್ಯಕ್ಷ ಸಂಜಯ ನಂದ್ಯಾಳಕರ ನಗರಸಭಾ ಸದಸ್ಯರಾದ ಹಾಗೂ ಶಿಲ್ಪಾ ಕೊಡೆ, ಪ್ರೀತಿ ನಾಯರ್ ಅನ್ನಪೂರ್ಣಾ ಬಾಗಲಕೋಟ ಇತರರು ಇದ್ದರು.

    ಬಂಗೂರನಗರ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲೆ ಆಶಾಲತಾ ಜೈನ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಂಶುಪಾಲ ಡಾ. ಎಂ.ಡಿ. ಒಕ್ಕುಂದ, ಡಾ ನಸೀರ ಅಹ್ಮದ್ ಜಂಗುಬಾಯಿ, ಲಯನ್ಸ್ ಶಾಲೆಯಲ್ಲಿ ಪಿಂಕಿ ಪೆಟ್ರೊ, ವಿಲಫ್ರೇಡ್ ಮಸ್ಕರನಿಸ್, ಜನತಾ ವಿದ್ಯಾಲಯ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಂಶುಪಾಲ ಎಂ.ಎಸ್.ಇಟಗಿ, ಕನ್ಯಾ ವಿದ್ಯಾಲಯದಲ್ಲಿ ಪ್ರಾಂಶುಪಾಲೆ ಲತಾ ಪಾಟೀಲ, ಸುಜಾತಾ ನಾಯ್ಕ ಹಾಗೂ ಸಿಬ್ಬಂದಿ ಕನಕದಾಸರ ಜಯಂತಿಯನ್ನು ಆಚರಿಸಿದರು.

    ಸಿದ್ದಾಪುರ ವರದಿ: ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಭಕ್ತ ಕನದಾಸ ಜಯಂತಿಯನ್ನು ತಹಸೀಲ್ದಾರ ಮಂಜುಳಾ ಎಸ್.ಭಜಂತ್ರಿ ಗುರುವಾರ ಉದ್ಘಾಟಿಸಿದರು. ತಾಲೂಕು ಕುರುಬ ಸಮಾಜದ ಅಧ್ಯಕ್ಷ ಮನೋಹರ ಅಪ್ಪಿನಬೈಲ್, ಪಪಂ ಮುಖ್ಯಾಧಿಕಾರಿ ಕುಮಾರ ನಾಯ್ಕ, ಶಿರಸ್ತೇದಾರ್ ನಾಗರಾಜ ನಾಯ್ಕಡ, ಎನ್.ಐ. ಗೌಡ, ಸಂಗೀತಾ ಭಟ್ಟ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts