More

    ಬ್ರಿಮ್ಸ್​ನಲ್ಲಿ ಹಾಳಾದ ಬೆಡ್​ಗಳಿಗೆ ಬೆಂಕಿ

    ಬೀದರ್: ಇಲ್ಲಿನ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬ್ರಿಮ್ಸ್) ಆಸ್ಪತ್ರೆ ಹಿಂಬದಿಯಲ್ಲಿ ಹಾಳಾಗಿ ಬಿದ್ದಿದ್ದ ಬೆಡ್​ಗಳಿಗೆ ಗುರುವಾರ ಆಕಸ್ಮಿಕ ಬೆಂಕಿ ತಗುಲಿದೆ. ಬೆಡ್​ಗಳಿಗೆ ಬೆಂಕಿ ಹೊತ್ತಿ ಉರಿಯುತ್ತಿರುವ ಪರಿಣಾಮ ಬ್ರಿಮ್ಸ್ ಆಸ್ಪತ್ರೆ ವಿವಿಧ ವಾರ್ಡ್​ಗಳಲ್ಲಿ ಹೊಗೆ ಆವರಿಸಿಕೊಂಡಿತ್ತು. ಇಲ್ಲಿ ಏನಾಗುತ್ತಿದೆಯೋ ಎಂದು ರೋಗಿಗಳು ಹಾಗೂ ಸಂಬಂಧಿಕರು ಕೆಲಕಾಲ ಆತಂಕಗೊಂಡಿದ್ದರು. ಹೆಚ್ಚಿನ ಪ್ರಮಾಣದಲ್ಲಿ ಹೊಗೆ ಆವರಿಸಿಕೊಂಡ ವಾರ್ಡ್​ಗಳಲ್ಲಿನ ರೋಗಿಗಳಿಗೆ ಬೇರೆಡೆಗೆ ಶಿಫ್ಟ್​ ಮಾಡಲಾಯಿತು. ತಕ್ಷಣ ಅಗ್ನಿ ಶಾಮಕ ದಳ ಸ್ಥಳಕ್ಕೆ ಬಂದು ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಸ್ಥಳಕ್ಕೆ ಬ್ರಿಮ್ಸ್ ನಿರ್ದೇಶಕ ಡಾ.ಚಂದ್ರಕಾಂತ ಚಿಲ್ಲರ್ಗೆ ಭೇಟಿ ನೀಡಿ ಸುಟ್ಟು ಭಸ್ಮವಾದ ಬೆಡ್​ಗಳನ್ನು ಬೇರೆ ಕಡೆಗೆ ಸಾಗಿಸಲು ವ್ಯವಸ್ಥೆ ಮಾಡಿದರು. ಆಸ್ಪತ್ರೆಯಲ್ಲಿನ ಹಾಳಾದ ಬೆಡ್​ಗಳು ಬ್ರಿಮ್ಸ್ ಆವರಣದ ಒಂದು ಕಡೆ ಹಾಕಲಾಗಿತ್ತು. ಈ ಬೆಡ್ಗಳಿಗೆ ಆಕಸ್ಮಿಕವಾಗಿ ಬೆಂಕಿ ತಗಲಿದೆ. ಘಟನೆಯಿಂದ ಆಸ್ಪತ್ರೆ, ರೋಗಿ ಸೇರಿ ಇತರ ಆರ್ಥಿಕ ಹಾನಿಯಾಗಿಲ್ಲ ಎಂದು ಚಿಲ್ಲರ್ಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts